Home ಅಂಕಣ ಹಾಸನ ಕಾಂಗ್ರೆಸ್ ಮುಸ್ಲಿಮರಿಗೆ ಚೊಂಬೆ “ಶ್ರೇಯಸ್ಸು”

ಹಾಸನ ಕಾಂಗ್ರೆಸ್ ಮುಸ್ಲಿಮರಿಗೆ ಚೊಂಬೆ “ಶ್ರೇಯಸ್ಸು”

0

ಕೊಟ್ಟ ಆಶ್ವಾಸನೆಗಳನ್ನು ಪೂರೈಸುತ್ತೇವೆ ಎಂಬ ಮಾತುಗಳನ್ನು ಹೇಳುತ್ತ, ಕಾಂಗ್ರೆಸ್ ನಾಯಕರು ಮುಸ್ಲಿಂ ಸಮುದಾಯದ ಪ್ರಮುಖರನ್ನು ಮನೆಗೆ ಕರೆಯುತ್ತಾರೆ. ಆದರೆ, ಅಲ್ಲಿನ ವಾಸ್ತವ ಸ್ಥಿತಿ ಬೇರೆ. ಮುಸ್ಲಿಂ ಮುಖಂಡರ ಹಕ್ಕುಗಳ ನಿರ್ಲಕ್ಷ್ಯ?ಪುಕ್ಕಟೆ ಭಾಗ್ಯಗಳು: ಅವಮಾನ, ಆಶ್ವಾಸನೆ, ನಿರ್ಲಕ್ಷ್ಯ, ನಿರಾಶೆ… ಲೇಖಕ ಮಲ್ನಾಡ್ ಮೆಹಬೂಬ್ ಬರಹದಲ್ಲಿ

ಹಾಸನ: ಜಿಲ್ಲೆಯ ಕಾಂಗ್ರೆಸ್ ಪಕ್ಷದ ಪ್ರಮುಖ ಮುಖಂಡರು, ಮುಸ್ಲಿಂ ಪಕ್ಷದ ಪ್ರಮುಖರಿಗೆ ನೀಡಲಾದ ಆಶ್ವಾಸನೆಗಳನ್ನು ಕೈಗೂಡಿಸಲು ವಿಫಲವಾಗಿದ್ದಾರೆ ಎಂಬ ಗಂಭೀರ ಅರೋಪ ವ್ಯಾಪಕವಾಗಿ ವ್ಯಕ್ತವಾಗುತ್ತಿದೆ.

ಮುಸ್ಲಿಂ ಸಮುದಾಯವು ಶ್ರದ್ಧೆ ಮತ್ತು ನಿಷ್ಠೆಯಿಂದ ಚುನಾವಣೆಯಾದ್ಯಂತ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿರುವುದಾದರೂ, ತಮ್ಮ ಹಕ್ಕುಗಳು ಮತ್ತು ಗೌರವವನ್ನು ಪಡೆಯಲು ನಿರ್ಲಕ್ಷ್ಯವಾಗಿದೆ ಎಂಬ ಅಸಮಾಧಾನ ವ್ಯಕ್ತವಾಗಿದೆ.

