ಧರ್ಮಸ್ಥಳ ಪ್ರಕರಣ, ಎಸ್ ಐಟಿ ತನಿಖೆಯಲ್ಲಿ ಮಹತ್ತರ ಬೆಳವಣಿಗೆ ನಡೆದಿದೆ. ಭೂಮಿ ಮೇಲ್ಭಾಗದಲ್ಲಿ ಸಣ್ಣಪುಟ್ಟ ಮೂಳೆಗಳ ತುಂಡುಗಳು ಲಭ್ಯವಾಗಿವೆ. ಮಣ್ಣಿನಲ್ಲಿ ಹುದುಗಿರುವ ಬಟ್ಟೆ, ಮೂಳೆಗಳನ್ನು ಸಂರಕ್ಷಿಸಲಾಗಿದೆ. ಸಧ್ಯ ಎಲ್ಲವೂ ಮುಗಿದೇ ಹೋಯ್ತು ಎಂಬಂತಿದ್ದ ಪ್ರಕರಣ ಮತ್ತೆ ಹೊಸ ರೂಪು ಕಂಡುಕೊಂಡಿದೆ.
ಸ್ಥಳ ಮಹಜರಿನ ಬಳಿಕ ಹಲವಾರು ಅಸ್ಥಿಪಂಜರ ಸಿಕ್ಕಿದೆ ಎಂದು ಸೌಜನ್ಯ ಮಾವ ವಿಠಲಗೌಡ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದರು. ಅಲ್ಲದೆ ತುಕಾರಾಮ ಗೌಡ, ಪುರಂದರ ಗೌಡ ಕೂಡಾ ಈ ಹಿಂದೇ ಇದೇ ಆರೋಪ ಮಾಡಿದ್ದರು. ಈ ಹಿನ್ನಲೆ ಇಡೀ 15 ಎಕರೆಯ ಬಂಗ್ಲೆಗುಡ್ಡೆಯಲ್ಲಿ ಶೋಧ ನಡೆಸಲು 50 ಕ್ಕೂ ಹೆಚ್ಚು ಸಿಬ್ಬಂದಿಗಳೊಂದಿಗೆ ಕಾಡುಪ್ರದೇಶಕ್ಕೆ ಎಸ್ ಐಟಿ ಅಧಿಕಾರಿಗಳು ಎಂಟ್ರಿ ಕೊಟ್ಟಿದ್ದಾರೆ.
ಮಾಹಿತಿಯಂತೆ ಐವರ ಮೃತದೇಹದ ಮೂಳೆಗಳು ಈಗಾಗಲೇ ಸಿಕ್ಕ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಸಿಕ್ಕ ಮೂಳೆಗಳ ಜೊತೆ ಮೂಳೆ ಸಿಕ್ಕ ಜಾಗಗಳ ಮಣ್ಣಿನ ಮಾದರಿಯನ್ನೂ ಸಹ ಎಸ್ಐಟಿ ತಂಡ ತೆಗೆದುಕೊಂಡಿದೆ.
ಬಂಗ್ಲೆಗುಡ್ಡ ಅರಣ್ಯ ಪ್ರದೇಶದಲ್ಲಿ ಎಸ್.ಐ.ಟಿ. ಶೋಧ ಕಾರ್ಯಾಚರಣೆ ವೇಳೆ ಒಂಭತ್ತು ಸ್ಥಳಗಳಲ್ಲಿ ಮಾನವನ ಮೂಳೆಗಳ ಅವಶೇಷಗಳು ಪತ್ತೆಯಾಗಿವೆ.