ವಿಶ್ವವಿದ್ಯಾಲಯಗಳಲ್ಲಿ ಕುಲಪತಿಗಳ ಸ್ಥಾನಮಾನ ಹೊಂದಿದ್ದ ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸಚಿವ ಸಂಪುಟ ಮೇಜರ್ ಸರ್ಜರಿ ಮಾಡಿದೆ. ಆ ಮೂಲಕ ಇನ್ಮುಂದೆ ವಿಶ್ವವಿದ್ಯಾಲಯಗಳಿಗೆ ಮುಖ್ಯಮಂತ್ರಿಯೇ ಕುಲಪತಿ ಸ್ಥಾನದಲ್ಲಿ ಇರಲಿದ್ದಾರೆ ಎಂದು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಗುರುವಾರ ನಡೆದ ಸಂಪುಟ ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಯುನಿವರ್ಸಿಟಿ ತಿದ್ದುಪಡಿ ವಿಧೇಯಕಕ್ಕೆ ಕ್ಯಾಬಿನೆಟ್ ಅನುಮೋದನೆ ನೀಡಲಾಗಿದೆ.
ಈ ವಿಧೇಯಕಕ್ಕೆ ತಿದ್ದುಪಡಿ ತರಲು ಕ್ಯಾಬಿನೇಟ್ ಅನುಮೋದನೆ ನೀಡಿದ್ದರಿಂದಾಗಿ, ರಾಜ್ಯಪಾಲರ ಅಧಿಕಾರ ಮೊಟಕಾಗಲಿದೆ. ರಾಜ್ಯದ ವಿವಿ ಗಳಿಗೆ ರಾಜ್ಯಪಾಲರು ಇಷ್ಟು ದಿನ ಚಾನ್ಸೆಲರ್ ಆಗಿದ್ದರು. ಇನ್ಮುಂದೆ ಮುಖ್ಯಮಂತ್ರಿಗಳೇ ಚಾನ್ಸಲರ್ ಆಗಲಿದ್ದಾರೆ.
ರಾಜ್ಯಪಾಲರ ಬಳಿ ಇದ್ದ ಅಧಿಕಾರವನ್ನು ಹಿಂಪಡೆದು ಮುಖ್ಯಮಂತ್ರಿಗಳಿಗೆ ನೀಡಲು ಕ್ಯಾಬಿನೆಟ್ ಸಭೆಯಲ್ಲಿ ಸರ್ವಾನುಮತದಿಂದ ಅನುಮೋದಿಸಲಾಗಿದೆ.