Home ದೇಶ ಕೇಂದ್ರ ಗೃಹ ಮಂತ್ರಿ ರಾಜಿನಾಮೆ ನೀಡದಿದ್ರೆ ಹೋರಾಟ ಸಂಸದ ಶ್ರೇಯಸ್ ಎಂ. ಪಟೇಲ್

ಕೇಂದ್ರ ಗೃಹ ಮಂತ್ರಿ ರಾಜಿನಾಮೆ ನೀಡದಿದ್ರೆ ಹೋರಾಟ ಸಂಸದ ಶ್ರೇಯಸ್ ಎಂ. ಪಟೇಲ್

0


ಹಾಸನ: ಸಂವಿಧಾನ ಶಿಲ್ಪಿಡಾ. ಬಿ.ಆರ್. ಅಂಬೇಡ್ಕರ್‌ಅವರಬಗ್ಗೆ ತುಚ್ಯವಾಗಿ ಮಾತನಾಡಿರುವುದನ್ನು ಮಾಧ್ಯಮದ ಮೂಲಕ ಇಡೀದೇಶ ಗಮನಿಸುತ್ತಿದೆ. ಅಂದು ಸಂಸತ್ತಿನಲ್ಲಿ ಪ್ರತಿಭಟನೆಕೂಡ ನಡೆಸಲಾಗಿದ್ದು, ಕೇಂದ್ರ ಗೃಹ ಸಚಿವಅಮಿತ್ ಶಾ ಅವರುಕೂಡಲೇ ಸಾರ್ವಜನಿಕವಾಗಿ ಕ್ಷಮೆ ಕೇಳಿ ಅವರರಾಜೀನಾಮೆ ಪಡೆಯಬೇಕುಎಂದು ಲೋಕಸಭಾ ಸದಸ್ಯ ಶ್ರೇಯಸ್ ಎಂ. ಪಟೇಲ್ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಅವರದರ್ಪ, ದೌರ್ಜನ್ಯ ಎಲ್ಲಾವು ಅನೇಕರಿಗೆ ಗೊತ್ತಿದ್ದು, ಸಂವಿಧಾನ ಶಿಲ್ಪಿ ಪರವಾಗಿ ವಿರೋಧ ಪಕ್ಷದ ನಾಯಕರಾದ ರಾಹುಲ್‌ಗಾಂಧಿಗೆ ಸಂಸತ್ ಪ್ರವೇಶಕ್ಕೆ ತಡೆ ಮಾಡಿದ್ದಾರೆ. ಇದನ್ನು ಎಲ್ಲಾರು ಖಂಡಿಸುತ್ತೇವೆ. ಪ್ರಧಾನಿಗಳು ಕೂಡಲೇ ಅಮಿತ್ ಶಾ ಅವರ ರಾಜೀನಾಮೆ ಪಡೆಯಬೇಕು. ಈ ಬಗ್ಗೆ ಒಂದುಕ್ಷಮೆ ಕೇಳದೆ ಇರುವುದು ವಿಷಾದನಿಯ ಸಂಗತಿ. ಅಮಿತ್ ಶಾ ಅವರ ರಾಜೀನಾಮೆ ಪಡೆಯದಿದ್ದರೆ ಕಾಂಗ್ರೆಸ್ ಪಕ್ಷದಿಂದ ದೇಶದಾದ್ಯಂತ ಹೋರಾಟ ನಡೆಸುವ ನಿಟ್ಟಿನಲ್ಲಿ ಹಿರಿಯ ಮುಖಂಡರೆಲ್ಲ ತೀರ್ಮಾನ ಕೈಗೊಂಡಿದ್ದು ,ಅಮಿತ್ ಶಾ ಅವರರಾಜೀನಾಮೆ ಪಡೆಯಲುಕೇಂದ್ರದ ನಾಯಕರುಗಡುವು ನೀಡಿದ್ದು, ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳದೆ ಇದ್ದರೆ ಕಾಂಗ್ರೆಸ್‌ ಪಕ್ಷದಿಂದ ಹೋರಾಟವನ್ನು ನಡೆಸಲಾಗುವುದು ಎಂದರು. ಕಳೆದ ಒಂದು ದಿನಗಳ ಹಿಂದೆ ಹೆಚ್.ಡಿ. ಕುಮಾರಸ್ವಾಮಿಯವರು ಮಾತನಾಡುವಾಗ ರಾಜ್ಯ ಸರ್ಕಾರದ ವಿರುದ್ಧಇಲ್ಲ ಸಲ್ಲದ ಆರೋಪವನ್ನು ಮಾಡಿದ್ದಾರೆ. ಶೂನ್ಯ ಅಭಿವೃದ್ಧಿಎಂದು ಹೇಳಿರುವ ಅವರುಆರು ತಿಂಗಳು ಏನು ಸಾಧನೆ ಮಾಡಿದ್ದಾರೆಎಂದು ತಿಳಿಸಲಿ. ಅವರ ಸಾಧನೆಯನ್ನು ಶ್ವೇತ ಪತ್ರದಲ್ಲಿ ಬಿಡುಗಡೆ ಮಾಡಲಿ ನಾವು ಸಹ ಪುಟ್ಟಸ್ವಾಮಿಗೌಡ ಶ್ರೀಕಂಠಯ್ಯ ಹಾಗೂ ನನ್ನಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕುರಿತು ಶ್ವೇತಪತ್ರ ಬಿಡುಗಡೆ ಮಾಡುತ್ತೇವೆ ಆಗೇ ದೇವೇಗೌಡರ ಕುಟುಂಬವು ಕೂಡ ಶ್ವೇತ ಪತ್ರ ಹೊರಡಿಸಲಿ ಎಂದು ಸವಾಲು ಹಾಕಿದರು.