ದಶಕಗಳಿಂದ ಕಾಂಗ್ರೆಸ್ ಪಕ್ಷದ ಮೇಲೆ ನಂಬಿಕೆ ಇಟ್ಟುಕೊಂಡಿರುವ ಮುಸ್ಲಿಂ ಕಾರ್ಯಕರ್ತರಿಗೆ ಪಕ್ಷ ಉನ್ನತ ಹುದ್ದೆ ಹಾಗೂ ಇತರೆ ಸ್ಥಾನ ನೀಡುವ ಭರವಸೆ ಈಡೇರಿಸಲಾಗುತ್ತಿಲ್ಲ. ಹಲವಾರು ಮುಸ್ಲಿಂ ಮುಖಂಡರು ತಮ್ಮ ಮತದಾರರಿಗೆ ನೀಡಿರುವ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲ, ಪಕ್ಷದ ಪ್ರಮುಖ ನಾಯಕರೊಂದಿಗೆ ನಿಖರವಾದ ಸಂಪರ್ಕ ಹಾಗೂ ಸಂವಾದಗಳ ಕೊರತೆಯಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಹಾಸನ ಜಿಲ್ಲಾ ಮುಸ್ಲಿಂ ಅನೇಕ ಹಿರಿಯ ಕಾರ್ಯಕರ್ತರು ಪತ್ರಿಕೆಯೊಂದಿಗೆ ಮಾತನಾಡುತ್ತಾ, “ನಾವು ಹಲವು ಬಾರಿ ಪಕ್ಷದ ನಾಯಕರಿಗೆ ತಮ್ಮ ಹಕ್ಕುಗಳನ್ನು ಒತ್ತಿಹೇಳಿದ್ದೇವೆ. ಆದರೆ ಅವರು ಯಾವುದೇ ಸ್ಪಷ್ಟವಾದ ಉತ್ತರವನ್ನು ನೀಡುವುದಿಲ್ಲ. ನಾವು ನಮ್ಮ ಹಕ್ಕುಗಳನ್ನು ಪಡೆಯಲು ಮುಂದಾಗುತ್ತೇವೆ” ಇದಕ್ಕಾಗಿ ಅಗತ್ಯ ಹಾಗೂ ವಿಭಿನ್ನವಾದ ಮಾರ್ಗ ಅನುಸರಿಸುವುದಾಗಿ ಹೇಳಿದರು.

ಹಾಸನದ ಮುಸ್ಲಿಂ ಸಮುದಾಯ ಹಾಗೂ ಮುಸ್ಲಿಂ ಮತದಾರರ ನಡುವೆ ಕಳವಳ ಉಂಟಾಗುತ್ತಿದೆ. ಮತದಾರರು ಪಕ್ಷದ ಮೇಲಿನ ನಂಬಿಕೆಯನ್ನು ಕಳೆದುಕೊಂಡರೆ, ಮುಂದಿನ ಚುನಾವಣೆಯಲ್ಲಿ ಈ ಪ್ರಭಾವ ಉಂಟಾಗಬಹುದು ಎಂಬ ಕಾರಣದಿಂದ ಮುಸ್ಲಿಂ ಮುಖಂಡರು ಸಂಘಟಿತವಾಗಿ ಪಕ್ಷದ ಪರವಾಗಿ ನಿಂತಿದ್ದಾರೆ.

ನಾಯಕರ
ಮನೆಯಲ್ಲೂ ಮರ್ಯಾದೆ ಇಲ್ಲ:

ಕೊಟ್ಟ ಆಶ್ವಾಸನೆಗಳನ್ನು ಪೂರೈಸುತ್ತೇವೆ ಎಂಬ ಮಾತುಗಳನ್ನು ಹೇಳುತ್ತ, ಕಾಂಗ್ರೆಸ್ ನಾಯಕರು ಮುಸ್ಲಿಂ ಸಮುದಾಯದ ಪ್ರಮುಖರನ್ನು ಮನೆಗೆ ಕರೆಯುತ್ತಾರೆ. ಆದರೆ, ಅಲ್ಲಿನ ವಾಸ್ತವ ಸ್ಥಿತಿ ಬೇರೆ. ಅವರು ದಯವಿಟ್ಟು ಒಳಬನ್ನಿ ಎಂದು ಹೇಳುವ ಬದಲು, ಹತಾಶೆಯ ಸಂಕೇತವಾಗಿ ಕಾರು ಹತ್ತಿ ನಾಯಕರು ಹೊರಗಡೆ ಹೋಗುತ್ತಾರೆ. ನೀವು ಇಲ್ಲೆ ಕುಳಿತಿರಿ ಎಂದು ಕೆಲ ಒಮ್ಮೆ ಹೇಳಿ ಹೋಗುತ್ತಾರೆ. ಮನೆಯ ಹೆಂಗಸರು ಕೂಡಾ ಈ ಮುಖಂಡರ ಜತೆ ಮಾತಾಡಲು ಮುಂದಾಗುವುದಿಲ್ಲ.

