Monday, September 2, 2024

ಸತ್ಯ | ನ್ಯಾಯ |ಧರ್ಮ

ಅವ್ಯವಸ್ಥೆಯ ಕೂಪವಾಗಿರುವ ಹೊಳೆನರಸೀಪುರ ಬಾಲಕಿಯರ ವಿದ್ಯಾರ್ಥಿ ನಿಲಯ ; ತೀವ್ರ ಹೋರಾಟದ ಮುನ್ಸೂಚನೆ ಕೊಟ್ಟ SFI ಸಂಘಟನೆ

ಹೊಳೆನರಸೀಪುರ ತಾಲೂಕಿನ ಸಮಾಜಕಲ್ಯಾಣ ಇಲಾಖೆ ಮೆಟ್ರಿಕ್‌ ನಂತರ ಬಾಲಕೀಯರ ವಿದ್ಯಾರ್ಥಿ ನಿಲಯ ಅವ್ಯವಸ್ಥೆ ಕೂಪವಾಗಿದೆ. ಶೌಚಾಲಯ, ಕುಡಿಯುವ ನೀರು, ಗ್ರಂಥಾಲಯ ಮತ್ತು ಕೊಠಡಿಗಳು ಸೇರಿದಂತೆ ಯಾವು ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದೆ ಶೈಕ್ಷಣಿಕ ವಾತವರಣವೂ ಇಲ್ಲದೇ ಸಮಸ್ಯೆಗಳೇ ಮೈವೆತ್ತಂತಿರುವ ಜಾಗದಲ್ಲಿ ಪ್ರತಿ ನಿತ್ಯ ವಿದ್ಯಾರ್ಥಿನಿಯರು ದಿನ ಕಳೆಯುತ್ತಿದ್ದಾರೆ.

ಈ ಬಗ್ಗೆ ಗಂಭೀರ ಆರೋಪ ಮಾಡಿರುವ SFI ವಿದ್ಯಾರ್ಥಿ ಸಂಘಟನೆ, ಸಮಸ್ಯೆ ಬಗೆಹರಿಸದೇ ಹೋದರೆ ಗಂಭೀರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದೆ.

ಈ ಸಮಸ್ಯೆಗಳ ಬಗ್ಗೆ ನಿಲಯಪಾಲಕರಾದ ಚಂದ್ರಿಕಾರವರಿಗೆ ಹಲವು ಬಾರಿ ಬಗೆಹರಿಸುವಂತೆ ಒತ್ತಾಯಿಸಿದರು ಯಾವುದೆ ಪ್ರಯೋಜವಾಗಿರುವುದಿಲ್ಲ, ಸಮಸ್ಯೆಗಳನ್ನು ಬಗೆಹರಿಸುವ ಬದಲು ಮಕ್ಕಳ ಮೇಲೆ ದಮಕಿ ಹಾಕಿ ಬೆದರಿಕೆ ದೌರ್ಜನ್ಯವೆಸಗುತ್ತಿದ್ದಾರೆ. ವಿದ್ಯಾರ್ಥಿನಿಯರಿಗೆ ಹಾಸ್ಟೆಲ್‌ ಖಾಲಿ ಮಾಡಿಕೊಂಡು ಹೋಗಿ ಎಂದು ಬೆದರಿಕೆ ಹಾಕುತ್ತಲೆ ಇದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ತಾಲ್ಲೂಕು ಅಧಿಕಾರಿಗಳಿಗೆ  ಬಗ್ಗೆ ಮನವಿ ಮಾಡಿದರು ಯಾವುದೇ ಪ್ರಯೋಜವಾಗಿರುವುದಿಲ್ಲ.  ಚಂದ್ರಿಕಾರವರಿಗೆ ರಾಜಕೀಯ ಪ್ರಭಾವಿಗಳ ಸಂಪರ್ಕ ಇರುವುದರಿಂದ ಅವರನ್ನು ಏನು ಮಾಡಲು ಸಾದ್ಯವಾಗಿರುವುದಿಲ್ಲ. ಹಾಸ್ಟೆಲ್‌ ನಲ್ಲಿ ತೀರ ಕಳಪೆ ಗುಣಮಟ್ಟದ ಆಹಾರವನ್ನು ತಯಾರಿಸುವುದು ಮತ್ತು ಸ್ವಚ್ಚತೆ ಇಲ್ಲದಿರುವುದರಿಂದ ಈಗಾಗಲೆ ನಾನಾ ರೋಗಗಳು ಹರಡಿ ವಿದ್ಯಾರ್ಥಿನಿಯರು ಆಸ್ಪತ್ರೆ ಸೇರಿರುವ ಬಗ್ಗೆ ಸಾಕಷ್ಟು ಉದಾಹರಣೆ ಇದ್ದರೂ ಈ ಅವ್ಯವಸ್ಥೆ ಸರಿಪಡಿಸಿಲ್ಲ ಎಂದು ಆರೋಪಿಸಲಾಗಿದೆ.

ಸಾಮಾಜಿಕವಾಗಿ ಶೋಷಣೆಗೆ ಒಳಗಾದ ಸಮುದಾಯದಿಂದ ದಲಿತ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿನಿಯರು ಇರುವ ಹಾಸ್ಟೆಲ್‌ ಇದಾಗಿದ್ದು ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ವಾತಾವರಣ ನಿರ್ಮಿಸಲು ಬೇಕಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕೂಡಲೆ ಕಲ್ಪಿಸಬೇಕೆಂದು ಉತ್ತಮ ಗುಣಮಟ್ಟದ ಆಹಾರ ನೀಡಬೇಕು ಮತ್ತು ಬೇರೆಯ ನಿಲಯಪಾಲಕರನ್ನು ನೀಯೋಜಿಸಬೇಕು, ಇಲ್ಲವಾದಲ್ಲಿ ಎಸ್‌ ಎಫ್‌ ಐ SFI ಸಂಘಟನೆ ಮುಂದಿನ ಹೋರಾಟದ ಬಗ್ಗೆ ಗಂಭೀರವಾಗಿ ಆಲೋಚಿಸಲಿದೆ ಎಂದು ಮೇಲಧಿಕಾರಿಗಳಿಗೆ ಎಚ್ಚರಿಕೆ ನೀಡಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page