Home ಅಪರಾಧ ಅವನನ್ನು ನೇಣಿಗೇರಿಸಿ! ಕೋಲ್ಕತ್ತಾ ಪ್ರಕರಣದ ಆರೋಪಿಯ ಅತ್ತೆ ಆಗ್ರಹ

ಅವನನ್ನು ನೇಣಿಗೇರಿಸಿ! ಕೋಲ್ಕತ್ತಾ ಪ್ರಕರಣದ ಆರೋಪಿಯ ಅತ್ತೆ ಆಗ್ರಹ

0

ಕೋಲ್ಕತ್ತಾದಲ್ಲಿ ವೈದ್ಯರೊಬ್ಬರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣ ದೇಶಾದ್ಯಂತ ಪ್ರತಿಭಟನೆಗೆ ಕಾರಣವಾಗಿತ್ತು. ಈ ಘಟನೆಯಲ್ಲಿ ಆರೋಪಿಯಾಗಿರುವ ಸಂಜಯ್ ರಾಯ್ ಗೆ ಕಠಿಣ ಶಿಕ್ಷೆಯಾಗಬೇಕು ಎಂಬ ಬೇಡಿಕೆಗಳು ಹರಿದು ಬರುತ್ತಿವೆ.

ಈ ನಡುವೆ ಆರೋಪಿಯ ಬದುಕಿನ ಮತ್ತೊಂದು ಮಗ್ಗುಲು ಬೆಳಕಿಗೆ ಬಂದಿದೆ. ಆರೋಪಿ ಅತ್ತೆ ದುರ್ಗಾದೇವಿ ತಮ್ಮ ಮಗಳು ಮತ್ತು ಅಳಿಯನ ನಡುವೆ ಉತ್ತಮ ಸಂಬಂಧ ಇರಲಿಲ್ಲ ಎಂದು ಹೇಳಿದ್ದಾರೆ. ಸ್ವಲ್ಪ ಸಮಯದ ಹಿಂದೆ ಅವನು ತನ್ನ ಹೆಂಡತಿಯ ಮೇಲೆ ಕೈ ಮಾಡಿದ್ದ ಮತ್ತು ಇದರ ಪರಿಣಾಮವಾಗಿ ಅವಳಿಗೆ ಗರ್ಭಪಾತವಾಯಿತು ಎಂದು ಅವರು ಆರೋಪಿಸಿದ್ದಾರೆ.

ಅವನ ಅಪರಾಧದ ಬಗ್ಗೆ ನಾನು ಮಾತನಾಡಲಾರೆ. ಇಂತಹ ಅಪರಾಧ ಎಸಗಬಲ್ಲವರು ಅವನಂತೆಯೇ ಬಹಳ ಮಂದಿ ಇದ್ದಾರೆ. ನನ್ನಮಗಳ ಜೊತೆಗೆ ಅವನಿಗೆ ಎರಡು ವರ್ಷಗಳ ಕೆಳಗೆ ಮದುವೆಯಾಗಿತ್ತು ಎಂದು ಅವರು ಹೇಳಿದ್ದಾರೆ.

ನನ್ನ ಮಗಳು ಅವನಿಗೆ ಎರಡನೇ ಹೆಂಡತಿ. ಮದುವೆಯಾದ ಮೊದಲ ಆರು ತಿಂಗಳು ಚೆನ್ನಾಗಿಯೇ ಇದ್ದರು. ನನ್ನ ಮಗಳು ಗರ್ಭಿಣಿಯಾದಾಗ ಜಗಳ ಪ್ರಾರಂಭವಾಯಿತು. ಮೂರು ತಿಂಗಳ ಗರ್ಭಿಣಿಯಾಗಿದ್ದಾಗ ನನ್ನ ಮಗಳನ್ನು ಮಗಳನ್ನು ಅವನು ಹೊಡೆದಿದ್ದ. ನಂತರ ಆಕೆ ಗರ್ಭಪಾತ ಮಾಡಿಸಿಕೊಂಡಿದ್ದಳು. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನೂ ದಾಖಲಿಸಿದ್ದೇವೆ ಎಂದು ದುರ್ಗಾದೇವಿ ಮಾಧ್ಯಮಗಳಿಗೆ ವಿವರಿಸಿದರು.

You cannot copy content of this page

Exit mobile version