Home ರಾಜ್ಯ ಚಾಮರಾಜನಗರ ಹನೂರು : ಈಜಲು ತೆರಳಿದ್ದಾಗ ನೀರಿನಲ್ಲಿ ಮುಳುಗಿ 16 ವರ್ಷದ ಯುವಕ ದುರ್ಮರಣ

ಹನೂರು : ಈಜಲು ತೆರಳಿದ್ದಾಗ ನೀರಿನಲ್ಲಿ ಮುಳುಗಿ 16 ವರ್ಷದ ಯುವಕ ದುರ್ಮರಣ

0

ಹನೂರು : ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೂದು ಬಾಳು ಗುಂಡಾಪುರ ಸಮೀಪದಲ್ಲಿರುವ ಚೆಕ್ ಡ್ಯಾಮ್ ಒಂದರಲ್ಲಿ ಸ್ನೇಹಿತರ ಜೊತೆ ಈಜಲು ತೆರಳಿದ್ದ 16 ವರ್ಷದ ಯುವಕನೋರ್ವ ನೀರಿನಲ್ಲಿ ಮುಳುಗಿ ಸಾವನಪ್ಪಿದ್ದಾನೆ.ಮೃತ ಯುವಕ 16 ವರ್ಷದ ಇಂದ್ರ ನಂಜನಗೂಡು ತಾಲೂಕಿನ ಪಿ ಮರಳ್ಳಿ ಗ್ರಾಮದವನು ಎಂದು ತಿಳಿದುಬಂದಿದೆ.ಮೈಸೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ಯುವಕ ಸ್ನೇಹಿತರ ಜೊತೆ ಹನೂರು ತಾಲೂಕಿನ ಮಂಗಲ ಗ್ರಾಮಕ್ಕೆ ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಬಂದಿದ್ದ ವೇಳೆ ನಾಲ್ವರು ಸ್ನೇಹಿತರ ಜೊತೆ ಈಜಲು ತೆರಳಿದ್ದಾಗ ಈ ದಾರುಣ ಘಟನೆ ಸಂಭವಿಸಿದೆ.

ಚೆಕ್ ಡ್ಯಾಮ್ ತುಂಬಾ ಆಳವಾಗಿದ್ದು ಡ್ಯಾಮ್ ನ ಕಲ್ಲುಗಳನ್ನು ಕಿತ್ತು ನೀರನ್ನು ಹೊರ ಹಾಕಿ ನಂತರ ಮೃತ ದೇಹವನ್ನು ಹನೂರು ಅಗ್ನಿ ಶಾಮಕ ಸಿಬ್ಬಂದಿಗಳು ಹಾಗೂ ಸ್ಥಳೀಯರ ಸಹಾಯದಿಂದ ಒಂದು ಗಂಟೆಗಳ ಕಾರ್ಯಾಚರಣೆಯ ನಂತರ ಹೊರ ತೆಗೆಯಲಾಯಿತು.

ಸ್ಥಳಕ್ಕೆ ಹನೂರು ಪೊಲೀಸ್ ಠಾಣಿಯ ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡು ಮೃತ ದೇಹವನ್ನು ಹನೂರು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು ಶವ ಪರೀಕ್ಷೆ ನಂತರ ಶವವನ್ನು ಕುಟುಂಬಸ್ತರಿಗೆ ಹಸ್ತಾಂತರ ಮಾಡಲಾಯಿತು.ಮೃತ ಯುವಕನ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

ವರದಿ : ನಾಗೇಂದ್ರ ಪ್ರಸಾದ್‌, ಹನೂರು ತಾಲೂಕು

You cannot copy content of this page

Exit mobile version