Home ಬೆಂಗಳೂರು ಮುಂದಿನ 5 ಈ ಕೆಲವು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ಇಲ್ಲಿದೆ ಮಾಹಿತಿ ?

ಮುಂದಿನ 5 ಈ ಕೆಲವು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ಇಲ್ಲಿದೆ ಮಾಹಿತಿ ?

ರಾಜ್ಯದಲ್ಲಿ ಸದ್ಯ ಚಳಿಯ ವಾತಾವರಣ ಇದ್ದು, ಮುಂದಿನ 7 ದಿನವೂ ಚಳಿ ಮತ್ತಷ್ಟು ಹೆಚ್ಚಾಗಲಿದೆ. ಈ ವಾರಾಂತ್ಯದ 2 ದಿನ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಿಗೆ ಮಳೆ ಮುನ್ಸೂಚನೆ ಕೊಡಲಾಗಿದೆ.

ಬೆಂಗಳೂರು : ರಾಜ್ಯದ ಹವಾಮಾನದಲ್ಲಿ ಏರುಪೇರು ಕಂಡುಬರುತ್ತಿದ್ದು, ಮುಂದಿನ ಕೆಲವು ದಿನಗಳ ಕಾಲ ಉತ್ತರ ಕರ್ನಾಟಕದಲ್ಲಿ ಚಳಿ ಹೆಚ್ಚಾಗಲಿದ್ದರೆ, ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರ ವರದಿ ಮಾಡಿದೆ. ಹವಾಮಾನದ ಪ್ರಮುಖ ವಿದ್ಯಮಾನಗಳು:
ಸದ್ಯದ ವರದಿಯ ಪ್ರಕಾರ, ನೈಋತ್ಯ ಬಂಗಾಳ ಉಪಸಾಗರ ಮತ್ತು ಹಿಂದೂ ಮಹಾಸಾಗರದ ಸಮಭಾಜಕ ಪ್ರದೇಶದಲ್ಲಿ ವಾಯುಭಾರ ಕುಸಿತದ ಸುಳಿ ಗಾಳಿ (Cyclonic Circulation) ಸಕ್ರಿಯವಾಗಿದೆ. ಇದು ಸಮುದ್ರ ಮಟ್ಟದಿಂದ ಸುಮಾರು 5.8 ಕಿ.ಮೀ ಎತ್ತರದವರೆಗೆ ಹರಡಿದೆ. ಇದರೊಂದಿಗೆ ಮಾಲ್ಡೀವ್ಸ್ ಮತ್ತು ಲಕ್ಷದ್ವೀಪ ಪ್ರದೇಶದ ನಡುವೆ 3.1 ಕಿ.ಮೀ ಎತ್ತರದಲ್ಲಿ ಗಾಳಿಯ ಒತ್ತಡದ ಸುಳಿ (Trough) ಕಂಡುಬಂದಿದೆ. ಅರಬ್ಬಿ ಸಮುದ್ರದಲ್ಲಿ ಉಂಟಾಗಿದ್ದ ಸುಳಿಗಾಳಿಯ ಪ್ರಭಾವ ಈಗ ಕ್ಷೀಣಿಸಿದೆ.


ಚಳಿ ಹೆಚ್ಚಳದ ಮುನ್ಸೂಚನೆ :

ಉತ್ತರ ಒಳನಾಡು: ಮುಂದಿನ 5 ದಿನಗಳಲ್ಲಿ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನವು 2 ರಿಂದ 3 ಡಿಗ್ರಿ ಸೆಲ್ಸಿಯಸ್‌ನಷ್ಟು ಇಳಿಕೆಯಾಗುವ ಸಾಧ್ಯತೆಯಿದೆ. ಇದರಿಂದ ಚಳಿಯ ತೀವ್ರತೆ ಹೆಚ್ಚಾಗಲಿದೆ. ಜನವರಿ 09 ಮತ್ತು 10 : ದಕ್ಷಿಣ ಒಳನಾಡಿನ ಚಾಮರಾಜನಗರ, ಹಾಸನ, ಕೊಡಗು, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಉಳಿದ ಜಿಲ್ಲೆಗಳಲ್ಲಿ ಒಣ ಹವೆ ಇರಲಿದೆ. ಜನವರಿ 11: ರಾಜ್ಯಾದ್ಯಂತ ಮತ್ತೆ ಒಣ ಹವೆ ಇರಲಿದೆ ಎಂದು ಅಂದಾಜಿಸಲಾಗಿದೆ.

You cannot copy content of this page

Exit mobile version