ಮನೆಗೆ ಬಂದ ವ್ಯಕ್ತಿಗಳ ಆತಿಥ್ಯ ಕೂಡಾ ಸಮರ್ಪಕವಾಗಿರುವುದಿಲ್ಲ, ಕೆಲಸದವರು ಮುರಿಯದೆ ಕಾಫಿ ಕೊಡುತ್ತಾರೆ. ಆದರೆ, ಈ ಮುಸ್ಲಿಂ ಮುಖಂಡರು ಗಂಟೆಗಟ್ಟಲೆ ಕಾಫಿ ಹಿಡಿದು ಕುಳಿತುಕೊಳ್ಳುತ್ತಾರೆ, ಆದರೆ ಯಾವೊಬ್ಬರೂ ಅವರ ವಿಚಾರವನ್ನು ಕೇಳುವುದಿಲ್ಲ. ಸಮಯ ಕಳೆಯುತ್ತಾರೆ. ತಮ್ಮ ಕಾಳಜಿ, ಮಾನಸಿಕ ಭಾವನೆಗಳೆಲ್ಲ ಒಡೆದುಹೋಗುತ್ತವೆ. ದಾರಿಯುದ್ದಕ್ಕೂ, ತಮ್ಮ ಸ್ವಾಭಿಮಾನವನ್ನು ತಾವೇ ಪ್ರಶ್ನಿಸುತ್ತಾ, ನಿರಾಶೆಯೊಂದಿಗೆ ಮನೆಗೆ ತೆರಳುತ್ತಾರೆ.

ಅವಮಾನ, ನಿರ್ಲಕ್ಷ್ಯ, ನಿರಾಶೆ, ಆಶ್ವಾಸನೆ, ಮುಸ್ಲಿಂ ಮುಖಂಡರಿಗೆ ಕಾಂಗ್ರೆಸ್ ನಾಯಕರಿಂದ ಪುಕ್ಕಟೆ ಭಾಗ್ಯ ವಾಗಿ ಸಿಗುತ್ತಿದೆ.

ವಿಧಾನಸೌಧ ಮತ್ತು ವಿಕಾಸ ಸೌದದಲ್ಲೊ ಇವರ ಗೋಳು ಕೇಳುವವರಿಲ್ಲ:
ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಸಿಕೊಳ್ಳಲು ವಿಧಾನಸೌಧ ಅಥವಾ ವಿಕಾಸಸುವುದಕ್ಕೆ ಹೇಳುವಂತೆಯೂ ಇಲ್ಲ ಇದನ್ನು ಕೇಳುವವರು ಯಾರು ಇಲ್ಲ. ಜನರ ಆಶ್ವಾಸನೆಗಳ ಈಡೇರಿಸಲು ಬೆಂಗಳೂರಿಗೆ ಕಾರು ಹತ್ತಿ ತೆರಳುವ ಮುಸ್ಲಿಂ ಮುಖಂಡರು ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಲಾಗದೆ ನಿತ್ಯ ಅಲೆಯುತ್ತಾರೆ ಒಂದು ಸಹಿ ಮಾಡಿಸಿಕೊಳ್ಳಲು ಅಥವಾ ಸಂಬಂಧ ಪಟ್ಟ ಅಧಿಕಾರಿಗೆ ಒಂದು ಫೋನ್ ಮಾಡಿಸಿಕೊಳ್ಳಲು ನಡೆಯುವ ಪ್ರಯತ್ನ ಸರ್ಕಸ್ ಕಂಪನಿಯಲ್ಲಿ ಇರುತ್ತದೆ.

ಈ ಸಂಕಷ್ಟವನ್ನು ಯಾರ ಬಳಿಯೂ ಹೇಳಿಕೊಳ್ಳಲಾಗದೆ ನೊಂದು ಹೋಗಿದ್ದಾರೆ ಪ್ರಮುಖ ಮುಸ್ಲಿಂ ಕಾರ್ಯಕರ್ತರು.

