ಬಂಗಾಳ ಕೊಲ್ಲಿಯಲ್ಲಿ ತೀವ್ರ ಪ್ರಮಾಣದ ವಾಯುಭಾರ ಕುಸಿತ ಉಂಟಾಗಿ ಮೋಂತಾ ಚಂಡಮಾರುತ ಭಾರತಕ್ಕೆ ಅಪ್ಪಳಿಸಿದೆ. ಕೇರಳ, ತಮಿಳುನಾಡು, ಕರ್ನಾಟಕ ಸೇರಿದಂತೆ ಉತ್ತರದ ಒರಿಸ್ಸಾ ಭಾಗದಲ್ಲಿ ಬಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ದಕ್ಷಿಣ ರಾಜ್ಯಗಳು ಸೇರಿದಂತೆ ಒಡಿಶಾ ಮುಂತಾದ ರಾಜ್ಯಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ.
ಮುಂದಿನ 12 ಗಂಟೆಗಳಲ್ಲಿ ಬೆಂಗಳೂರಿನಲ್ಲಿ ಲಘುವಾಗಿ ಸಾಧಾರಣ ಮಳೆಯಾಗಲಿದೆ. ಕವಿದ ವಾತಾವರಣದೊಂದಿಗೆ ಗರಿಷ್ಠ ತಾಪಮಾನ 29°C ಮತ್ತು ಕನಿಷ್ಠ ತಾಪಮಾನ 21°C ಇರಲಿದೆ. ಈ ವಾರದ ಬಹುತೇಕ ಇಂತಹ ಮಳೆ ಮುಂದುವರಿಯಲಿದೆ. ಅಕ್ಟೋಬರ್ 28ಕ್ಕೆ ಕರ್ನಾಟಕದ ಕೆಲವು ಭಾಗಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಅಕ್ಟೋಬರ್ 28 ರ ಸಂಜೆ ಅಥವಾ ರಾತ್ರಿ ಭಾರಿ ಮಳೆಯಾಗಲಿದೆ. ಆಗ ಗಾಳಿಯ ವೇಗ 90-100 ಕಿಮೀ/ಗಂಟೆಯಿಂದ 110 ಕಿಮೀ/ಗಂಟೆಯವರೆಗೆ ಇರಬಹುದು. ಆಂಧ್ರ ಪ್ರದೇಶ ಭಾಗದಲ್ಲಿ ಗಂಟೆಗೆ 90-100ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
