Home ಬೆಂಗಳೂರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ನಾನು – ಕೆ ರಾಜಣ್ಣ

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ನಾನು – ಕೆ ರಾಜಣ್ಣ

ಬೆಂಗಳೂರು : ಹಾವು ಮುಂಗುಸಿ ಕಿತ್ತಾಡೋದನ್ನ ನೋಡಿದ್ದೀರೋ ಇಲ್ವೋ? ಕೆ.ಎನ್ ರಾಜಣ್ಣ (KN Rajanna), ಡಿಕೆ ಶಿವಕುಮಾರ್ (DK Shivakumar)​ ಬಹಿರಂಗವಾಗಿ ಬೈದಾಡೋದನ್ನು ಖಂಡೀತಾ ನೋಡೇ ಇರ್ತೀರಿ. ಆದರೆ, ಅದೇ ವೈರಿಗಳು ಕಳೆದ ವಾರ ಮೀಟ್ ಆಗಿ, ಸ್ಮೈಲ್ ಕೊಟ್ಟು ಮಾತಾಡಿದ್ದು ರಾಜ್ಯ ರಾಜಕಾರಣದಲ್ಲಿ ಸಂಚಲನವನ್ನೇ ಸೃಷ್ಟಿಸಿತ್ತು. ಇದೀಗ ಮತ್ತೆ ಕಿತ್ತಾಟ ಶುರುವಾಗೋ ಲಕ್ಷಣ ಗೋಚರಿಸುತ್ತಿವೆ.

ನಾನು ಈಗಲೂ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ಮಾಜಿ ಸಹಕಾರಿ ಸಚಿವ ಕೆ.ಎನ್ ರಾಜಣ್ಣ ಪುನರುಚ್ಛರಿಸಿದ್ದಾರೆ. ಆ ಮೂಲಕ ಹಾಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಅವರಿಗೆ ಟಾಂಗ್ ಕೊಟ್ಟಿದ್ದಾರೆ. ಪಕ್ಷದ ಅಧ್ಯಕ್ಷ ಗಿರಿ ಕೊಟ್ರೆ ಮಂತ್ರಿ ಸ್ಥಾನ ಬಿಡ್ತೀನಿ ಎಂದು ಸಚಿವನಾಗಿದ್ದಾಗಲೇ ಹೇಳಿದ್ದೆ. ಈಗ ಬಿಡೋಕೆ ಯಾವುದೇ ಸ್ಥಾನ ಬಾಕಿ ಇಲ್ಲ. ನಾನು ಕೆಪಿಸಿಸಿ ಅಧ್ಯಕ್ಷನಾದ್ರೆ ಪಕ್ಷ ಸಂಘಟನೆ ಮಾಡ್ತೀನಿ. ಹೈಕಮಾಂಡ್​​ಗೆ ಈ ಬಗ್ಗೆ ವಿಷಯ ತಿಳಿಸಿದ್ದೇನೆ ಎಂದು ಮಾಜಿ ಸಚಿವ ಕೆ.ಎನ್​. ರಾಜಣ್ಣ ಹೇಳಿದ್ದಾರೆ.

ಈ ಸಲ ಮಾರ್ಚ್​ ಬಾಂಬ್ ಹಾಕಿದ ರಾಜಣ್ಣ!
ನಾಲ್ಕೈದು ತಿಂಗಳ ಹಿಂದೆ ಕ್ರಾಂತಿಯ ಜನಕ ಕೆ.ಎನ್.ರಾಜಣ್ಣ ರಾಗ ಸಂಯೋಜಿಸಿದ್ದ ರಾಜಕೀಯ ವಿಪ್ಲವ. ಪರಿವರ್ತನೆಯ ಪರ್ವಕ್ಕೆ ಘಳಿಗೆ ಕೂಡಿ ಬರಲೇ ಇಲ್ಲ. ನವೆಂಬರ್​​ ಕಳೀತು, ಡಿಸೆಂಬರ್ ಕೂಡಾ ಹೋಯ್ತು. ಜನವರಿಯೂ ಬಂತು. ಡಿಕೆಶಿ ಅಂತೂ ಶುಭಮುಹೂರ್ತ ನೋಡಲು ಪಂಚಾಂಗ ಖರೀದಿಸಿ ಸುಸ್ತಾದ್ರು.. ಕ್ರಾಂತಿ ಆಗ್ಲೇ ಇಲ್ಲ.. ಉಳಿದಿದ್ದು ಬರೀ ಗೊಂದಲ. ಇದ್ರ ಮಧ್ಯೆ ಅದೇ ರಾಜಣ್ಣ ಹೊಸ ಮುಹೂರ್ತ ಫಿಕ್ಸ್ ಮಾಡಿದ್ದಾರೆ.

