ಉತ್ತರಾಖಂಡದ ಬದರಿನಾಥ ದೇವಾಲಯದ ಹತ್ತಿರದಲ್ಲೇ ಬಾರೀ ಹಿಮಪಾತ ಸಂಭವಿಸಿದೆ. ಇದರ ಪರಿಣಾಮ ಸುಮಾರು 60 ಕ್ಕೂ ಹೆಚ್ಚು ಮಂದಿ ಹಿಮದ ಕೆಳಗೆ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಅವರ ರಕ್ಷಣೆಗಾಗಿ ವಿಪತ್ತು ನಿರ್ವಹಣಾ ತಂಡದಿಂದ ಕಾರ್ಯಾಚರಣೆ ಭರದಿಂದ ಸಾಗಿದೆ.
ಉತ್ತರಾಖಂಡದ ಮಾನಾದಿಂದ ಘಸ್ಟೋಲಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ.
ಸುಮಾರು 57 ಕಾರ್ಮಿಕರ ಜೊತೆಗೆ ಹಲವು ಮಂದಿ ಹಿಮದ ಅಡಿಯಲ್ಲಿ ಸಿಲುಕಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಕ್ಷಣಾ ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸಲು ಸ್ಥಳಕ್ಕೆ ಧಾವಿಸಿ 16 ಕಾರ್ಮಿಕರನ್ನು ಈಗಾಗಲೇ ರಕ್ಷಣೆ ಮಾಡಲಾಗಿದೆ.
ಕಳೆದ 48 ಗಂಟೆಗಳಲ್ಲಿ ಈ ಪ್ರದೇಶದಲ್ಲಿ ಭಾರಿ ಹಿಮಪಾತವಾದ ನಂತರ ಹಿಮನದಿ ನದಿಗೆ ಕುಸಿದಿದೆ. ಅದರ ಪರಿಣಾಮವಾಗಿ ತೀವ್ರವಾದ ಹಿಮಪಾತ ಸಂಭವಿಸಿದೆ ಎಂದು ತಜ್ಞರು ತಿಳಿಸಿದ್ದಾರೆ. ಹಿಮನದಿಯ ಬಳಿಯ ನಿರ್ಮಾಣ ಸ್ಥಳಗಳಲ್ಲಿ ಗಮನಾರ್ಹ ಹಾನಿ ಉಂಟಾಗಿದೆ.