ದೆಹಲಿ: ಇತ್ತೀಚೆಗೆ ಮಹಾಕುಂಭಮೇಳದಲ್ಲಿ ನಡೆದ ಕಾಲ್ತುಳಿತ ಘಟನೆ ದೊಡ್ಡ ಘಟನೆಯೇನಲ್ಲ ಎಂದು ಬಿಜೆಪಿ ಸಂಸದೆ ಹೇಮಾ ಮಾಲಿನಿ ಹೇಳಿದ್ದಾರೆ. ಮಂಗಳವಾರ ಸಂಸತ್ತಿನ ಆವರಣದಲ್ಲಿ ಅವರು ಸುದ್ದಿಗಾರರೊಂದಿಗೆ ಈ ವಿಷಯ ತಿಳಿಸಿದರು.
“ಮಹಾ ಕುಂಭಮೇಳದಲ್ಲಿ ನಡೆದ ಘಟನೆ ಅಷ್ಟು ದೊಡ್ಡದೇನಲ್ಲ. ಈ ಬಗ್ಗೆ ವಿರೋಧ ಪಕ್ಷಗಳು ಅನಗತ್ಯ ಆರೋಪಗಳನ್ನು ಮಾಡುತ್ತಿವೆ. ನಮ್ಮ ಸರ್ಕಾರ ಈ ಮೇಳವನ್ನು ಅತ್ಯುತ್ತಮ ರೀತಿಯಲ್ಲಿ ಆಯೋಜಿಸಿದೆ. ಈ ರೀತಿಯ ಜಾತ್ರೆಯನ್ನು ಆಯೋಜಿಸುವುದು ಕಷ್ಟ. ಆದರೆ ನಮ್ಮ ಸರ್ಕಾರ ಈ ಮೇಳವನ್ನು ಯಶಸ್ವಿಗೊಳಿಸಲು ಶ್ರಮಿಸುತ್ತಿದೆ. ನಾವು ಕೂಡ ನದಿಯಲ್ಲಿ ಸ್ನಾನ ಮಾಡಿದೆವು. ಎಲ್ಲಾ ಸೌಲಭ್ಯಗಳು ಚೆನ್ನಾಗಿವೆ” ಎಂದು ಅವರು ಹೇಳಿದರು.
ಸರ್ಕಾರವು ಸಾವಿನ ಸಂಖ್ಯೆಯನ್ನು ಮರೆಮಾಡುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪವನ್ನು ಉಲ್ಲೇಖಿಸಿದ ಅವರು, “ಅವರು ಏನು ಹೇಳಬೇಕೆಂದು ಬಯಸುತ್ತಾರೋ ಅದನ್ನು ಹೇಳುತ್ತಾರೆ” ಎಂದು ಹೇಳಿದರು.
“ತಪ್ಪು ಮಾಡುವುದು ಅವರ ಅಭ್ಯಾಸ” ಎಂದು ಅವರು ಉತ್ತರಿಸಿದರು. ಮೌನಿ ಅಮವಾಸ್ಯೆಯ ಸಂದರ್ಭದಲ್ಲಿ ಪ್ರಯಾಗ್‌ರಾಜ್‌ನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 30 ಜನರು ಸಾವನ್ನಪ್ಪಿದ್ದಾರೆ ಮತ್ತು 60 ಜನರು ಗಾಯಗೊಂಡಿದ್ದರು.