Sunday, June 16, 2024

ಸತ್ಯ | ನ್ಯಾಯ |ಧರ್ಮ

ಹಮಾಸ್‌ ಮತ್ತು ರಷ್ಯಾ ಪ್ರಜಾಪ್ರಭುತ್ವಕ್ಕೆ ಮಾರಕ: ಅಮೇರಿಕಾ ಅಧ್ಯಕ್ಷ ಜೋ ಬಿಡೆನ್‌

ಬೆಂಗಳೂರು,ಅಕ್ಟೋಬರ್.‌20: ಹಮಾಸ್ ಮತ್ತು ರಷ್ಯಾ ಎರಡೂ ದೇಶಗಳೂ ಪ್ರಜಾಪ್ರಭುತ್ವವನ್ನು “ನಿರ್ಮೂಲನೆ” ಮಾಡಲು ಹೊರಟಿವೆ, ಅಮೇರಿಕಾ, ಉಕ್ರೇನ್ ಮತ್ತು ಇಸ್ರೇಲ್‌ಗೆ ನೆರವನ್ನು ನೀಡಿ ಎಂದು ಯುಎಸ್ ಅಧ್ಯಕ್ಷ ಜೋ ಬಿಡೆನ್ ಗುರುವಾರ ಓವಲ್ ಕಚೇರಿಯಿಂದ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾವೋದ್ರಿಕ್ತ ಭಾಷಣದಲ್ಲಿ‌ ಕೋರಿದ್ದಾರೆ.

ಹಮಾಸ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ “ಬೆದರಿಕೆಗಳನ್ನು ಪ್ರತಿನಿಧಿಸುತ್ತಾರೆ. ಇವರಿಬ್ಬರೂ ನೆರೆಯ ದೇಶಗಳ ಪ್ರಜಾಪ್ರಭುತ್ವವನ್ನು ಸಂಪೂರ್ಣವಾಗಿ ನಾಶಮಾಡಲು ಹೊರಟಿದ್ದಾರೆ” ಎಂದು ಬಿಡೆನ್  ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

“ಒಂದು ದೊಡ್ಡ ರಾಷ್ಟ್ರವಾಗಿ ನಮ್ಮ ಜವಾಬ್ದಾರಿಯಂತೆ ಕ್ಷುಲ್ಲಕ ಪಕ್ಷಪಾತದ, ದ್ವೇಷದ ರಾಜಕಾರಣವನ್ನು ನಾವು ಎಂದಿಗೂ ಸುಮ್ಮನೆ ಬಿಡಲಾರೆವು. ನಾವು ಹಮಾಸ್‌ನಂತಹ ಭಯೋತ್ಪಾದಕರು ಮತ್ತು ಪುಟಿನ್‌ನಂತಹ ನಿರಂಕುಶಾಧಿಕಾರಿಗಳನ್ನು ಗೆಲ್ಲಲು ಬಿಡುವುದಿಲ್ಲ,” ಎಂದು ಬಿಡೆನ್ ರಾಷ್ಟ್ರವನ್ನು ಉದ್ದೇಶಿಸಿ ಹೇಳಿದ್ದಾರೆ.

ಉಕ್ರೇನ್ ಮತ್ತು ಇಸ್ರೇಲ್‌ಗೆ ಸಹಾಯವಾಗಿ ಬೃಹತ್ ಹಣಕಾಸಿನ ನಿಧಿಯನ್ನು ಅನುಮೋದಿಸಲು ಶುಕ್ರವಾರ ಕಾಂಗ್ರೆಸ್‌ಗೆ ಮನವಿ ಮಾಡುವುದಾಗಿ ಹೇಳಿರುವ ಬಿಡೆನ್, “ಇದು ಜಾಗತಿಕ ನಾಯಕನಾಗಿ ನಾನು ಯುನೈಟೆಡ್ ಸ್ಟೇಟ್ಸ್‌ನ ಭವಿಷ್ಯಕ್ಕಾಗಿ ಮಾಡುವ ಹೂಡಿಕೆಯಾಗಿದೆ” ಎಂದು ತಿಳಿಸಿದ್ದಾರೆ.