ಒಂದಂತೂ ಸತ್ಯ.. ಹಾಸನ ಜಿಲ್ಲೆ ಅನೇಕ ಕಾಂಗ್ರೆಸ್ ಹಿರಿಯ ರಾಜಕಾರಣಿಗಳನ್ನು ನೋಡಿದೆ ಶ್ರೀಕಂಠಯ್ಯ ಪುಟ್ಟಸ್ವಾಮಿಗೌಡ ಇವರಲ್ಲಿ ಪ್ರಮುಖರು. ಹನುಮೇಗೌಡರು ಸಹ ಕಡಿಮೆಯನಲ್ಲ ಎಲ್ಲುವುದಕ್ಕೂ ಒಂದು ರಾಜಕೀಯ ಅಂತ್ಯ ಎಂಬುದು ಇದ್ದೇ ಇರುತ್ತದೆ.

ಹಾಸನ ಜಿಲ್ಲೆಯ ಮುಸ್ಲಿಮರು ಕಾಂಗ್ರೆಸ್ ಪಕ್ಷವನ್ನು ಯಾವುದೇ ಕಾರಣಕ್ಕೂ ಕೈಬಿಡುವುದಿಲ್ಲ ನಾವು ಪಕ್ಷದ ಪರವಾಗಿ ಇದ್ದೆ ಇರುತ್ತೇವೆ ಎಂದು ಹೇಳುತ್ತಾರೆ. ಆದರೆ ಹಾಲಿ ಕಾಂಗ್ರೆಸ್ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗಳ ಬಗ್ಗೆ ಬಹಳಷ್ಟು ಆಕ್ರೋಶ ಮನದ ಒಳಗೆ ಕುದಿಯುತ್ತಿದೆ. ಯಾವುದೇ ಕಾರಣಕ್ಕೂ ಇವರುಗಳನ್ನು ಮುಸ್ಲಿಂ ಮುಖಂಡರು ಮಾನಸಿಕವಾಗಿ ಬೆಂಬಲಿಸುತ್ತಿಲ್ಲ. ಈಗ ತಾಂತ್ರಿಕವಾಗಿ ಹುದ್ದೆಯ ಮಜಾ ಅನುಭವಿಸುತ್ತಿರುವ ವ್ಯಕ್ತಿಗಳನ್ನು ಮುಂದೆ ಬದಲಾವಣೆಗೆ ಸಂಘಟಿತವಾಗಿ ಪ್ರಯತ್ನ ಮಾಡುತ್ತಾರೆ.‌

ಇದನ್ನಾದರೂ ಅರಿತು ಕಾಂಗ್ರೆಸ್ ಮುಖಂಡರು ರಾಜಕೀಯವಾಗಿ ಶಕ್ತಿ ಕಳೆದುಕೊಂಡಿರುವ ಮುಸ್ಲಿಂ ಸಮುದಾಯಕ್ಕೆ ಶಕ್ತಿ ನೀಡುವ ಕೆಲಸಕ್ಕೆ ಮುಂದಾಗಬೇಕು. ಒಂದು ಉನ್ನತ ಹುದ್ದೆಯನ್ನು ಕೊಡುವ ಮೂಲಕ ಆ ಸಮುದಾಯದ ಕೆಲಸವನ್ನು ಸುಗಮವಾಗಿ ಮುಸ್ಲಿಂ ಮಾಡಿಕೊಳ್ಳಲು ಸಹಾಯ ಮಾಡಬೇಕು.

“ನಮ್ಮ ಕೈಗಳಿಗೆ ಚೊಂಬು ನೀಡುತ್ತಿರುವ ಕೈಗಳು ಮುಂದಿನ ಚುನಾವಣೆಯಲ್ಲಿ ಬ್ಯಾಲೇಟ್ ಮಿಶನ್‌ನಲ್ಲಿ ಇರುವುದಿಲ್ಲ. ಈ ಕೈಗಳನ್ನು ಬದಲಾವಣೆ ಮಾಡುವ ಶಕ್ತಿ ನಮ್ಮ ಕೈಗಳಿಗೆ ಇದೆ. ನಮ್ಮ ಕೈಗಳಿಗೆ ಅಧಿಕಾರ ನೀಡದಿರುವ ಕೈಗಳನ್ನು ನಾವು ಬದಲಾಯಿಸುತ್ತೇವೆ. ನಮ್ಮನ್ನು ನಿರ್ಲಕ್ಷ್ಯ ಮಾಡುವವರ ಕೈಗೆ ನಾವು ಚೊಂಬು ನೀಡುತ್ತೇವೆ” ಎಂದು ಹಾಸನ ಜಿಲ್ಲೆಯ ಮುಸ್ಲಿಂ ಮುಖಂಡರು ಘೋಷಿಸಿದ್ದಾರೆ.

