Home ಮೀಡಿಯಾ ಪರವಾನಗಿ ಮರುನವೀಕರಣ ಮಾಡಿಸಲು ವಿಫಲ: ಪವರ್‌ ಟಿವಿ ಪ್ಲಗ್‌ ಕಿತ್ತು ಹಾಕಿದ ಹೈಕೋರ್ಟ್

ಪರವಾನಗಿ ಮರುನವೀಕರಣ ಮಾಡಿಸಲು ವಿಫಲ: ಪವರ್‌ ಟಿವಿ ಪ್ಲಗ್‌ ಕಿತ್ತು ಹಾಕಿದ ಹೈಕೋರ್ಟ್

0

ಬೆಂಗಳೂರು: ಕನ್ನಡದ ಖಾಸಗಿ ಸುದ್ದಿವಾಹಿನಿಯಾದ ಪವರ್‌ ಟಿವಿ 2021ರ ನಂತರ ತನ್ನ ಪರವಾನಗಿಯನ್ನು ನವೀಕರಿಸದ ಕಾರಣ ಕರ್ನಾಟಕ ಹೈಕೋರ್ಟ್‌ ಅದರ ಪ್ರಸಾರಕ್ಕೆ ತಕ್ಷಣದಿಂದ ಜಾರಿಗೆ ಬರುವಂತೆ ತಡೆ ನೀಡಿದೆ.

ಕೇಬಲ್‌ ಟೆಲಿವಿಷನ್‌ ನೆಟ್‌ವರ್ಕ್‌ಗಳ (ನಿಯಂತ್ರಣ) ಕಾಯಿದೆ – 1995ರ ಆದೇಶ ಉಲ್ಲಂಘಿಸಿರುವ ಕಾರಣ ತಕ್ಷಣದಿಂದಲೇ ತಮ್ಮ ಚಾನೆಲ್‌ನಲ್ಲಿ ಸುದ್ದಿಗಳೂ ಸೇರಿದಂತೆ ಯಾವುದೇ ಕಾರ್ಯಕ್ರಮಗಳನ್ನು ಜುಲೈ 8ರವರೆಗೆ ಪ್ರಸಾರ ಮಾಡಬಾರದು,” ಎಂದು ಕರ್ನಾಟಕ ಹೈಕೋರ್ಟ್‌ ತನ್ನ ಆದೇಶದಲ್ಲಿ ತಿಳಿಸಿದೆ.

ಕೇಂದ್ರ ವಲಯದ ಐಜಿಪಿ ಡಾ.ಬಿ ಆರ್‌ ರವಿಕಾಂತೇಗೌಡ, ವಿಧಾನ ಪರಿಷತ್‌ ಮಾಜಿ ಸದಸ್ಯ ಶ್ರೀ ಎಚ್‌ ಎಂ ರಮೇಶ್‌ ಗೌಡ ಸಲ್ಲಿಸಿದ್ದ ಅರ್ಜಿಗಳನ್ನು ಪರಿಶೀಲಿಸಿ,ಅರ್ಜಿದಾರರ ಪರ ಹಿರಿಯ ವಕೀಲರಾದ ಶ್ರೀ ಪ್ರಭುಲಿಂಗ ನಾವಡಗಿ, ಶ್ರೀ ಸಂದೇಶ್ ಚೌಟಾ,ಶ್ರೀ ರವಿ ಶಂಕರ್ ಅವರುಗಳ ವಾದವನ್ನು ಆಲಿಸಿದ ನ್ಯಾಯಮೂರ್ತಿ ಶ್ರೀ ಎಸ್‌ ಆರ್‌ ಕೃಷ್ಣಕುಮಾರ್‌ ಅವರಿದ್ದ ಏಕಸದಸ್ಯ ಪೀಠ, ಈ ಮಹತ್ವದ ಆದೇಶ ನೀಡಿದೆ.
ಇದಲ್ಲದೆ ಪ್ರಜ್ವಲ್‌ ರೇವಣ್ಣ ಪ್ರಕರಣದ ವಿಷಯದಲ್ಲಿ ದೇವೇಗೌಡರ ಕುಟುಂಬದ ಕುರಿತು ವಾಹಿನಿ ಬಳಸಿದ ಭಾಷೆಯ ಕುರಿತಾಗಿಯೂ ಪಕ್ಷದ ವಕ್ತಾರರು ದೂರು ನೀಡಿರುವುದಾಗಿ ತಿಳಿದುಬಂದಿದೆ.

ದೂರಿನಲ್ಲಿ “ಪವರ್ ಟಿವಿ ಮುಖ್ಯಸ್ಥರು ಮತ್ತು ನಿರೂಪಕರಾದ ರಾಕೇಶ್ ಶೆಟ್ಟಿ ಅವರು ಮಾಜಿ ಪ್ರಧಾನ ಮಂತ್ರಿಗಳಾದ ಎಚ್‌ಡಿ ದೇವೇಗೌಡರು, ಕೇಂದ್ರ ಸಚಿವರಾದ ಎಚ್‌ಡಿ ಕುಮಾರಸ್ವಾಮಿ ಹಾಗೂ ಅವರ ಕುಟುಂಬದ ಬಗ್ಗೆ ಪವರ್ ಟಿವಿ ನೇರಪ್ರಸಾರ ಕಾರ್ಯಕ್ರಮದಲ್ಲಿ ಅತ್ಯಂತ ಕೀಳು ಮಟ್ಟದಲ್ಲಿ, ಲಘುವಾಗಿ ಏಕವಚನದಲ್ಲಿ, ಅವಾಚ್ಯ ಶಬ್ದಗಳಿಂದ ಅವಮಾನ ಮಾಡಿ ಮಾತನಾಡಿದ್ದಾರೆ” ಎಂದು ಆರೋಪಿಸಲಾಗಿದೆ.

You cannot copy content of this page

Exit mobile version