ಮಂಗಳೂರು: ವಿಧಾನಸೌಧದಿಂದ ಶಾಸಕರನ್ನು ಬೇಕಾದರೆ ಹೊರಗೆ ಹಾಕಬಹುದು. ಆದರೆ ನಾಯಿಗಳನ್ನು ಹೊರ ಹಾಕುವುದು ದೊಡ್ಡ ಸಮಸ್ಯೆಯಾಗಿದೆ ಎಂದು ಸ್ಪೀಕರ್ ಯುಟಿ ಖಾದರ್ ಹೇಳಿಕೆ ನೀಡಿದ್ದಾರೆ.
ನಾಯಿಗಳನ್ನು ಹೊರ ಹಾಕೋದಕ್ಕೆ ಮೀಟಿಂಗ್ ಕರೆದಿದ್ದೇನೆ. ಈ ಮೀಟಿಂಗ್‌ಗೆ ಪ್ರಾಣಿ ದಯಾ ಸಂಘದವರನ್ನು ಕರೆಯುತ್ತೇವೆ. ನಾಯಿಗಳ ಕಾಟದಿಂದ ವಾಕಿಂಗ್ ಮಾಡುವವರಿಗೂ ಸಮಸ್ಯೆ ಆಗುತ್ತಿದೆ ಎಂದು ತಿಳಿಸಿದರು.
ವಿಧಾನಸೌಧದಲ್ಲಿ ನಾಯಿಗಳ ಕಾಟ ಹೆಚ್ಚಾಗಿರುವ ಹಿನ್ನೆಲೆ ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಖಾದರ್, ವಿಧಾನಸೌಧದಲ್ಲಿ ನಾಯಿಗಳ ಕಾಟ ತೀವ್ರವಾಗಿದೆ. ನಾಯಿಗಳ ಪರ ಇದ್ದವರು ಇದ್ದಾರೆ, ವಿರೋಧ ಇದ್ದವರು ಕೂಡಾ ಇದ್ದಾರೆ. ಅದನ್ನು ಹೊರಗೆ ಹಾಕುವುದೇ ದೊಡ್ಡ ಸಮಸ್ಯೆ ಆಗಿದೆ ಎಂದರು.