“ಇದು ಅನೇಕ ತಲೆಮಾರುಗಳವರೆಗೆ ಅಮೇರಿಕನ್ನರ ಭದ್ರತೆಗಾಗಿ ಮಾಡುವ ಸ್ಮಾರ್ಟ್ ಹೂಡಿಕೆಯಾಗಿದೆ” ಎಂದು ಐತಿಹಾಸಿಕ ರೆಸಲ್ಯೂಟ್ ಡೆಸ್ಕ್‌ನಿಂದ ಮಾಡಿದ ಅಧ್ಯಕ್ಷೀಯ ಭಾಷಣದಲ್ಲಿ ಹೇಳಿದ್ದಾರೆ.

“ಅಮೆರಿಕನ್ ನಾಯಕತ್ವವು ಜಗತ್ತನ್ನು ಒಟ್ಟಿಗೆ ಹಿಡಿದಿಡಲು ಬಯಸುತ್ತದೆ. ಅಮೇರಿಕದ ಜೊತೆಗಿನ ಮೈತ್ರಿಗಳು ನಮ್ಮನ್ನು, ಅಮೇರಿಕಾವನ್ನು ಸುರಕ್ಷಿತವಾಗಿರಿಸುತ್ತವೆ. ಅಮೆರಿಕಾದ ಮೌಲ್ಯಗಳೇ ಇತರ ರಾಷ್ಟ್ರಗಳು ನಮ್ಮ ಜೊತೆಗೆ ಕೆಲಸ ಮಾಡುವಂತೆ ಮಾಡುತ್ತಿವೆ. ಅಮೇರಿಕಾ ಜಗತ್ತಿಗೆ ಎಂದೆಂದಿಗೂ ದಾರಿದೀಪವಾಗಿರುತ್ತದೆ” ಎಂದು ಅವರು ತಿಳಿಸಿದ್ದಾರೆ.

ಈ ವಾರ ಇಸ್ರೇಲ್‌ಗೆ ಪ್ರವಾಸ ಮಾಡಿದ್ದ ಬಿಡೆನ್, ತಮ್ಮ 2024 ರ ಮರುಚುನಾವಣೆಯನ್ನು ಗೆಲ್ಲುವ ಯುದ್ಧದಿಂದ  ದಣಿದಿರುವ ಮತದಾರರು ಮತ್ತು ರಿಪಬ್ಲಿಕನ್ನರನ್ನು ಗೆಲ್ಲಲು ಯೋಜನೆ ಹಾಕಿಕೊಳ್ಳುತ್ತಿದ್ದಾರೆ.

ಶ್ವೇತಭವನವು ಹಮಾಸ್‌ ವಿರುದ್ಧ ಇಸ್ರೇಲ್‌ಗೆ ಮತ್ತು ರಷ್ಯಾದ ಆಕ್ರಮಣದ ವಿರುದ್ಧದ ಉಕ್ರೇನ್‌ಗೆ ಯುದ್ಧ ನೆರವಾಗಿ 100 ಬಿಲಿಯನ್‌ ಡಾಲರ್ ಪ್ಯಾಕೇಜ್‌ ಘೋಷಿಸಲು ಕಾಂಗ್ರೆಸ್‌ಗೆ ವಿನಂತಿಯನ್ನು ಮಾಡುವುದಾಗಿ ತಿಳಿಸಿದ್ದಾರೆ.  

ಯುನೈಟೆಡ್ ಸ್ಟೇಟ್ಸ್‌ನಿಂದ ಸಾಗರ ದೂರದಲ್ಲಿರುವ ಎರಡೂ ಸಂಘರ್ಷಗಳನ್ನು ಒಂದಾಗಿ ಜೋಡಿಸಿ ಮತ್ತು  ಯುಎಸ್‌ನಲ್ಲಿ ಅಮೆರಿಕನ್ನರನ್ನು ಸುರಕ್ಷಿತನ್ನಾಗಿ ಇಡಲು ದೊಡ್ಡ ಹೋರಾಟದ ಭಾಗವಾಗಿ ಇದನ್ನು ರೂಪಿಸಲು ಬಿಡೆನ್  ಪ್ರಯತ್ನ ಪಡುತ್ತಿದ್ದಾರೆ.

