ನೋಯ್ಡಾ: ಉತ್ತರ ಪ್ರದೇಶದ ನೋಯ್ಡಾದಲ್ಲಿ ಹವಾಲಾ ವ್ಯವಹಾರ ನಡೆಸುತ್ತಿದ್ದ ಎಂಟು ಜನರನ್ನು ಬಂಧಿಸಲಾಗಿದ್ದು, 2 ಕೋಟಿ ರೂ. ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಗುರುವಾರ ಸಂಜೆ ತಿಳಿಸಿದ್ದಾರೆ.
ನೋಯ್ಡಾ ಪೊಲೀಸರಿಗೆ ಸೆಕ್ಟರ್ 55ರಲ್ಲಿ ಹವಾಲಾ ವ್ಯವಹಾರ ನಡೆಯುತ್ತಿರುವ ಕುರಿತು ಮಾಹಿತಿ ದೊರಕಿತ್ತು.
ಪೊಲೀಸರ ಮಾಹಿತಿ ಪ್ರಕಾರ, ಬಂಧಿತ ವ್ಯಕ್ತಿಗಳ ವಿಚಾರಣೆ ನಡೆಯುತ್ತಿದ್ದು, ಸ್ಥಳೀಯ ಹವಾಲಾ ಜಾಲವನ್ನು ಬಹಿರಂಗಪಡಿಸುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.
ಬಂಧಿತರನ್ನು ಅಹಮದಾಬಾದ್‌ನ ಜಯಂತಿ ಭಾಯ್, ದೆಹಲಿಯ ಸಂದೀಪ್ ಶರ್ಮಾ, ದೆಹಲಿಯ ವಿನಯ್ ಕುಮಾರ್, ವಾಯುವ್ಯ ಬಂಗಾಳದ ಅಭಿಜೀತ್ ಹಜ್ರಾ, ನೋಯ್ಡಾ ಸೆಕ್ಟರ್ -56 ರ ರೋಹಿತ್ ಜೈನ್, ದೆಹಲಿಯ ವಿಪುಲ್, ಮುಂಬೈನ ಮಿನಿಶ್ ಷಾ, ಇಂದೋರ್ನ ಅನುಜ್ ಎಂದು ಗುರುತಿಸಲಾಗಿದೆ ಎಂದರು.
ವಶಪಡಿಸಿಕೊಂಡ ಹಣದ ಎಣಿಕೆಯನ್ನು ಆದಾಯ ತೆರಿಗೆ ಇಲಾಖೆಯು ತನಿಖೆಯ ನಂತರ ಮಾಡುತ್ತದೆ. ಪೊಲೀಸರು ವಶಪಡಿಸಿಕೊಂಡ ಹಣಕ್ಕೆ ಸಂಬಂಧಿಸಿದಂತೆ ತನಿಖೆ ಮತ್ತು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು.