Home ರಾಜ್ಯ ಬಳ್ಳಾರಿ ತೋರಣಗಲ್ಲು: ರೈಲ್ವೇ ಸ್ಟೇಷನ್ನಿಗೆ ಸೇರಿದ ಜಾಗದ ವಿಚಾರದಲ್ಲಿ ಕಾನೂನು ಹೋರಾಟ ಮುಂದುವರಿಸಲು ಸೂಚಿಸಿದ ಮುಖ್ಯಮಂತ್ರಿ

ತೋರಣಗಲ್ಲು: ರೈಲ್ವೇ ಸ್ಟೇಷನ್ನಿಗೆ ಸೇರಿದ ಜಾಗದ ವಿಚಾರದಲ್ಲಿ ಕಾನೂನು ಹೋರಾಟ ಮುಂದುವರಿಸಲು ಸೂಚಿಸಿದ ಮುಖ್ಯಮಂತ್ರಿ

0

ಬಳ್ಳಾರಿ ಜಿಲ್ಲೆ ಸಂಡೂರು ವಿಧಾನಸಭಾ ಕ್ಷೇತ್ರದ ತೋರಣಗಲ್ಲು ರೈಲ್ವೇ ಸ್ಟೇಷನ್ ಗೆ ಸೇರಿದ ಸರ್ವೆ ನಂಬರ್ 321(ಎ2) (ಎ3) ನ ಎಂಟು ಎಕರೆ ಜಾಗದ ವಿಚಾರದಲ್ಲಿ ಕಾನೂನು ಹೋರಾಟ ಮುಂದುವರೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.

ಸಚಿವ ಸಂತೋಷ್ ಲಾಡ್, ಸಂಸದ ಈ.ತುಕಾರಾಮ್, ಸಚಿವರಾದ ಜಮೀರ್ ಅಹಮದ್ ನೇತೃತ್ವದ ನಿಯೋಗದ ಈ ಕುರಿತು ಮುಖ್ಯಮಂತ್ರಿಗಳ ಜೊತೆ ಸುದೀರ್ಘ ಚರ್ಚೆ ನಡೆಸಿ ಪ್ರಕರಣದ ವಿವರಗಳನ್ನು ದಾಖಲೆ ಸಮೇತ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿದರು.

ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಅಲ್ಲಿ ನೆಲೆಸಿರುವ 800 ಕುಟುಂಬಗಳು, 2000 ಮಂದಿಗೆ ಯಾವುದೇ ತೊಂದರೆ ಆಗಬಾರದು. ನ್ಯಾಯಬದ್ದವಾದ ಕಾನೂನು ಹೋರಾಟ ಮುಂದುವರೆಸುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದರು.

ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರ, ಜಿಲ್ಲಾ ವರಿಷ್ಠಾಧಿಕಾರಿ ಶೋಭಾ ರಾಣಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಮುಖ್ಯಮಂತ್ರಿಗಳು ಕೇಳಿದ ದಾಖಲೆ ಮತ್ತು ವಿವರಗಳನ್ನು ಒದಗಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವರಾದ ಸಂತೋಷ್ ಲಾಡ್ ಮತ್ತು ಸಂಸದ ಈ ತುಕಾರಾಮ್ ಅವರು ಆ ಜಾಗದಲ್ಲಿರುವ ನಮ್ಮ‌ ಜನಗಳಿಗೆ ಯಾವುದೇ ತೊಂದರೆ ಆಗದಂತೆ ಕಾನೂನು ಹೋರಾಟ ಮುಂದುವರೆಸುವಂತೆ ಮುಖ್ಯಮಂತ್ರಿಗಳ ಸೂಚನೆ ಇದೆ ಎಂದರು.

You cannot copy content of this page

Exit mobile version