ಅಮೇರಿಕಾ ಅಧ್ಯಕ್ಷರು ಸಾಂಪ್ರದಾಯಿಕವಾಗಿ ಓವಲ್ ಕಚೇರಿಯಿಂದ (solemn setting of the Oval Office) ಪ್ರಮುಖ ರಾಷ್ಟ್ರೀಯ ಮಹತ್ವದ ಭಾಷಣಗಳನ್ನು ಮಾತ್ರ ಮಾಡುತ್ತಾರೆ.

ಜೂನ್‌ನಲ್ಲಿ ಅಮೇರಿಕಾದ ಸಾಲ ಡೀಫಾಲ್ಟ್ ದುರಂತವನ್ನು ತಪ್ಪಿಸಲು ಕಾಂಗ್ರೆಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಾಗ ಇಲ್ಲಿಂದಲೇ ಭಾಷಣ ಮಾಡಿದ್ದರು.  

ಆದರೆ, ವೈಟ್‌ಹೌಸ್‌ನಲ್ಲಿ ಬಹುಮತವನ್ನು ನಿಯಂತ್ರಿಸುವ ವಿಭಜನೆಗೊಂಡಿರುವ ರಿಪಬ್ಲಿಕನ್ನರು ಹೌಸ್ ಸ್ಪೀಕರ್ ಅನ್ನು ಆಯ್ಕೆ ಮಾಡಲು ಪದೇ ಪದೇ ವಿಫಲರಾಗಿರುವುದರಿಂದ ಕಾಂಗ್ರೆಸ್ ಎರಡು ವಾರಗಳಿಗೂ ಹೆಚ್ಚು ಕಾಲ ನಿಷ್ಕ್ರಿಯವಾಗಿದೆ.

ಫೆಬ್ರವರಿ 2022 ರಲ್ಲಿ ಮಾಸ್ಕೋ ಉಕ್ರೇನ್‌ ಮೇಲೆ ದಾಳಿಯನ್ನು ಆರಂಭಿಸಿದಾಗಿನಿಂದ ಯುನೈಟೆಡ್ ಸ್ಟೇಟ್ಸ್ ಉಕ್ರೇನ್‌ಗೆ ನೀಡಲು ಹೊರಟಿರುವ 43.9 ಬಿಲಿಯನ್‌ ಡಾಲರ್ ಭದ್ರತಾ ನೆರವನ್ನು ಹೆಚ್ಚಿಸುವುದಕ್ಕೆ ರಿಪಬ್ಲಿಕನ್ನರು ಮತ್ತು ಸ್ವತಃ ಜನರೇ ವಿರೋಧಿಸಿದ್ದರು.

ಶುಕ್ರವಾರ, ವಿನಂತಿ ಮಾಡಲು ಹೊರಟಿರುವ ಪ್ಯಾಕೇಜ್‌ನಲ್ಲಿ ಇಸ್ರೇಲ್‌ಗೆ  10 ಬಿಲಿಯನ್ ಡಾಲರ್‌ ಮತ್ತು ಉಕ್ರೇನ್‌ಗೆ  60‌ ಬಿಲಿಯನ್ ಡಾಲರ್ ಹಣಕಾಸಿನ ನೆರವು ಇರುತ್ತದೆ ಎಂದು ಅಮೇರಿಕಾದ ಮಾಧ್ಯಮಗಳು ವರದಿ ಮಾಡಿವೆ.

ಈ ಭಾಷಣಕ್ಕೂ ಮೊದಲು ಬಿಡೆನ್ ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯೊಂದಿಗೆ ಮಾತುಕತೆ ನಡೆಸಿದ್ದರು.

ವೊಲೊಡಿಮಿರ್ ಝೆಲೆನ್ಸ್ಕಿ ಅಮೇರಿಕಾ ನೀಡಿದ ATACMS ಎಂಬ ಲಾಂಗ್-ರೇಂಜ್‌ ಕ್ಷಿಪಣಿಗಳಿಗೆ ಕೃತಜ್ಞತೆ ತಿಳಿಸಿದ್ದಾರೆ. “ಸ್ವಾತಂತ್ರ್ಯಕ್ಕಾಗಿ ಮತ್ತು ರಷ್ಯಾದ ಆಕ್ರಮಣದ ವಿರುದ್ಧದ ನಮ್ಮ ಹೋರಾಟಕ್ಕೆ ಅಮೇರಿಕಾ ನೀಡಿರುವ ಬೆಂಬಲಕ್ಕೆ ಉಕ್ರೇನ್ ಕೃತಜ್ಞವಾಗಿರುತ್ತದೆ,” ಎಂದು ಉಕ್ರೇನ್‌ನ ಅಧ್ಯಕ್ಷ ತಿಳಿಸಿದ್ದಾರೆ.

