Home ರಾಜ್ಯ ಹಂಪಿ ವಿವಿ- ಅಹೋರಾತ್ರಿ ಧರಣಿಯ ವೇಳೆ ವಿದ್ಯಾರ್ಥಿಯ ಆರೋಗ್ಯದಲ್ಲಿ ಏರುಪೇರು : ಆಸ್ಪತ್ರೆಗೆ ದಾಖಲು

ಹಂಪಿ ವಿವಿ- ಅಹೋರಾತ್ರಿ ಧರಣಿಯ ವೇಳೆ ವಿದ್ಯಾರ್ಥಿಯ ಆರೋಗ್ಯದಲ್ಲಿ ಏರುಪೇರು : ಆಸ್ಪತ್ರೆಗೆ ದಾಖಲು

0

ಹೊಸಪೇಟೆ: ಪರಿಶಿಷ್ಟ ಜಾತಿ, ಪಂಗಡದ ಸಂಶೋಧನಾರ್ಥಿಗಳ ಬಾಕಿ ಇರುವ 47 ತಿಂಗಳ ಫೆಲೋಶಿಪ್ ನೀಡುವಂತೆ ಒತ್ತಾಯಿಸಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಅಹೋರಾತ್ರಿ ಧರಣಿ ನಡೆಸುತಿದ್ದು, ಧರಣಿಯ ವೇಳೆ ವಿದ್ಯಾರ್ಥಿಯೊಬ್ಬರಿಗೆ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಸೋಮವಾರ ಮದ್ಯರಾತ್ರಿ ನಡೆದಿದೆ.

ಹಂಪಿ ವಿಶ್ವಾವಿದ್ಯಾಯದ ಸಂಶೋಧನಾ ವಿದ್ಯಾರ್ಥಿಗಳು ಹಲವಾರು ತಿಂಗಳುಗಳಿಂದ ಬಾಕಿ ಇರುವ ಸಹಾಯಧನವನ್ನು ನೀಡುವಂತೆ ಒತ್ತಾಯಿಸಿ ಭಾನುವಾರದಿಂದ ಅಹೋರಾತ್ರಿ ಧರಣಿ ಕೈಗೊಂಡಿದ್ದು, ಹೀಗಾಗಿ ಸೋಮವಾರ ರಾತ್ರಿ ಚಳಿಗೆ ಎರಿಸ್ವಾಮಿ ಎಂಬ ಸಂಶೋಧನ ವಿಧ್ಯಾರ್ಥಿಗೆ ಎದೆನೋವು ಕಾಣಿಸಿಕೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಳಲಿಸಲಾಗಿದೆ ಎಂದು ಅಲ್ಲಿನ ವಿದ್ಯಾರ್ಥಿಗಳು ತಿಳಿಸಿದ್ದಾರೆ.

