Home ಮೀಡಿಯಾ ನಮಸ್ತೆ ಕರ್ನಾಟಕ,ನಾನು ಕೆ.ಎನ್. ಜಗದೀಶ್ ಕುಮಾರ್ : 93 ದಿನಗಳ ಜೈಲು ವಾಸದ ನಂತರ

ನಮಸ್ತೆ ಕರ್ನಾಟಕ,ನಾನು ಕೆ.ಎನ್. ಜಗದೀಶ್ ಕುಮಾರ್ : 93 ದಿನಗಳ ಜೈಲು ವಾಸದ ನಂತರ

0

93 ದಿನಗಳ ಜೈಲು ವಾಸದ ನಂತರ ಈಗ ಜಾಮೀನು ಪಡೆದು ಹೊರ ಬಂದ ವಕೀಲ್ ಸಾಬ್ ಖ್ಯಾತಿಯ ಕೆ.ಎನ್.ಜಗದೀಶ್ ಕುಮಾರ್ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿದ್ದಾರೆ. ಕೊಡಿಗೆಹಳ್ಳಿಯಲ್ಲಿ ಅಣ್ಣಮ್ಮ ಕೂರಿಸೋ ವಿಚಾರದಲ್ಲಿ ಅಲ್ಲಿನ ಸ್ಥಳೀಯರ ಜೊತೆ ಜಗದೀಶ್‌ ಅವರು ಗಲಾಟೆಗೆ ಇಳಿದಿದ್ದರು. ಆ ನಂತರ ಅವರು ವಿರುದ್ಧ ದೂರು ದಾಖಲಾಗಿ ಜೈಲು ಪಾಲಾಗಿದ್ದರು.

ಇದೀಗ ಸುಧೀರ್ಘ 93 ದಿನಗಳ ಜೈಲು ವಾಸದ ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.
ನಮಸ್ತೆ ಕರ್ನಾಟಕ,
ನಾನು ಕೆ.ಎನ್. ಜಗದೀಶ್ ಕುಮಾರ್, ಹಲವು ವರ್ಷಗಳಿಂದ ಭ್ರಷ್ಟಾಚಾರದ ವಿರುದ್ಧ ಧೀರ ಹೋರಾಟ ನಡೆಸುತ್ತಿರುವ ಹೋರಾಟಗಾರ,
• PSI ಹಗರಣವನ್ನು ಬಯಲು ಮಾಡಿದ್ದು ,
• ADGP ಅಮೃತಪಾಲ್ ಅವರನ್ನು ಜೈಲಿಗೆ ಕಳಿಸಿದ್ದು ನಮ್ಮ ಟೀಂ,
• ದೊಡ್ಡ ರಾಜಕಾರಣಿಗಳ ಸೆಕ್ಸ್ ಸ್ಕ್ಯಾಂಡನ್ನು ಬಹಿರಂಗಪಡಿಸಿದ್ದು ,
• ರವಿ ಚೆನ್ನಣ್ಣನವರ ಭ್ರಷ್ಟಾಚಾರವನ್ನು ಬಹಿರಂಗಪಡಿಸಿದ್ದು ,
• ಟ್ರಾಫಿಕ್ ಟೋವಿಂಗ್ ಸಿಸ್ಟಂ ಅನ್ನು ನಿಲ್ಲಿಸಿದ್ದು ,
• ಕೊಡಿಗೆಹಳ್ಳಿ ಸುತ್ತಮುತ್ತ ಡ್ರಗ್ಸ್ ವಿರುದ್ಧ ಹೋರಾಟ ನಡೆಸಿದ್ಧು…. ಇವೆಲ್ಲವೂ ನನ್ನ ಹೋರಾಟದ ಭಾಗ! ಈ ಧೈರ್ಯದ ಹೋರಾಟವನ್ನು ಸಹಿಸದ ಭ್ರಷ್ಟ ರಾಜಕೀಯ ಮತ್ತು ಪೊಲೀಸ್ ವ್ಯವಸ್ಥೆ, ನನ್ನ ಮತ್ತು ನನ್ನ ಮಗನ ವಿರುದ್ಧ ಸಂಚು ರೂಪಿಸಿ, 25/01/2025 ರಂದು ಸ್ಥಳಿಯ ಪುಂಡರಿಂದ ನನಗೆ ಮಾರಣಾಂತಿಕ ಹಲ್ಲೆ ನಡೆಸಿ, ಅಕ್ರಮವಾಗಿ ಜೈಲಿಗೆ ಕಳುಹಿಸಲಾಗಿತ್ತು. ಇವತ್ತಿಗೆ 93 ದಿನಗಳ ನಂತರ ನನಗೆ ನ್ಯಾಯ ಸಿಕ್ಕಿದೆ. ಜಾಮೀನು ಲಭಿಸಿದೆ. ನ್ಯಾಯಕ್ಕಾಗಿ ನನ್ನ ಹೋರಾಟ ಇನ್ನೂ ಜೀವಂತವಿದೆ! ನಾನು ಶರಣಾಗುವುದಿಲ್ಲ! ಜೈ ಕರ್ನಾಟಕ!

ತಮ್ಮ ಬಂಧನಕ್ಕೆ ಸರ್ಕಾರ ಹಾಗೂ ಪೊಲೀಸ್ ವ್ಯವಸ್ಥೆಯನ್ನು ನೇರ ಹೊಣೆ ಮಾಡಿದ್ದಾರೆ.

You cannot copy content of this page

Exit mobile version