Monday, July 28, 2025

ಸತ್ಯ | ನ್ಯಾಯ |ಧರ್ಮ

Big breaking : ಕಿಡ್ನಾಪ್ ಪ್ರಕರಣದಲ್ಲಿ ಹೆಚ್.ಡಿ.ರೇವಣ್ಣ ಅರೆಸ್ಟ್

ಮಾಜಿ ಸಚಿವ ಹೆಚ್‌ ಡಿ ರೇವಣ್ಣನವರನ್ನು ಎಸ್‌ಐಟಿ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಅಪಹರಣ ಪ್ರಕರಣದಲ್ಲಿ ರೇವಣ್ಣ ಅವರನ್ನು ಬಂಧಿಸಿರುವುದಾಗಿ ಎನ್ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

ಅಪಹರಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ರೇವಣ್ಣ ಅವರ ‘ನಿರೀಕ್ಷಣಾ ಜಾಮೀನು’ ಅರ್ಜಿ ವಜಾ ಮಾಡಲಾಗಿದೆ. ಇದರ ಬೆನ್ನಲೇ ಎಸ್‌ಐಟಿ ಅಧಿಕಾರಿಗಳು ರೇವಣ್ಣವರನ್ನು ಹುಡುಕಾಟ ಮಾಡುವುದಕ್ಕೆ ಮುಂದಾಗಿದ್ದರು. ಇದಲ್ಲದೇ ಮಾಜಿ ಪ್ರಧಾನಿ ದೇವೇಗೌಡರ ಮನೆಗೆ ಹೋಗಿದ್ದರು.

ಇಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ವಿಚಾರಣೆ ಆರಂಭಿಸಿತು. ಈ ವೇಳೆ ಎಸ್‌ಐಟಿಯ ಎಸ್ ಪಿಪಿ ಲಿಖಿತ ಆಕ್ಷೇಪಣೆ ಸಲ್ಲಿಸಿದರು. ಇದಕ್ಕೆ ಪ್ರತಿಯಾಗಿ ರೇವಣ್ಣ ಪರ ಹಿರಿಯ ವಕೀಲ ಮೂರ್ತಿ ಡಿ ನಾಯಕ್ ಅವರು, ಇಲ್ಲಿ ಅತ್ಯಾಚಾರ ಪ್ರಕರಮ ಸಾಕ್ಷ್ಯ ವಿಚಾರಣೆ ನಡೆಯುತ್ತಿಲ್ಲ. ತೆರೆದ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಬೇಕು. ಇದರಲ್ಲಿ ನಿರಾಧಾರವಾದ ಕಿಡ್ನಾಪ್ ಆರೋಪ ಮಾತ್ರವಿದೆ ಎಂಬುದಾಗಿ ಮನವಿ ಮಾಡಿದರು. ಅಲ್ಲದೇ ಸಂತ್ರಸ್ತೆ ನೀಡಿದಂತ ದೂರಿನ ಹಿನ್ನಲೆಯಲ್ಲಿ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದಂತ ಎಫ್‌ಐಆರ್ ಪ್ರತಿಯನ್ನು ನ್ಯಾಯಪೀಠದ ಮುಂದೆ ಓದಿದರು.

ಹಲವಷ್ಟು ವಾದ ವಿವಾದಗಳ ನಂತರ ರೇವಣ್ಣ ಅವರ ‘ನಿರೀಕ್ಷಣಾ ಜಾಮೀನು’ ಅರ್ಜಿ ವಜಾ ಆಗಿದೆ. ಆ ನಂತರ ವಾದ ಪ್ರತಿವಾದವನ್ನು ಆಲಿಸಿದಂತ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು, ಹೆಚ್.ಡಿ ರೇವಣ್ಣ ಅವರು ಸಲ್ಲಿಸಿದ್ದಂತ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಕೆಲ ಕಾಲ ಮುಂದೂಡಿತು. ಇದೇ ವೇಳೆ ಮಹಿಳೆಯ ಅಪಹರಣ ಪ್ರಕರಣ ಸಂಬಂಧ ಮಾಜಿ ಸಚಿವ ಹೆಚ್‌.ಡಿ ರೇವಣ್ಣ ಅವರ ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಕೋರ್ಟ್‌ ಆದೇಶ ಹೊರಡಿಸಿದೆ.

ಅದಾದ ನಂತರ ದೇವೇಗೌಡರ ನಿವಾಸದ ಬಳಿಯೇ ಅಧಿಕಾರಿಗಳು ಬಂದು ರೇವಣ್ಣ ಅವರನ್ನು ಅರೆಸ್ಟ್ ಮಾಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page