ಬೆಂಗಳೂರು: ಮುಡಾ ಹಗರಣದ ಕೋರ್ಟ್ ತೀರ್ಪಿನ ಕುರಿತು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ಅವರು, “ಅಂದು ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿದಾಗ ಅವರ ಚಿತ್ರಕ್ಕೆ ಸಿದ್ಧರಾಮಯ್ಯನವರ ಅಭಿಮಾನಿಗಳು ಚಪ್ಪಲಿ ಹಾರ ಹಾಕಿದ್ದರು. ಈಗ ತೀರ್ಪು ಬಂದಿದೆ. ಕೋರ್ಟು ತನಿಖೆಗೆ ಅನುಮತಿ ನೀಡಿದೆ. ಹಾಗಿದ್ದರೆ ಈಗ ಅಭಿಮಾನಿಗಳು ಸಿದ್ಧರಾಮಯ್ಯನವರಿಗೆ ಚಪ್ಪಲಿ ಹಾರ ಹಾಕುತ್ತಾರೆಯೇ?” ಎಂದು ಕೇಂದ್ರ ಸಚಿವ ಪ್ರಶ್ನಿಸಿದ್ದಾರೆ.
ಇನ್ನು ಮುಡಾ ವಿಚಾರಕ್ಕೆ ಸಂಬಂಧಿಸಿದಂತೆ ಸ್ಥಳೀಯ ಜನಪ್ರತಿನಿಧಿಗಳ ನ್ಯಾಯಾಲಯವು ಪ್ರಕರಣವನ್ನು ಮೈಸೂರು ಲೋಕಾಯುಕ್ತೆ ವಹಿಸಿ ತನಿಖೆ ನಡೆಸುವಂತೆ ಸೂಚಿಸಿದೆ.
ಈ ನಡುವೆ ಹೈಕೋರ್ಟಿನಲ್ಲಿ ಮುಡಾ ಪ್ರಕರಣಣದಲ್ಲಿ ಪ್ರತಿಪಕ್ಷಗಳಾಗಿದ್ದವರು ಈಗ ತಮ್ಮನ್ನೂ ಪ್ರತಿಪಕ್ಷವಾಗಿ ಪರಿಗಣಿಸುವಂತೆ ಕೋರಿ ಕೇವಿಯಟ್ ಅರ್ಜಿ ಸಲ್ಲಿಸಿದ್ದಾರೆ.