ಕ್ರಾಂತಿ ಗೀತೆ ನಡುವೆ ಸಿಎಂ-ಡಿಸಿಎಂ ಬಣಗಳ ನಡುವೆ ಅಸ್ತ್ರ-ಶಸ್ತ್ರಗಳ ಪ್ರಯೋಗಕ್ಕೆ ವಿರಾಮ ಬಿದ್ದಿದೆ. ಕುರ್ಚಿ ಪಾಲಿಟಿಕ್ಸ್‌ನಲ್ಲಿ ಹೈಕಮಾಂಡ್ ನಾಯಕರ ಮುಂದೆ ವಾದ ಮಂಡಿಸೋ ಭಾಗ್ಯವೂ ಸಿಕ್ಕಿಲ್ಲ. ಇದ್ರ ಮಧ್ಯೆ ಸಚಿವ ಸ್ಥಾನದಿಂದ ಗೇಟ್‌ಪಾಸ್ ಪಡೆದಿರೋ ಕೆ.ಎನ್ ರಾಜಣ್ಣ ಜೊತೆ ಸೇರಿ ಸಿಎಂ ಮತ್ತೊಂದು ಚದುರಂಗದ ಆಟಕ್ಕೆ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ. ಸಿಎಂ ಕುರ್ಚಿ ಕಾಳಗದ ಮಧ್ಯೆ ಮಾಜಿ ಸಚಿವ ಕೆ.ಎನ್​ ರಾಜಣ್ಣ ಅಚ್ಚರಿ ಭವಿಷ್ಯ ನುಡಿದಿದ್ದಾರೆ.. ಬಜೆಟ್​ ಮಂಡನೆ ಆಗೋವರೆಗೂ ನಾಯಕತ್ವ ಬದಲಾವಣೆ ಬಗ್ಗೆ ಮಾತ್ನಾಡ್ಬೇಡಿ ಎಂದು ಕೆ.ಎನ್ ರಾಜಣ್ಣ ಅಚ್ಚರಿ ಹೇಳಿಕೆ ನೀಡಿದ್ದಾರೆ.. ಸಿಎಂ ಹೇಳಿದಂತೆ ಹೈಕಮಾಂಡ್​ ನಿರ್ಧಾರಕ್ಕೆ ಬದ್ಧ ಎಂದಿದ್ದಾರೆ.. ಡಿಸಿಎಂ ಡಿಕೆಶಿ ಕೂಡ ವೈರಾಗ್ಯದ ಮಾತು ಹೇಳಿದ್ದಾರೆ.. ಯಾವಾಗ ಏನಾಗುತ್ತೆ ಅಂತ ಊಹಿಸಲು ಆಗಲ್ಲ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲೀಗ ಮಾರ್ಚ್ ಕ್ರಾಂತಿ ಎಂಬ ಭವಿಷ್ಯ ಸ್ಫೋಟಗೊಂಡಿದೆ. ಫೆಬ್ರವರಿ ಒಂದೇ ತಿಂಗಳು ಮಧ್ಯದಲ್ಲಿದೆ. ಕೆ.ಎನ್​​​.ರಾಜಣ್ಣ ಬೆಂಕಿಯಂತ ಭವಿಷ್ಯದ ಮತ್ತೆ ಕಿಡಿ ಹೊತ್ತಿಸಿದ್ರೂ ಅಚ್ಚರಿ ಇಲ್ಲ.

You cannot copy content of this page

Exit mobile version