Sunday, July 27, 2025

ಸತ್ಯ | ನ್ಯಾಯ |ಧರ್ಮ

ಅಕ್ರಮ ದಂತ ಪ್ರಕರಣ- ನಟ ಮೋಹನ್ ಲಾಲ್ ಗೆ ಕಂಟಕ

ಕೊಚ್ಚಿ : ಅಕ್ರಮ ದಂತ ಹೊಂದಿರುವ ಆರೋಪದ ಮೇಲೆ ನಟ ಮೋಹನ್‌ ಲಾಲ್‌ಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ವಿಚಾರಣೆಗೆ ಖುದ್ದು ಹಾಜರಾಗುವಂತೆ ಕೇರಳದ ಎರ್ನಾಕುಲಂ ಜಿಲ್ಲೆಯ ಪೆರುಂಬವೂರ್ ಮ್ಯಾಜಿಸ್ಟ್ರೇಟ್ ಕೋರ್ಟ್‌ ಆದೇಶ ನೀಡಿದೆ.

ನಟ ಮೋಹನ್‌ಲಾಲ್ ವಿರುದ್ಧದ ಈ ಆರೋಪದ ಮೇಲಿನ ಮೊಕದ್ದಮೆಯನ್ನು ಹಿಂಪಡೆಯುವಂತೆ ಕೇರಳ ಸರ್ಕಾರದ ಮನವಿಯನ್ನು ಪೆರುಂಬವೂರ್ ಮ್ಯಾಜಿಸ್ಟ್ರೇಟ್ ಕೋರ್ಟ್ ಮತ್ತೆ ತಿರಸ್ಕರಿಸಿದೆ. ಸರ್ಕಾರದ ಈ ಮನವಿಯಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಇಲ್ಲದೇ ಇರುವುದರಿಂದ ಮತ್ತು ಒಬ್ಬ ವ್ಯಕ್ತಿಯ ಪರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿರುವುದರಿಂದ ಮನವಿಯನ್ನು ಕೋರ್ಟ್‌ ತಿರಸ್ಕರಿಸಿದೆ.

ಮೋಹನ್ ಲಾಲ್ ಮತ್ತು ಪ್ರಕರಣದ ಇತರ ಆರೋಪಿಗಳಿಗೆ ನವೆಂಬರ್ 3 ರಂದು ಖುದ್ದು ಕೋರ್ಟ್‌ಗೆ ಹಾಜರಾಗುವಂತೆ ನ್ಯಾಯಾಲಯ ಆದೇಶಿಸಿದೆ.

ಈ ದಂತವನ್ನು ಉಡುಗೊರೆಯಾಗಿ ಬಂದಿರುವುದಾಗಿ ಮೋಹನ್ ಲಾಲ್ ಹೇಳಿಕೊಂಡಿದ್ದರು. ಸೆರೆ ಸಿಕ್ಕ ಆನೆಗಳ ದಂತವಾಗಿರುವುದರಿಂದ ಅರಣ್ಯ ವನ್ಯಜೀವಿ ಕಾಯ್ದೆ ಮೋಹನ್‌ ಲಾಲ್‌ ಪ್ರಕರಣಕ್ಕೆ ಅನ್ವಯಿಸುವುದಿಲ್ಲ ಎಂಬುದು ಸರ್ಕಾರದ ನಿಲುವಾಗಿತ್ತು. ಆದರೆ ನ್ಯಾಯಾಲಯವು ಈ ವಾದಗಳನ್ನು ತಿರಸ್ಕರಿಸಿದೆ.

2011ರಲ್ಲಿ ಕೊಚ್ಚಿಯಲ್ಲಿರುವ ಮೋಹನ್‌ ಲಾಲ್ ಮನೆಯ‌ಲ್ಲಿ ನಡೆದ ಆದಾಯ ತೆರಿಗೆ ಇಲಾಖೆಯ ತಪಾಸಣೆಯ ವೇಳೆ ದಂತವನ್ನು ವಶಪಡಿಸಿಕೊಳ್ಳಲಾಗಿತ್ತು. ವನ್ಯಜೀವಿ (ರಕ್ಷಣೆ) ಕಾಯ್ದೆಯ ಅಡಿಯಲ್ಲಿ ನಟನ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ನಂತರ ಪ್ರಕರಣವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿತ್ತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page