ನಿಕಟ ಸಂಪರ್ಕ ಮತ್ತು ಸಕ್ರಿಯ ರಾಜಕೀಯ ಚಟುವಟಿಕೆಗಳನ್ನು ನಿರ್ವಹಿಸುತ್ತಿರುವ ಮುಸ್ಲಿಂ ಮುಖಂಡರು, ಪಕ್ಷದ ನಾಯಕರು ನೀಡಿದ ಆಶ್ವಾಸನೆಗಳನ್ನು ಈಡೇರಿಸದೇ ಇರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ನಾವು ಬೆಂಬಲಿಸುತ್ತಿರುವ ಪಕ್ಷದ ಪ್ರಮುಖರು, ನಮ್ಮ ಕಷ್ಟಗಳನ್ನು ಗುರುತಿಸುವುದಿಲ್ಲ. ನಮಗೆ ಕಾಂಗ್ರೆಸ್ ಅಂತರಿಕ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದೆ. ನಾವು ಸುಳ್ಳುಗಾರರ ಪ್ರಜಾಪ್ರಭುತ್ವದಲ್ಲಿ ನಿಲ್ಲುವುದಿಲ್ಲ” ಎಂದು ಮುಸ್ಲಿಂ ಮುಖಂಡರ ಒಗ್ಗಟ್ಟಿನ ಪ್ರತೀಕವಾಗಿ ಈ ಮಾತುಗಳು ಕೇಳಿಬರುತ್ತವೆ.

ಮುಸ್ಲಿಂ ಸಮುದಾಯವು ಸಂಘಟಿತವಾಗಿ ತಮ್ಮ ಹಕ್ಕುಗಳನ್ನು ಪಡೆಯಲು ಹೋರಾಟಕ್ಕೆ ಮುಂದಾಗುತ್ತಿದೆ, ಈ ಕುರಿತಂತೆ ಮುಂದಿನ ದಿನಗಳಲ್ಲಿ ಏನು ನಡೆಯುವುದು ಎನ್ನುವುದರ ಕಡೆ ದೃಷ್ಟಿ ಬಿದ್ದಿದೆ.

ಮುಸ್ಲಿಂ ಕಾರ್ಯಕರ್ತರ ಯೋಗ್ಯತೆಯನ್ನು ಯಾವ ಮಟ್ಟಕ್ಕೆ ಅಳೆದು ನಿಲ್ಲಿಸಿದ್ದಾರೆ ಎಂದರೆ, ಒಂದು ಬ್ಯಾನರ್ ನಲ್ಲಿ ಮುಸ್ಲಿಂ ಕಾರ್ಯಕರ್ತರ ಪೋಟೋ ಜಿಲ್ಲಾ ನಾಯಕರ ಜೊತೆಯಲ್ಲಿ ಹಾಕುವುದಿಲ್ಲ. ಕಾರ್ಯಕ್ರಮದ ವೇದಿಕೆಯಲ್ಲಿ ಕರೆಯುವುದೇ ಇಲ್ಲ. ಅಪ್ಪಿ ತಪ್ಪಿ ಕುಳಿತರು ಪೋಲಿಸರ ಮೂಲಕ ವೇದಿಕೆಯಿಂದ ಇಳಿಸುವ ನೀಚತನ ತೋರುತ್ತಾರೆ.

ಮಲ್ನಾಡ್ ಮೆಹಬೂಬ್

You cannot copy content of this page

Exit mobile version