ಹಾಸನ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಇಲ್ಲಿ ನಿತ್ಯವೂ ಸೂತಕದ ಮನೆಯಾಗಿದ್ದು, ಹಣವಿಲ್ಲದೇ ಪಾಪರ್ ಆಗಿ ನಿಗಮಗಳಿಗೆ ಹಣ ಕೊಟ್ಟಿಲ್ಲ ಸರಕಾರವು ದಿವಾಳಿ ಆಗಿ ರಾಜ್ಯದೊಳಗೆ ಬರೀ ಆತ್ಮಹತ್ಯೆ ಆಗುತ್ತಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಮೇಲೆ ನಿತ್ಯವು ಸೂತಕ ಇದೆ. ಕರ್ನಾಟಕ ಸೂತಕದ ಮನೆಯಾಗಿದೆ. ಮೈಕ್ರೋ ಫೈನಾನ್ಸ್ ನಿಂದ ಸರಣಿ ಸಾವು ಆಗುತ್ತಿದೆ ಕೇಳೋರಿಲ್ಲ. ಬಾಣಂತಿಯರ ಸಾವಿಗೆ ಏನು ಕ್ರಮ ಇಲ್ಲ. ಗುತ್ತಿದೆದಾರರ ಹಣ ಬಿಡುಗಡೆ ಇಲ್ಲದೆ ಸಾವಿಗೀಡಾಗುತ್ತಿದ್ದಾರೆ. ಅದಿಕಾರಿಗಳ ಸಾವಿಗೆ ಸ್ಪಂದನೆ ಇಲ್ಲ. ಈ ಸರ್ಕಾರ ಇದೆಯೊ ಇಲ್ಳವೊ ಎನ್ನೋ ಸ್ಥಿತಿ ಇದೆ. ಕೊಲೆ ಸುತ್ತಿಗೆ ಅತ್ಯಾಚಾರ ನಿತ್ಯ ಆಗುತ್ತಿದೆ. ರಾಜ್ಯದಲ್ಲಿ ಸಿಎಂ ಇದಾರ, ಗೃಹ ಸಚಿವರು ಇದಾರಾ ಕೇಳೋಕೆ ಆಗ್ತಿಲ್ಲ. ನನಗಿರೊ ಮಾಹಿತಿ ಪ್ರಕಾರ 35 ಜನ ಮೈಕ್ರೊ ಪೈನಾನ್ಸ್ ಹಾವಳಿಗೆ ಮೃತಪಟ್ಟಿದಾರೆ.
ಹಾಸನ ಜಿಲ್ಲೆಯಲ್ಲೂ ಅರಕಲಗೂಡು ತಾಲ್ಲೂಕಿನಲ್ಲಿ ಒಂದು ಆತ್ಮಹತ್ಯೆ ಆಗಿದೆ. ಸಿಎಂ, ಸಚಿವರು ಸಭೆ ಮೇಲೆ ಸಭೆ ಮಾಡಿದ್ದಾರೆ. ಆದರೇ ಸರ್ಕಾರ ಕಠಿಣ ಕ್ರಮ ಎಂದು ಭಜನೆ ಮಾಡುತ್ತಿದ್ದಾರೆ.ಆದರೂ ಇವರ ಹಾವಳಿ ನಿಂತಿಲ್ಲ. ಒಂದು ತಿಂಗಳಿಂದ ಈ ಘಟನೆ ಆಗಿದೆ. ಯಾವ ಮೈಕ್ರೊ ಫೈನಾನ್ಸ್ ಮೇಲೆ ಕ್ರಮ ಆಗಿದೆ? ಯಾವ ಸಂಸ್ಥೆಯ ಮ್ಯಾನೇಜರ್ ಹಾಗು ಮಾಲೀಕನ ಬಂಧನ ಆಗಿದೆ ಕಾಟಾಚಾರಕ್ಕೆ ಸುಗ್ರಿವಾಜ್ಙೆ ಎಂದು ಹೇಳುತ್ತಿದ್ದಾರೆ. ಮೈಕ್ರೋ ಫೈನಾನ್ಸ್ ನವರು ಈ ಸರ್ಕಾರವನ್ನು ಕೇರ್ ಮಾಡ್ತಾ ಇಲ್ಲ. ಜವಾಬ್ದಾರಿ ಯುತ ಸರ್ಕಾರವಾಗಿ ಏನಾದರು ಘೋಷಣೆ ಮಾಡಿದ್ರೆ ಹೇಗಿರಬೇಕು? ಉತ್ತರ ಪ್ರದೇಶದಲ್ಲಿ ನಮ್ಮ ಸಿಎಂ ಗುಡುಗಿದ್ರೆ ರೌಡಿಗಳು ಉತ್ತರ ಪ್ರದೇಶ ಅಲ್ಲ ದೇಶಬಿಟ್ಟೇ ಓಡಿ ಹೋಗ್ತಾರೆ.
