ಕಳೆದ 20 ದಿನಗಳಿಂದ ಹಾಸನ ಜಿಲ್ಲೆಯನ್ನು ಸುತ್ತಿ ನಮ್ಮ ತಂಡವನ್ನು ಗೆಲ್ಲಿಸುವಲ್ಲಿ ಎಲ್ಲರೂ ಪ್ರಮುಖ ಪಾತ್ರ ವಹಿಸಿದ್ದೀರಿ. ಎಲ್ಲರ ಸಲಹೆ ಸಹಕಾರ ಪಡೆದು ಸಂಘದ ಅಭಿವೃದ್ಧಿಗೆ ಶ್ರಮಿಸಲಾಗುವುದು. ಈ ಬಗ್ಗೆ ಯಾರೂ ಯಾವುದೇ ಅನುಮಾನ ಇಟ್ಟುಕೊಳ್ಳುವುದು ಬೇಡ. ಸಂಘವನ್ನು ಮತ್ತಷ್ಟು ಸದೃಢವಾಗಿ ಕಟ್ಟಲು ಎಲ್ಲರೂ ಸಹಕಾರ ನೀಡಬೇಕು ಎಂದು ನೂತನ ಅಧ್ಯಕ್ಷ ಜೆ ಆರ್ ಕೆಂಚೇಗೌಡ ಮನವಿ ಮಾಡಿದರು.
ಹಾಸನ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಜೆ ಆರ್ ಕೆಂಚೇಗೌಡ ಸೇರಿದಂತೆ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಸಂಘದ ಭವನದಲ್ಲಿ ಪ್ರಮಾಣ ಪತ್ರ ವಿತರಣೆ ಬಳಿಕ ಮಾತನಾಡಿದರು.
“ಚುನಾವಣೆಯಲ್ಲಿ ಭಾಗವಹಿಸಿ ಮತದಾನ ಮಾಡಿದ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ. ನಮ್ಮ ತಂಡದ ಗೆಲವಿಗೆ ಪ್ರಮುಖ ಪಾತ್ರ ವಹಿಸಿದ ಹಿರಿಯ ಪತ್ರಕರ್ತ ಎಚ್ ಬಿ ಮದನಗೌಡ ಹಾಗೂ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಜಿಲ್ಲಾ ಸಂಘದ ಮಾಜಿ ಅಧ್ಯಕ್ಷ ರವಿ ನಾಕಲಗೂಡು, ಬಾಳ್ಳು ಗೋಪಾಲ್ ಸೇರಿದಂತೆ ಜಿಲ್ಲೆಯ ಎಲ್ಲಾ ಹಿರಿಯ, ಕಿರಿಯ ಪತ್ರಕರ್ತರಿಗೆ ಧನ್ಯವಾದಗಳು” ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಚುನಾವಣಾಧಿಕಾರಿ ರಾಜೇಶ್, ಸಹಾಯಕ ಚುನಾವಣಾಧಿಕಾರಿ ಮೋಹನ್ ಕಣತೂರು, ಮಾಜಿ ಅಧ್ಯಕ್ಷರಾದ ಬಾಳ್ಳು ಗೋಪಾಲ್, ರವಿ ನಾಕಲಗೂಡು, ಬಿ ಆರ್ ಉದಯ್ ಕುಮಾರ್ ಸೇರಿದಂತೆ ಪತ್ರಕರ್ತರು ಉಪಸ್ಥಿತರಿದ್ದರು.
ನೂತನ ಪದಾಧಿಕಾರಿಗಳು: ಅಧ್ಯಕ್ಷರಾಗಿ ಜೆ ಆರ್ ಕೆಂಚೇಗೌಡ, ಪ್ರಧಾನ ಕಾರ್ಯದರ್ಶಿ ಕೆ.ಜಿ. ಸುರೇಶ್, ಉಪಾಧ್ಯಕ್ಷರಾಗಿ ನಂಜುಂಡೇಗೌಡ, ಜಿ.ಪ್ರಕಾಶ್, ಎಚ್.ಟಿ. ಮೋಹನ್, ಕಾರ್ಯದರ್ಶಿಯಾಗಿ ಸುವರ್ಣ ಹರೀಶ್, ಖುಶ್ವಂತ್, ಬಿ.ಆರ್.ಬೊಮ್ಮೇಗೌಡ, ಖಜಾಂಚಿಯಾಗಿ ತ್ಯಾಗರಾಜ್(ಟಿ.ವಿ.5 ಪ್ರಕಾಶ್) ಹಾಗೂ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೆಪಿಎಸ್ ಪ್ರಮೋದ್ ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರು:
ಜನಮಿತ್ರ ಪತ್ರಿಕೆ ಸಂಪಾದಕ ಸಿ.ಆರ್. ನವೀನ್, ಶರಣ್, ಕೃಷ್ಣ ಇಬ್ಬೀಡು, ಜಗದೀಶ್ ಚೌಡುವಳ್ಳಿ, ಪಬ್ಲಿಕ್ ಎಕ್ಸ್‌ಪ್ರೆಸ್ ನಾಗರಾಜು, ಪ್ರತಾಪ್ ಹಿರೀಸಾವೆ, ಚಲಾಂ ಹಾಡ್ಲಹಳ್ಳಿ, ರಾಘವೇಂದ್ರ ಆಲೂರು, ಮಲ್ಲೇಶ್ ಬೇಲೂರು, ವಿರೂಪಾಕ್ಷ ಅರಕಲಗೂಡು, ಸುವರ್ಣ ಶರತ್, ಸುರೇಶ್ ಕುಮಾರ್, ಸ್ವರೂಪ್, ವಿಶ್ವನಾಥ್ ಹಾಗೂ ಪ್ರಕಾಶಮಾನ ಪತ್ರಿಕೆಯ ಸ್ವಾಗತ್ ಆಯ್ಕೆಯಾಗಿದ್ದಾರೆ.
