ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ: ಐಐಟಿ ಬಾಂಬೆ ಡೀನ್ ಸೂರ್ಯನಾರಾಯಣ ದುಲ್ಲಾ ಅಮಾನತು; ಕ್ಷಮೆಯಾಚಿಸಿದ ಸಂಸ್ಥೆ

ಮುಂಬೈ: ಬಿಟೆಕ್ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿದಂತೆ ಐಐಟಿ ಬಾಂಬೆ ಆಡಳಿತ ಮಂಡಳಿಯು ಪ್ರೊಫೆಸರ್ ಸೂರ್ಯನಾರಾಯಣ ದುಲ್ಲಾ ಅವರನ್ನು ಡೀನ್ ಹುದ್ದೆಯಿಂದ ಅಮಾನತುಗೊಳಿಸಿದೆ.

ಬಿಟೆಕ್ ದ್ವಿತೀಯ ವರ್ಷದ ವಿದ್ಯಾರ್ಥಿ ಸಾಹಿಲ್ ವಾಕೋಡೆ ಸೆಪ್ಟೆಂಬರ್ 18ರಂದು ತನ್ನ ಹಾಸ್ಟೆಲ್ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ದುರಂತದ ಬೆನ್ನಲ್ಲೇ ವಿದ್ಯಾರ್ಥಿಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಡೀನ್ ಹುದ್ದೆಯಿಂದ ಪ್ರೊಫೆಸರ್ ಸೂರ್ಯನಾರಾಯಣ ದುಲ್ಲಾ ಅವರನ್ನು ಅಮಾನತುಗೊಳಿಸಿರುವ ಸಂಸ್ಥೆಯು, ವಿದ್ಯಾರ್ಥಿಯ ಸಾವಿನ ಕುರಿತು ಈ ಹಿಂದೆ ಮಾಡಲಾಗಿದ್ದ ಹೇಳಿಕೆಗಳಿಗೆ ಅಧಿಕೃತವಾಗಿ ಕ್ಷಮೆಯಾಚಿಸಿದೆ.

ಇದೇ ವೇಳೆ, ಐಐಟಿ ಬಾಂಬೆ ನಿರ್ದೇಶಕ ಪ್ರೊಫೆಸರ್ ಶಿರೀಷ್ ಕೇದಾರೆ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ನಿರ್ಗಮಿಸಿದ್ದಾರೆ ಎಂಬ ವದಂತಿಗಳನ್ನು ಸಂಸ್ಥೆಯು ಸ್ಪಷ್ಟವಾಗಿ ತಳ್ಳಿಹಾಕಿದೆ.

ಮತ್ತೊಂದೆಡೆ, ಅಮಾನತುಗೊಂಡಿರುವ ಡೀನ್ ಸೂರ್ಯನಾರಾಯಣ ದುಲ್ಲಾ ಅವರ ಬೆಂಬಲಕ್ಕೆ ಐಐಟಿ ಬಾಂಬೆ ಫ್ಯಾಕಲ್ಟಿ ಫೋರಂ ನಿಂತಿದೆ. ಅವರು ಫ್ಯಾಕಲ್ಟಿ ಸದಸ್ಯರಾಗಿ ಮುಂದುವರಿಯಲಿದ್ದಾರೆ ಎಂದು ಫೋರಂ ಸ್ಪಷ್ಟಪಡಿಸಿದೆ.

Related Articles

ಇತ್ತೀಚಿನ ಸುದ್ದಿಗಳು