ಕರ್ನಾಟಕವನ್ನು ದುಸ್ಥಿತಿಗೆ ತಂದ ಮನೆ ಹಾಳ ಸರ್ಕಾರ ಇದು. ಮೈಕ್ರೋಫೈನಾನ್ಸ್ ಹಾವಳಿ ತಡೆಯಲು ಸರ್ಕಾರ ಕೂಡಲೆ ನಿಗಮಗಳಿಗೆ ಹಣ ನೀಡಬೇಕು. ಐದು ಸಾವಿರ ಕೋಟಿ ಹಣ ನಿಗಮಕ್ಕೆ ಬಿಡುಗಡೆ ಮಾಡಿ ಎಂದ ಅವರು, ಸಾಲ ಕೊಡ್ತೀರಾ ಅದು ವಾಪಸ್ ಬರುತ್ತದೆ. ಇರೋ ಕಾನೂನೆ ಸಾಕಷ್ಟು ಬಲಿಷ್ಟವಾಗಿ ಇದೆ. ಆದರೆ ಪೊಲೀಸರಿಂದ ಏನೂ ಕ್ರಮ ಆಗ್ತಾ ಇಲ್ಲ. ಯಾಕಂದ್ರೆ ಪೊಲೀಸರು ವರ್ಗಾವಣೆ ದಂಧೆಯಲ್ಲಿ ಬಂದವರು ಹಾಗಾಗಿ ಅವರ ಕಂಡರೆ ಭಯ ಇಲ್ಲ ಎಂದರು. ಬಡವರಿಗೆ ಸರ್ಕಾರ ಲೋನ್ ಕೊಟ್ಟರೆ ಈ ಹಾವಳಿ ನಿಲ್ಲುತ್ತದೆ. ನಾವು ಹೋರಾಟ ಮಾಡಿ ಓರ್ವ ಸಚಿವರು ರಾಜಿನಾಮೆ ನೀಡಿದಾರೆ. ಸಿಎಂ ಕೊನೆ ಹಂತಕ್ಕೆ ಬಂದಿದಾರೆ. ಇನ್ನು ಎರಡು ವರ್ಷ ತುಂಬೋದರೊಳಗೆ ಈ ಪರಿಸ್ಥಿತಿ ಬಂದಿದೆ. ಡಿಸಿಎಂ ಅವರು ನನ್ನ ಬಳಿ ಬಂದು ಭವಿಷ್ಯ ಕೇಳ್ತಿನಿ ಅಂದಿದಾರೆ.
ಅವರು ಬಂದ್ರೆ ಹೇಳ್ತಿನಿ, ಸಿಎಂ ಅಯ್ಕೆ ಹಾಗೊ ಸಂದರ್ಭ ಯಾರಿದ್ದರು? ಏನೇನು ಮಾತಾಡಿದ್ರು ಎಂದು ಮಾತಾಡಬೇಕಲ್ಲ ಎಮದು ಹೇಳಿದರು.
ಬಿಜೆಪಿಯಲ್ಲಿ ಗೊಂದಲದ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿ, ರಾಜ್ಯದ ರಾಜಕೀಯದಲ್ಲಿ ಬಿಜೆಪಿ ಒಳಗಿನ ಬಣ ಜಗಳದ ಕುರಿತು ಮಾತನಾಡುತ್ತಾ, ನಾನು ಪಾರ್ಟಿಯ ಶಿಸ್ತಿನ ಸಿಪಾಯಿ, ಮನೆಯೊಳಗೆ ಏನು ಮಾತನಾಡಬೇಕು ಅಲ್ಲಿ ಮಾತನಾಡುತ್ತೇನೆ, ಹೊರಗೆ ಏನು ಮಾತನಾಡಬೇಕು ಅದನ್ನು ಮಾತನಾಡಿದ್ದೇನೆ. ಇತಿಹಾಸದಲ್ಲಿ ನಾನು ಪಾರ್ಟಿ ವಿಚಾರಗಳನ್ನು ಹೊರಗಡೆ ಮಾತನಾಡಿಲ್ಲ ಎಂದರು. ಬಿಜೆಪಿ ರಾಷ್ಟಿçÃಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಬಂದಾಗ ಕರ್ನಾಟಕದ ಸ್ಥಿತಿ-ಗತಿಗಳನ್ನು ವಿವರಿಸಿದ್ದೇನೆ.
ನಾನು ಕೂಡ ದೆಹಲಿ ನಾಯಕರ ಜತೆ ಸಂಪರ್ಕದಲ್ಲಿದ್ದೇನೆ. ಮುಂದಿನ ಹದಿನೈದು-ಇಪ್ಪತ್ತು ದಿನಗಳಲ್ಲಿ ಸ್ಪಷ್ಟವಾದ ತೀರ್ಮಾನ ಹೊರಬೀಳಲಿದೆ ಎಂದು ಅವರು ಭರವಸೆ ನುಡಿದರು. ಬಿಜೆಪಿ ಬಿಟ್ಟು ಹೋದವರ ಉದ್ಧಾರವಾಗಿಲ್ಲ. ಬಿಜೆಪಿ ನನ್ನ ಶಕ್ತಿ. ಆಮೇಲೆ ಅಶೋಕ್ ಎಂದ ಅವರು, ಆಚೆ ಹೋದರೆ ನನ್ನ ಶಕ್ತಿ ಜೀರೋ ಎಂದು ಭಾವೋದ್ರೇಕದಿಂದ ಹೇಳಿದ ಪ್ರಸಂಗ ನಡೆಯಿತು. ಈ ನಿಟ್ಟಿನಲ್ಲಿ ಅದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಬಿಜೆಪಿ ಪಕ್ಷ ತಾಯಿ ಇದ್ದಂತೆ ಎಂದು ಉತ್ತರಿಸಿದರು. ಇನ್ನು ರಾಜ್ಯಾಧ್ಯಕ್ಷ ವಿಜಯೇಂದ್ರ ಬಗ್ಗೆ ಏನನ್ನು ಹೇಳಲು ಇಷ್ಟಪಡದೇ ಮೌನವಾಗಿದ್ದರು. ಇದೆ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಶಾಸಕ ಸಿಮೆಂಟ್ ಮಂಜು, ಬಿ.ಹೆಚ್. ನಾರಾಯಣಗೌಡ, ಪ್ರಸನ್ನಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.