Home ಬ್ರೇಕಿಂಗ್ ಸುದ್ದಿ ಸಕಲೇಶಪುರ ಅಕ್ರಮ ಮರಳು ಸಾಗಾಟ, ಮೂರು ವಾಹನಗಳ ವಶ – ಎಫ್‌ ಐ ಆರ್‌ ದಾಖಲು

ಸಕಲೇಶಪುರ ಅಕ್ರಮ ಮರಳು ಸಾಗಾಟ, ಮೂರು ವಾಹನಗಳ ವಶ – ಎಫ್‌ ಐ ಆರ್‌ ದಾಖಲು

ಸಕಲೇಶಪುರ : ಪಟ್ಟಣದಲ್ಲಿ ರಾಜಾರೋಷವಾಗಿ ನಡೆಯುತ್ತಿದ್ದ ಅಕ್ರಮ ಮರಳು ದಂದೆಯ ಮೇಲೆ ನಗರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಮಹೇಶ್ ಅವರು ಭರ್ಜರಿ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಮೂರು ಪಿಕಪ್ ವಾಹನಗಳನ್ನು ಮಾಲು ಸಮೇತ ವಶಪಡಿಸಿಕೊಳ್ಳಲಾಗಿದ್ದು, ಮೂವರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ.​ಮಧ್ಯರಾತ್ರಿ ನಡೆದ ಕಾರ್ಯಾಚರಣೆ​ಪಟ್ಟಣದ ಸಮೀಪದ ಹೆದ್ದಾರಿ ಸೇತುವೆಯ ಬಳಿ ಮಧ್ಯರಾತ್ರಿ ದಂದೆಕೋರರು ರಾಜಾರೋಷವಾಗಿ ಮರಳು ಸಾಗಾಟಕ್ಕೆ ಮುಂದಾಗಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಬ್ ಇನ್ಸ್‌ಪೆಕ್ಟರ್ ಮಹೇಶ್ ಮತ್ತು ತಂಡದವರು ತಕ್ಷಣವೇ ಸ್ಥಳಕ್ಕೆ ಧಾವಿಸಿ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಸಿಕ್ಕಿಬಿದ್ದ ಧರ್ಮ( ಕೌಡಳ್ಳಿ ), ಅಪ್ಸರ್ ಹಾಗೂ ರಾಜಿಕ್ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ವಶಪಡಿಸಿಕೊಂಡ ವಾಹನಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.

ಈ ವಾಹನಗಳ ಮೇಲೆ ಪಿಸಿಆರ್ (PCR) ಪ್ರಕ್ರಿಯೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.​ಅಧಿಕಾರಿಗಳಿಗೇ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಬಲಿಷ್ಠ ಜಾಲ, ಸಕಲೇಶಪುರ ತಾಲೂಕಿನಲ್ಲಿ ಅಕ್ರಮ ಮರಳು ದಂದೆಯ ಜಾಲ ಅತ್ಯಂತ ಬಲಿಷ್ಠವಾಗಿ ಬೇರೂರಿದೆ. ಈ ದಂದೆಕೋರರು ಕೇವಲ ಕಳ್ಳತನ ಮಾಡುವುದಷ್ಟೇ ಅಲ್ಲದೆ, ಅತ್ಯಂತ ಚಾಲಾಕಿತನದಿಂದ ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಹಾಗೂ ಭೂ ಮತ್ತು ಗಣಿ ಇಲಾಖೆಯ ಅಧಿಕಾರಿಗಳ ಚಲನವಲನಗಳ ಮೇಲೆಯೇ ಕಣ್ಣಿಟ್ಟಿರುತ್ತಾರೆ. ಅಧಿಕಾರಿಗಳು ಎತ್ತ ಹೋಗುತ್ತಾರೆ ಎಂಬ ಮಾಹಿತಿ ಪಡೆದು, ಅವರಿಗೆ ದಾರಿ ತಪ್ಪಿಸಿ ಈ ದಂದೆ ನಡೆಸಲಾಗುತ್ತಿತ್ತು. ಇಲಾಖೆಯು ಎಷ್ಟೇ ಪ್ರಯತ್ನಿಸಿದರೂ ಈ ಅಕ್ರಮ ದಂದೆ ಹತೋಟಿಗೆ ಬರುತ್ತಿರಲಿಲ್ಲ.​ದಂದೆಯ ತಂತ್ರಗಾರಿಕೆ :​ಮೂಲಗಳ ಪ್ರಕಾರ, ಇದರ ಹಿಂದೆ ದೊಡ್ಡದೊಂದು ಜಾಲವೇ ಕೆಲಸ ಮಾಡುತ್ತಿದೆ. ನದಿಯಿಂದ ಪಿಕಪ್ ವಾಹನಗಳ ಮೂಲಕ ಮರಳನ್ನು ಕದ್ದು ತಂದು ಒಂದು ಕಡೆ ಶೇಖರಣೆ ಮಾಡಲಾಗುತ್ತದೆ. ಆ ಬಳಿಕ ದೊಡ್ಡ ಲಾರಿಗಳ ಮೂಲಕ ಹೊರ ಊರುಗಳಿಗೆ ಸಾಗಿಸಿ, ಭಾರಿ ಬೆಲೆಗೆ ಮಾರಾಟ ಮಾಡಿ ಲಾಭ ಮಾಡಿಕೊಳ್ಳಲಾಗುತ್ತಿತ್ತು.​ಅಧಿಕಾರಿಗಳ ಕಣ್ಣು ತಪ್ಪಿಸಿ ಸಾಗುತ್ತಿದ್ದ ಈ ಜಾಲವನ್ನು ಭೇದಿಸಿ, ದಂದೆಗೆ ಬ್ರೇಕ್ ಹಾಕಿರುವ ಸಬ್ ಇನ್ಸ್‌ಪೆಕ್ಟರ್ ಮಹೇಶ್ ಅವರ ದಕ್ಷ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಿಂದ ಭಾರಿ ಶ್ಲಾಘನೆ ಮತ್ತು ಪ್ರಶಂಸೆ ವ್ಯಕ್ತವಾಗಿದೆ.

You cannot copy content of this page

Exit mobile version