ಬೇಲೂರು: ತಡರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ಮನೆಯ ಮೇಲ್ಛಾವಣಿ ಹಾರಿ ಹೋದ ಘಟನೆ ಬೇಲೂರು ತಾಲ್ಲೂಕಿನ ಅರೇಹಳ್ಳಿ ಹೋಬಳಿ, ದಬ್ಬೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಸ್ ಸೋಮನಹಳ್ಳಿ ಗ್ರಾಮದಲ್ಲಿ ನಡೆದಿದೆ.ಎಸ್ ಸೋಮನಹಳ್ಳಿ ಗ್ರಾಮದ ಗುಂಡೇಗೌಡ ಬಿನ್ ರುದ್ರೆಗೌಡ ಎಂಬುವರ ಮನೆಯ ಮೇಲ್ಛಾವಣಿ ಹಾರಿ ಹೋಗಿದೆ. ಮನೆಯಲ್ಲಿದ್ದ ದವಸ ಧಾನ್ಯಗಳು, ಸಾಮಾಗ್ರಿಗಳು ಹಾಳಾಗಿವೆ. ವಿಪರೀತ ಗಾಳಿಗೆ ಕಂಗಾಲಾಗಿದ್ದ ಮನೆಯವರು ಪಕ್ಕದ ಮನೆಗೆ ತೆರಳಿದ್ದರಿಂದ ಯಾವುದೇ ಜೀವ ಹಾನಿಯಾಗಿಲ್ಲ.
ಇಂದು ಬೆಳಿಗ್ಗೆ ತಹಶೀಲ್ದಾರ್ ಎಂ ಮಮತಾ ರವರು ಎಸ್ ಸೋಮನಹಳ್ಳಿ ಗ್ರಾಮದಲ್ಲಿ ಹಾನಿಗೀಡಾದ ಮನೆಗೆ ಭೇಟಿ ನೀಡಿ ಹಾನಿ ಅಂದಾಜು ಪರಿಶೀಲನೆ ಮಾಡಿದ್ದಾರೆ.ಈ ಸಂದರ್ಭದಲ್ಲಿ ದಬ್ಬೆ ಗ್ರಾಮ ಪಂಚಾಯತಿ ಸದಸ್ಯ ಪಟೇಲ್, ದಬ್ಬೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವಾಸು, ಸಂತೋಷ್, ಆಡಳಿತ ಅಧಿಕಾರಿ ಗುರು ಸೇರಿದಂತೆ ಮತ್ತಿತರರು ಹಾಜರಿದ್ದರು.