ಎಡಪಂಥೀಯ ಡೆಮೋಕ್ರಾಟ್‌ಗಳು ಬಿಡೆನ್ ನಿಲುವನ್ನು ವಿರೋಧಿಸಿದರೂ, ಅದೇ ಪಕ್ಷದ ಬಿಡೆನ್‌ ಮಾತ್ರ ಇಸ್ರೇಲ್‌ಗೆ ಬಲವಾದ ಬೆಂಬಲ ನೀಡುತ್ತಿರುವ ಅಮೇರಿಕಾ ಮತದಾರರ ಕಾರಣದಿಂದಾಗಿ ಇಸ್ರೇಲ್-ಹಮಾಸ್ ಯುದ್ಧದ ಮೇಲೆ ತಮ್ಮ ಪ್ರಭಾವವನ್ನು ಹೆಚ್ಚಿಸುವಲ್ಲಿ ತೊಡಗಿಸಿಕೊಂಡಿದ್ದಾರೆ.

ಬುಧವಾರ ಟೆಲ್ ಅವೀವ್‌ನಲ್ಲಿ ಮಾತನಾಡಿದ ಬಿಡೆನ್ ಇಸ್ರೇಲ್‌ಗೆ ಬೆಂಬಲ ಸೂಚಿಸಿ, ಅಕ್ಟೋಬರ್ 7 ರಂದು ಪ್ಯಾಲೇಸ್ಟಿನಿಯನ್ ಬಂಡುಕೋರ ಗುಂಪು ಹಮಾಸ್ ನಡೆಸಿದ ದಾಳಿಯಲ್ಲಿ 1,400 ಕ್ಕೂ ಹೆಚ್ಚು ಜನರನ್ನು ಹತರಾದ ನಂತರ ಗಾಜಾದ ಮೇಲೆ  ಆಕ್ರಮಣಕ್ಕೆ ಇಸ್ರೇಲ್‌ ಸಜ್ಜಾಗಿದೆ ಎಂದು ಹೇಳಿದ್ದರು.

ಆದರೆ, ಬಿಡೆನ್‌ ಈಜಿಪ್ಟ್ ಮೂಲಕ ಇಸ್ರೇಲಿ ಬಾಂಬ್ ದಾಳಿಯಿಂದ ಕನಿಷ್ಠ 3,785 ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿರುವ ಗಾಜಾ ಪಟ್ಟಿಗೆ ನೆರವು ನೀಡಲು ಒಪ್ಪಂದವನ್ನು ಮಾಡಿಕೊಂಡಿದ್ದರು.

ವಿಶಾಲವಾದ ಮಧ್ಯಪ್ರಾಚ್ಯದ ಈ ಸಂಘರ್ಷದ ಮಧ್ಯೆ ಅಮೇರಿಕಾ ಒಳಗೊಳಗಿನ ಅಟಗಳನ್ನು ಆಡುತ್ತಿದೆ. ಹಮಾಸ್‌ನ ಮಿತ್ರರಾಷ್ಟ್ರಗಳಾದ ಇರಾನ್ ಮತ್ತು ಲೆಬನಾನ್‌ನ ಹಿಜ್ಬುಲ್ಲಾವನ್ನು ತಡೆಯಲು  ಯುನೈಟೆಡ್ ಸ್ಟೇಟ್ಸ್ ಈಗಾಗಲೇ ಎರಡು ಯುದ್ಧನೌಕೆಗಳನ್ನು ಪೂರ್ವ ಮೆಡಿಟರೇನಿಯನ್‌ಗೆ ಸ್ಥಳಾಂತರಿಸಿದೆ

Related Articles

ಇತ್ತೀಚಿನ ಸುದ್ದಿಗಳು