ದೇಶಾದ್ಯಂತ ನಡೆಯುತ್ತಿರುವ ಬುಲ್ಡೋಜರ್ ಕ್ರಮಗಳ ವಿರುದ್ಧ ಸಲ್ಲಿಸಲಾದ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ ಇಂದು (ನವೆಂಬರ್ 13, 2024) ತೀರ್ಪು ನೀಡಲಿದೆ. ಇಡೀ ದೇಶಕ್ಕೆ ಅನ್ವಯವಾಗುವಂತೆ ಮಾರ್ಗಸೂಚಿಗಳನ್ನು ರೂಪಿಸುವುದಾಗಿ ನ್ಯಾಯಾಲಯ ಹೇಳಿದೆ.
ಈ ಪ್ರಕರಣವನ್ನು ಆಲಿಸಿದ ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 17ರಂದು ಬುಲ್ಡೋಜರ್ ಕ್ರಮವನ್ನು ನಿಷೇಧಿಸಿತ್ತು. ಆ ನಿಷೇಧ ಇನ್ನೂ ಮುಂದುವರಿದಿದೆ.
ತೀರ್ಪನ್ನು ಕಾಯ್ದಿರಿಸುವಾಗ, ಕಾನೂನಿನಲ್ಲಿ ಈಗಾಗಲೇ ಲಭ್ಯವಿರುವ ಪರಿಹಾರಗಳ ಬಗ್ಗೆ ಮಾತ್ರ ಮಾತನಾಡುವುದಾಗಿ ನ್ಯಾಯಾಲಯ ಸ್ಪಷ್ಟಪಡಿಸಿದೆ. ಯಾವುದೇ ಕ್ರಮವನ್ನು ನಿಯಮಾನುಸಾರ ಮಾತ್ರ ಕೈಗೊಳ್ಳಬೇಕು ಎಂದು ಕೋರ್ಟ್ ಹೇಳಿತ್ತು. ಈ ನಿಟ್ಟಿನಲ್ಲಿ ಕೋರ್ಟ್ ಮಾರ್ಗಸೂಚಿಗಳನ್ನು ರಚಿಸಲಿಸಿದೆ. ರಸ್ತೆ, ಫುಟ್ ಪಾತ್ ಇತ್ಯಾದಿಗಳಲ್ಲಿ ಅಕ್ರಮ ನಿರ್ಮಾಣಕ್ಕೆ ಯಾವುದೇ ರಕ್ಷಣೆ ನೀಡುವುದಿಲ್ಲ. ವ್ಯವಸ್ಥಿತವಾಗಿ ಅತಿಕ್ರಮಣ ಮಾಡುವವರಿಗೆ ಸಹಕಾರಿಯಾಗುವ ಯಾವುದೇ ಆದೇಶ ನೀಡುವುದಿಲ್ಲ ಎಂದೂ ನ್ಯಾಯಾಲಯ ಹೇಳಿತ್ತು.