Monday, June 17, 2024

ಸತ್ಯ | ನ್ಯಾಯ |ಧರ್ಮ

ಹಿಂದಿ ಕಡ್ಡಾಯ ಶಿಫಾರಸು ವಿರೋಧಿಸಿ ಕೇರಳ ಸಿಎಂ ಮೋದಿಗೆ ಪತ್ರ

ಕೇರಳ : ಇತ್ತೀಚೆಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿರುವ ಕೇಂದ್ರ ಸೇವೆಗಳಿಗೆ ಹಿಂದಿ ಪರೀಕ್ಷಾ ಮಾಧ್ಯಮವಾಗಬೇಕು ಎಂಬ ಸಂಸತ್ತಿನ ಶಿಫಾರಸಿಗೆ ವಿರೋಧಿಸಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

ಕೇಂದ್ರೀಯ ಶಿಕ್ಷಣ ಸಂಸ್ಥೆಗಳಿಂದ ಹಿಡಿದು ಉನ್ನತ ತಾಂತ್ರಿಕ ಸಂಸ್ಥೆಗಳವರೆಗೂ ಇಂಗ್ಲೀಷ್‌ ಬದಲು ಹಿಂದಿ ಮಾಧ್ಯಮದಲ್ಲಿಯೇ ಪಠ್ಯಬೋಧನೆಯನ್ನು ಮಾಡಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅಧ್ಯಕ್ಷರಾಗಿರುವ ಸಂಸತ್ತಿನ ಅಧಿಕೃತ ಭಾಷಾ ಸಮಿತಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಶಿಫಾರಸು ಸಲ್ಲಿಸಿದೆ. ಇದನ್ನು ಒಪ್ಪದ ಕೇರಳದ ಸಿಎಂ ಪ್ರಧಾನ ಮಂತ್ರಿಗೆ ಪತ್ರ ಬರೆದಿದ್ದಾರೆ.

ಈ ಕುರಿತು ಪತ್ರ ಬರೆದ ಪಿಣರಾಯಿ ವಿಜಯನ್‌ “ಸಾಂಸ್ಕೃತಿಕ ಮತ್ತು ಭಾಷಾ ವೈವಿಧ್ಯತೆಯನ್ನು ಅಂಗೀಕರಿಸುವ ʼವಿವಿಧತೆಯಲ್ಲಿ ಏಕತೆʼ ಎಂಬ ಪರಿಕಲ್ಪನೆಯಿಂದ ಭಾರತದ ಸಾರವನ್ನು ವ್ಯಾಖ್ಯಾನಿಸಲಾಗಿದೆ. ಯಾವುದೇ ಒಂದು ಭಾಷೆಯನ್ನು ಇತರರಿಗಿಂತ ಹೆಚ್ಚು ಪ್ರಚಾರ ಮಾಡುವುದು ಸಮಗ್ರತೆಯನ್ನು ನಾಶಪಡಿಸಲು ಕಾರಣವಾಗುತ್ತದೆ” ಎಂದು ಭಾಷೆಯ ಬಗ್ಗೆ ತಮ್ಮ ನಿಲುವುಗಳನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆಯುವುದರ ಮೂಲಕ ತಿಳಿಸಿದ್ದಾರೆ.

ಇದನ್ನೂ ನೋಡಿ : ಎಂದಿನಂತೆ ಓಲಾ, ಉಬರ್‌, ರ‍್ಯಾಪಿಡೋಗಳ ಸಂಚಾರ\

Related Articles

ಇತ್ತೀಚಿನ ಸುದ್ದಿಗಳು