ರಾಜ್ಯ ಸರ್ಕಾರದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ವಿರುದ್ಧಇಲ್ಲಸಲ್ಲದ ಹೇಳಿಕೆ ಹಾಗೂ ಪದಬಳಕೆ ಮಾಡಿರುವುದು ಸರಿಯಲ್ಲ .ಸಿಡಿ ವಿಚಾರವನ್ನು ಮರು ಪ್ರಸ್ತಾಪ ಮಾಡಿದರೆಇಲ್ಲಸಲ್ಲದ ವಿಚಾರಗಳು ಹೇಳಬೇಕಾಗುತ್ತದೆ. ಆದ್ದರಿಂದ ಆ ಬಗ್ಗೆ ನಾನು ಎನನ್ನು ಮಾತನಾಡುವುದಿಲ್ಲ ಎಂದು ಹೇಳಿದರು.
ಬಿಜೆಪಿ ಮುಖಂಡ ಸಿ.ಟಿ. ರವಿ ಮತ್ತು ಲಕ್ಷಿö್ಮ ಹೆಬ್ಬಾಳ್ಕರ್ ಕುರಿತು ಪ್ರತಿಕ್ರಯಿಸಿ, ಅವರಿಗೂಕೂಡತಾಯಿ, ಮಡದಿ ಇದ್ದಾರೆ. ಸದನದಲ್ಲಿಆ ರೀತಿ ಪದ ಬಳಕೆ ಮಾಡುವುದು ಸರಿಯಲ್ಲ.ಅವರು ಮಾತನಾಡಿರುವಪದದ ಬಗ್ಗೆ ಅವರ ಪಕ್ಷದವರಲ್ಲೆ ವಿರೋಧಇದೆ. ಈಗಾಗಲೇ ಈ ಪ್ರಕರಣವನ್ನು ಸಿಐಡಿಗೆಗೆ ವಹಿಸಿದ್ದು, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದ ಎಂದು ಆಗ್ರಹಿಸಿದರು.
ಟೋಲ್ ಸಂಗ್ರಹ ಮಾಡುವಂತೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ. ಇತ್ತೀಚಿಗೆ ಜಿಲ್ಲಾಧಿಕಾರಿಗಳು ಟೋಲ್‌ಸಂಗ್ರಹ ಮಾಡದಂತೆ ಆದೇಶ ನೀಡಿರುವ ಹಿನ್ನೆಲೆಯಲ್ಲಿಅವರಿಗೆ ಕೇಂದ್ರ ಸರ್ಕಾರದಿಂದಲೆ ನೋಟಿಸ್‌ ಜಾರಿ ಮಾಡಿದ್ದು, ಟೂಲ್ ಸಂಗ್ರಹಕೇAದ್ರ ಪ್ರಾರಂಭಿಸುವುದು ಅನಿವಾರ್ಯವಾಗಿದೆಎಂದು ಹೇಳಿದರು. ೨೦ ಕಿ.ಮಿ. ಅಂತರದಲ್ಲಿ ಸ್ಥಳೀಯರು ಆದಾರ್‌ಕಾರ್ಡ್ ನೋಡಿ ಉಚಿತವಾಗಿ ಸಂಚರಿಸಬಹುದು, ಇನ್ನುಳಿದಂತೆ ದೂರದ ಊರಿನವರು ಟೋಲ್‌ ಕಟ್ಟಿ ಹೋಗಬೇಕಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ‌ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಈ.ಎಚ್. ಲಕ್ಷಣ್, ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ, ತಾರಾ ಚಂದನ್, ಪ್ರಸನ್ನ ಕುಮಾರ್, ಹುಡಾ ಮಾಜಿ ಅಧ್ಯಕ್ಷ ಕೃಷ್ಣಕುಮಾರ್, ಆರೀಫ್, ಮಂಜುನಾಥ್ ಶರ್ಮಇತರರು ಉಪಸ್ಥಿತರಿದ್ದರು.

You cannot copy content of this page

Exit mobile version