Home ರಾಜಕೀಯ ಬಿಜೆಪಿ ಅಧ್ಯಕ್ಷ ಪಟ್ಟಕ್ಕೆ ನಾನೂ ಸ್ಪರ್ಧಿಸುತ್ತೇನೆ: ಯತ್ನಾಳ

ಬಿಜೆಪಿ ಅಧ್ಯಕ್ಷ ಪಟ್ಟಕ್ಕೆ ನಾನೂ ಸ್ಪರ್ಧಿಸುತ್ತೇನೆ: ಯತ್ನಾಳ

0

ಬಿಜೆಪಿ ರಾಜ್ಯಾಧ್ಯಕ್ಷ ಚುನಾವಣೆಗೆ ಸ್ಪರ್ಧಿಸಲು ನಿರ್ಣಯಿಸಿದ್ದೇವೆ. ನಮ್ಮೊಂದು ಕೋರ್‌ ಕಮಿಟಿ ಇದೆ. ಅಲ್ಲಿ ಹೆಸರು ಅಂತಿಮವಾದರೆ ನನ್ನ ಸ್ಪರ್ಧೆ ಖಚಿತ. ಗೆಲುವು ನಿಶ್ಚಿತ. ಬಿಜೆಪಿಯಲ್ಲಿ ಪ್ರಜಾತಂತ್ರ ಇದೆ ಎಂದು ತೋರಿಸಿ ಕೊಡುತ್ತೇವೆ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ತಿಳಿಸಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ಪಕ್ಷಕ್ಕೆ ಕಾರ್ಯಕರ್ತರಲ್ಲಿ ಹುರುಪು ತುಂಬುವವರು ಅಧ್ಯಕ್ಷರಾಗಬೇಕು. ರಾತ್ರಿ-ಹಗಲು ಡಿ.ಕೆ.ಶಿವಕುಮಾರ್‌ ಮನೆಯಲ್ಲಿದ್ದರೆ ಹೇಗೆ ಬಿಜೆಪಿ ಉದ್ಧಾರವಾಗುತ್ತದೆ? ರಾತ್ರಿ ಡಿ.ಕೆ.ಶಿವಕುಮಾರ್‌ ಮನೆ, ಬೆಳಗ್ಗೆ 4 ಗಂಟೆಗೆ ಸಿದ್ದರಾಮಯ್ಯ ಮನೆ, 11 ಗಂಟೆಗೆ ಬೋಲೋ ಭಾರತ್‌ ಮಾತಾಕಿ ಜೈ ಎಂದರೆ ನಡೆಯುತ್ತಾ? ವಿಜಯೇಂದ್ರಗೆ 60 ಶಾಸಕರ ಬೆಂಬಲ ಇದೆ ಎಂದು ಯಾರೋ ಒಬ್ಬರು ಹೇಳಿದ್ದಾರೆ. ಅದು 60 ಅಲ್ಲ, 600 ಶಾಸಕರ ಬೆಂಬಲ ಇರಬೇಕು. ಅವರಿಗೆ 1,500 ಸಂಸದರ ಬೆಂಬಲ ಇದೆ. 2,000 ವಿಧಾನ ಪರಿಷತ್‌ ಸದಸ್ಯರ ಬೆಂಬಲ ಇದೆ. ಇಡೀ ರಾಜ್ಯದ ಕಾರ್ಯಕರ್ತರ ಬೆಂಬಲ ಇದೆ. ಯತ್ನಾಳ್‌, ಜಾರಕಿಹೊಳಿ ಹಿಂದೆ ಯಾರಿದ್ದಾರೆ ಎಂದು ವ್ಯಂಗ್ಯವಾಡಿದರು.

ರೆಡ್ಡಿ-ಶ್ರೀರಾಮುಲು ಒಂದಾಗಬೇಕು
ಮಾಜಿ ಸಚಿವರಾದ ಜನಾರ್ದನ ರೆಡ್ಡಿ, ಶ್ರೀರಾಮುಲು ಕಷ್ಟದಿಂದ ಬಂದಿದ್ದಾರೆ. ಅವರಿಬ್ಬರೂ ಗೋಡೆ ಒಡೆದು ಒಂದಾಗಬೇಕು ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ನಾನು ಕೇಂದ್ರ ಸಚಿವನಾಗಿದ್ದ ವೇಳೆ ಜನಾರ್ದನ ರೆಡ್ಡಿ, ಶ್ರೀರಾಮುಲು, ಕರುಣಾಕರ ರೆಡ್ಡಿ, ಸೋಮಶೇಖರ್‌ ಒಂದೇ ಸ್ಕೂಟರ್‌ನಲ್ಲಿ ಓಡಾಡುತ್ತಿದ್ದರು. ಅಲ್ಲಿಂದ ಹೆಲಿಕ್ಟಾಪರ್‌ವರೆಗೂ ಹೋಗಿದ್ದರು. ಕಷ್ಟ ಇದ್ದಾಗ ಕೂಡಿ ಬಂದಿದ್ದೀರಿ. ಇಬ್ಬರೂ ಕಾಂಪೌಂಡ್‌ ಒಡೆದು ಮತ್ತೆ ಒಂದಾಗಬೇಕು ಎಂದರು.

You cannot copy content of this page

Exit mobile version