2023 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷದ ಉಚಿತ ಕೊಡುಗೆಗಳ ಭರವಸೆಗಳನ್ನು ಕರ್ನಾಟಕದ ವರುಣಾ ಕ್ಷೇತ್ರದ ಮತದಾರ ಕೆ. ಶಂಕರ್ ಸುಪ್ರೀಂಕೋರ್ಟ್ ಮೂಲಕ ಪ್ರಶ್ನಿಸಿದ್ದಾರೆ. ಹಾಗೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಯ್ಕೆಯನ್ನೂ ಸಹ ಪ್ರಶ್ನಿಸಿದ್ದಾರೆ. ಹೀಗಾಗಿ ಸುಪ್ರೀಂಕೋರ್ಟ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೋಟಿಸ್ ನೀಡಿದೆ.
ಪ್ರಣಾಳಿಕೆಯಲ್ಲಿನ ಭರವಸೆಗಳು ಚುನಾವಣೆಯ ಭ್ರಷ್ಟಾಚಾರಕ್ಕೆ ಕಾರಣವಾಗಬಹುದು ಹಾಗೂ “ಭ್ರಷ್ಟಾಚಾರ” ಎಂಬ ಜನತಾ ಪ್ರಾತಿನಿಧ್ಯ ಕಾಯ್ದೆ 1951 ರ ಅಡಿಯಲ್ಲಿ ನೀಡಿರುವ ವ್ಯಾಖ್ಯಾನಕ್ಕೆ ಮೀರುತ್ತವೆ ಎನ್ನಲಾಗಿದೆ.
ಸುಪ್ರೀಂ ಕೋರ್ಟ್ ಸೋಮವಾರದ ವಿಚಾರಣೆಯಲ್ಲಿ ನ್ಯಾ.ವಿಕ್ರಮ್ ನಾಥ್ ಮತ್ತು ನ್ಯಾ.ಸಂದೀಪ್ ಮೆಹ್ತಾ ಹಯಾಗ್ರಿವ ಅವರನ್ನೊಳಗೊಂಡ ಪೀಠವು ಸಿದ್ದರಾಮಯ್ಯ ಅವರಿಂದ ಈ ಆರೋಪಗಳ ಬಗ್ಗೆ ಸ್ಪಷ್ಟನೆ ಕೇಳಿದ್ದು, “ಪ್ರಣಾಳಿಕೆಯಲ್ಲಿ ಕೊಡುವ ಉಚಿತ ಭರವಸೆಗಳು ಭ್ರಷ್ಟಾಚಾರಕ್ಕೆ ಹೇಗೆ ಸಮಾನವಾಗಬಹುದು?” ಎಂಬ ಪ್ರಶ್ನೆ ಮಾಡಿದೆ.
2023 ರ ಚುನಾವಣಾ ಪ್ರಣಾಳಿಕೆಯು ಐದು ಪ್ರಮುಖ ಉಚಿತ ಕೊಡುಗೆಗಳ ಭರವಸೆಗಳನ್ನು ಒಳಗೊಂಡಿದ್ದು, ಈ ವರದಿ ಹೀಗಿದೆ:
ಗೃಹ ಜ್ಯೋತಿ: ಎಲ್ಲಾ ಮನೆಗಳಿಗೆ ೨೦೦ ಯೂನಿಟ್ ಉಚಿತ ವಿದ್ಯುತ್
ಗೃಹ ಲಕ್ಷ್ಮಿ: ಮಹಿಳಾ ಕುಟುಂಬ ಮುಖ್ಯಸ್ಥರಿಗೆ ₹೨,೦೦೦ ಮಾಸಿಕ
ಅನ್ನ ಭಾಗ್ಯ: ಬಿಪಿಎಲ್ ಕುಟುಂಬಗಳಿಗಾಗಿ ತಿಂಗಳಿಗೆ ೧೦ ಕೆಜಿ ಆಹಾರ ಧಾನ್ಯ
ಯುವ ನಿಧಿ: ನಿರುದ್ಯೋಗಿ ಪದವೀಧರಿಗೆ ₹೩,೦೦೦ ಮತ್ತು ಡಿಪ್ಲೊಮಾ ಹೋಲ್ಡರ್‌ಗಳಿಗಾಗಿ ₹೧,೫೦೦ ಮಾಸಿಕ ನೆರವು
ಶಕ್ತಿ: ರಾಜ್ಯ ಸಾರಿಗೆ ಬಸ್‌ನಲ್ಲಿ ಎಲ್ಲಾ ಮಹಿಳೆಯರಿಗೆ ಉಚಿತ ಪ್ರಯಾಣ
ಈ ಗ್ಯಾರಂಟಿ ಅಂಶಗಳ ವಿರುದ್ಧ ಅರ್ಜಿದಾರರು ಮುಖ್ಯಮಂತ್ರಿ ಸಿದ್ದರಾಮಯ್ಯ ಆಯ್ಕೆಯನ್ನು ಪ್ರಶ್ನಿಸಿದ್ದಾರೆ.
