Home ದೇಶ ಮರಾಠವಾಡ: 11 ತಿಂಗಳಲ್ಲಿ 822 ಮಂದಿ ರೈತರು ಸಾವಿಗೆ ಶರಣು

ಮರಾಠವಾಡ: 11 ತಿಂಗಳಲ್ಲಿ 822 ಮಂದಿ ರೈತರು ಸಾವಿಗೆ ಶರಣು

0

ಛತ್ರಪತಿ ಶಂಭಾಜಿನಗರ: ಮಹಾರಾಷ್ಟ್ರದ ಮರಾಠವಾಡ ಪ್ರದೇಶದ 8 ಜಿಲ್ಲೆಗಳಲ್ಲಿ 2024ರಲ್ಲಿ 800ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಶುಕ್ರವಾರ ಬಹಿರಂಗಪಡಿಸಿದ್ದಾರೆ.

303 ಕುಟುಂಬಗಳಿಗೆ ಪರಿಹಾರ ನೀಡಲಾಗಿದ್ದು, ಇನ್ನೂ 314 ಪ್ರಕರಣಗಳಲ್ಲಿ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.

ವಿಭಾಗೀಯ ಕಚೇರಿ ನೀಡಿರುವ ವರದಿ ಪ್ರಕಾರ ಮರಾಠವಾಡದಲ್ಲಿ 822 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೀಡ್ ಜಿಲ್ಲೆಯಲ್ಲಿ 160 ರೈತರು ಬಲವಂತವಾಗಿ ಸಾವಿಗೆ ಶರಣಾಗಿದ್ದಾರೆ.

ನವೆಂಬರ್ 30ರವರೆಗೆ 303 ಪ್ರಕರಣಗಳಲ್ಲಿ ರೂ. 3.03 ಕೋಟಿ ಪರಿಹಾರ ನೀಡಲಾಗಿದ್ದು, ಇನ್ನೂ 314 ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖೆ ಬಾಕಿ ಇದೆ. ಬೀಡ್ ನಂತರ, ನಾಂದೇಡ್ (146) ಮತ್ತು ಧಾರಶಿವ್ (143) ನಲ್ಲಿ ಅತಿ ಹೆಚ್ಚು ರೈತರ ಆತ್ಮಹತ್ಯೆಗಳು ಸಂಭವಿಸಿವೆ.

ಆತ್ಮಹತ್ಯೆ ತಡೆ ಸಹಾಯವಾಣಿ. ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಸ್ವಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ತೆರೆಯಲಾಗಿದೆ. ಸಹಾಯವಾಣಿ ಸಂಖ್ಯೆ ಇಂತಿದೆ 080 – 25497777.

You cannot copy content of this page

Exit mobile version