ಮೂರನೇ ದಿನದ ಧರಣಿ ಕುರಿತು ʼಪೀಪಲ್‌ ಮೀಡಿಯಾʼದೊಂದಿಗೆ ಮಾತನಾಡಿದ ಸಂಶೋಧನಾ ವಿದ್ಯಾರ್ಥಿ  ದೇವೇಂದ್ರರವರು, ಎಸ್‌ಸಿ/ಎಸ್‌ಟಿ ಸಂಶೋಧನಾರ್ಥಿಗಳ ಬಾಕಿ ಇರುವ 47 ತಿಂಗಳ ಫೆಲೋಶಿಪ್ ನೀಡುವಂತೆ ಒತ್ತಾಯಿಸಿ ಅಹೋರಾತ್ರಿ ಧರಣಿ ಹಮ್ಮಿಕೊಂಡು ಇಂದಿಗೆ ಮೂರನೇ ದಿನಕ್ಕೆ ಕಾಲಿಟ್ಟಿದ್ದೇವೆ. ಧರಣಿಗೆ ಕೂತಿದ್ದ ಸಂಶೋಧನ ವಿದ್ಯಾರ್ಥಿ ಎರಿಸ್ವಾಮಿ ಎಂಬಾತನಿಗೆ ಸೋಮವಾರ ರಾತ್ರಿ ಚಳಿ ಇರುವ ಕಾರಣ ಎದೆ ನೋವು ಕಾಣಿಸಿಕೊಂಡಿದ್ದು, ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಈ ಹಿನ್ನೆಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಚರ್ಚೆ ನಡೆಸಿ, ಮಾಧ್ಯಮ ಮಿತ್ರರನ್ನು ಭೇಟಿ ಮಾಡಿ ಸಹಾಯ ಕೋರಲಾಯಿತು. ಹೀಗಾಗಿ ಮಾಧ್ಯಮ ಮಿತ್ರರು ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿಮಾಡಿದಾಗ, ಅವರು ವಿದ್ಯಾರ್ಥಿಗಳ ಸಹಾಯಧನವು ಕಾಮಗಾರಿಗೆ ಬಂದಿದೆ ಎನ್ನುವ ಮಾಹಿತಿ ನೀಡಿದರು ಎಂದು ತಿಳಿಸಿದ್ದಾರೆ. ಇದಕ್ಕೆ ಸಂಬಂಧ ಪಟ್ಟಂತೆ ಹಾಗೂ ಸರ್ಕಾರವು ಆದೇಶ ಪತ್ರದಲ್ಲಿ ತಿಳಿಸಿರುವಂತೆ. 11,89 ಕೋಟಿ ಹಣ ಬಿಡುಗಡೆಯಾಗಿರುವ ಹಣ ಮತ್ತು 3,42 ಕೋಟಿ ಹಾಗೂ 1,17 ಕೋಟಿ ರೂ. ಲ್ಯಾಪ್‌ಟಾಪ್‌, ಶಿಷ್ಯವೇತನ, ಎಲ್ಲವನ್ನು ಸೇರಿ ಒಟ್ಟು 15 ಕೋಟಿ ಹಣವನ್ನು ಬಿಡುಗಡೆ ಮಾಡಿದೆ. ಆದರೂ ಕೂಡ ಕುಲಪತಿಗಳು ವಿದ್ಯಾರ್ಥಿಗಳ ಮನವಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮುಂದುವರೆದು ಮಾತನಾಡಿದ ಅವರು 21 ನವೆಂಬರ್‌ 2022 ರಂದು ಮುಖ್ಯಮಂತ್ರಿಗಳ ಆದೇಶದಂತೆ, ಸರ್ಕಾರ ಬಿಡುಗಡೆ ಮಾಡಿರುವ 11,89 ಕೋಟಿ ರೂ. ಹಣವನ್ನು ವಿದ್ಯಾರ್ಥಿಗಳ ಶಿಷ್ಯವೇತನಕ್ಕೆ ಕೊಡಿ ಎಂದು ತಿಳಿಸಿದ್ದರೂ ಕೂಡ, ಕುಲಪತಿಗಳು ಆ ಹಣವನ್ನು ವಿಶ್ವವಿದ್ಯಾಲಯದ ಕಾಮಗಾರಿಗೆ ಬಲಸಲಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿವಿಯ ಸಂಶೋಧನಾ ವಿದ್ಯಾರ್ಥಿಯೊಬ್ಬರು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ್ದಾಗ, ಬಸವರಾಜ ಬೊಮ್ಮಾಯಿಯವರು ʼನಾನು ಯಾವ ಆದೇಶವನ್ನು ಹಿಂಪಡೆದಿಲ್ಲ ಆ ಹಣವನ್ನು ಶಿಷ್ಯವೇತನಕ್ಕೆ ನೀಡಿರುವುದಾಗಿ  ತಿಳಿಸಿದ್ದೇನೆʼ ಎಂದು ಹೇಳಿದ್ದಾರೆ. ಆದರೆ ಇಲ್ಲಿನ ಕುಲಪತಿಗಳು ವಿದ್ಯಾರ್ಥಿಗಳಿಗೆ ಶಿಷ್ಯವೇತನವನ್ನು ಕೊಡುವ ಯಾವುದೇ ಗಟ್ಟಿ ನಿರ್ಧಾರವನ್ನು ಕೈಗೊಳ್ಳತ್ತಿಲ್ಲ ಹಾಗೂ ಹಣ ನೀಡುವ ಭರವಸೆಯನ್ನು ಸಹ ಕೊಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿನ ಸಂಶೋಧನಾ ವಿದ್ಯಾರ್ಥಿಗಳು ನಾಲ್ಕು ವರ್ಷಗಳಿಂದ, ವಿಶ್ವವಿದ್ಯಾಲಯಕ್ಕೆ ಯಾವುದೇ, ಹಾನಿ, ಗೌರವ ಕಡೆಸುವಂತಹ ಕೆಲಸಗಳನ್ನು ಮಾಡದೆ, ಶಾಂತಿಯುತವಾಗಿ ಮನವಿ, ಪ್ರತಿಭಟನೆ ಮಾಡಿದರೂ ಯಾವುದೇ ಸ್ಪಂದನೆ ದೊರತಿಲ್ಲ. ಹೀಗಾಗಿ ಈ ಬಾರಿ ಇದಕ್ಕೆ ಒಂದು ಪರಿಹಾರ ನೀಡುವವರೆಗೂ ಮೌನವಾಗಿಯೇ ಪ್ರತಿಭಟನೆ ಮುಂದುವರೆಸುತ್ತೇವೆ ಎಂದರು.

ಧರಣಿ ಕೈಗೊಂಡಬಳಿಕ , ವಿಶ್ವವಿದ್ಯಾಲಯದ ಕುಲಪತಿಗಳಾದ ಸ.ಚಿ.ರಮೇಶ್‌ ರವರು ಏನು ಪತ್ರಿಕ್ರಿಯೆ ನೀಡಿದರು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕುಲಪತಿಗಳಿಂದ ಇನ್ನೂ ಯಾವುದೇ ರೀತಿಯ ಸ್ಪಂದನೆ ನೀಡುತ್ತಿಲ್ಲ ಎಂದು ತಿಳಿಸಿದರು.   

You cannot copy content of this page

Exit mobile version