ಹೊಸದಿಲ್ಲಿ: ಕೇರಳದ ಕೇವಲ ಹಿಂದೂ ಐಎಎಸ್ ಅಧಿಕಾರಿಗಳ ಸಂಖ್ಯೆಯೊಂದಿಗೆ “ಮಲ್ಲು ಹಿಂದೂ ಅಧಿಕಾರಿಗಳು” ಎಂಬ ವಾಟ್ಸಾಪ್ ಗ್ರೂಪ್ ಕ್ರಿಯೇಟ್ ಮಾಡಿದ್ದ ಐಎಎಸ್ ಅಧಿಕಾರಿ ಗೋಪಾಲಕೃಷ್ಣನ್ ಅವರನ್ನು ಕೇರಳ ಸರ್ಕಾರ ಅಮಾನತು ಮಾಡಿದೆ.
ವಾಟ್ಸ್‌ಆ್ಯಪ್ ಗ್ರೂಪ್ ಒಗ್ಗಟ್ಟನ್ನು ಹಾಳು ಮಾಡುತ್ತಿದೆ ಮತ್ತು ರಾಜ್ಯದಲ್ಲಿನ ಅಖಿಲ ಭಾರತ ಸೇವಾ ಅಧಿಕಾರಿಗಳ ನಡುವೆ ಒಡಕು ಮೂಡಿಸುತ್ತಿದೆ ಎಂದು ಅಮಾನತು ಆದೇಶದಲ್ಲಿ ತಿಳಿಸಲಾಗಿದೆ. ಇದೇ ಕಾರಣಕ್ಕಾಗಿ ಗೋಪಾಲಕೃಷ್ಣನ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಅಕ್ಟೋಬರ್‌ನಲ್ಲಿ ವಾಟ್ಸಾಪ್ ಗ್ರೂಪ್ ವಿವಾದ ಹೊರಬಿದ್ದಿತ್ತು. ಆದರೆ, ಯಾರೋ ತಮ್ಮ ಫೋನ್ ಹ್ಯಾಕ್ ಮಾಡಿ ತನಗೆ ತಿಳಿಯದಂತೆ ಗ್ರೂಪ್ ಕ್ರಿಯೇಟ್ ಮಾಡಿ ಅಡ್ಮಿನ್ ಮಾಡಿದ್ದಾರೆ ಎಂದು ಗೋಪಾಲಕೃಷ್ಣನ್ ವಿವರಿಸಿದ್ದರು.
ಪಿಣರಾಯಿ ವಿಜಯನ್ ಸರ್ಕಾರವು ಸಿಎಸ್ ಶಾರದಾ ಮುರಳೀಧರನ್ ನೇತೃತ್ವದಲ್ಲಿ ತನಿಖಾ ತಂಡವನ್ನು ನೇಮಿಸಿತ್ತು. ವಿಚಾರಣೆಯ ವೇಳೆ ಗೋಪಾಲಕೃಷ್ಣನ್ ಫೋನ್ ಅನ್ನು ಫೊರೆನ್ಸಿಕ್ ಪರೀಕ್ಷೆಗೆ ನೀಡುವಾಗ ಹಲವು ಬಾರಿ ರೀಸೆಟ್ ಮಾಡಿದ್ದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಇದರೊಂದಿಗೆ ಅವರನ್ನು ಅಮಾನತುಗೊಳಿಸಲಾಗಿದೆ.