ಹಾಸನ : ಎಲ್ಲೆಡೆ ಕೋವಿಡ್ ಹರಡುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಬೆಡ್ ಗಳ ಮತ್ತು ಇತರೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಯಾರು ಭಯಪಡದೇ ಮುನ್ನೇಚರಿಕೆ ಕ್ರಮವನ್ನು ಅನುಸರಿಸಬೇಕೆಂದು ಸಂಸದ ಶ್ರೇಯಸ್ ಎಂ. ಪಟೇಲ್ ಸಲಹೆ ನೀಡಿದರು. ದಿನೆ ದಿನೆ ಕೋವಿಡ್ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ನಗರದ ಸಾಲಗಾಮೆ ರಸ್ತೆ ಬಳಿ ಇರುವ ಜಿಲ್ಲಾ ಆರೋಗ್ಯ ಕಲ್ಯಾಣ ಅಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಸಂಸದರಾದ ಶ್ರೇಯಸ್ ಎಂ. ಪಟೇಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕಿನ ಆರೊಗ್ಯಾಧಿಕಾರಿಗಳಿಂದ ಮಾಹಿತಿ ಪಡೆದು ನಂತರ ಉದ್ದೇಶಿಸಿ ಮತ್ತು ಮಾಧ್ಯಮದೊಂದಿಗೆ ಮಾತನಾಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕಿನ ಆರೋಗ್ಯಾಧಿಕಾರಿಗಳ ಸಭೆಯನ್ನು ಕರೆಯಲಾಗಿದ್ದು, ಕೋವಿಡ್-19 ಮತ್ತು ಡೆಂಗ್ಯೂ ಬಗ್ಗೆ ಯಾವ ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಬಗ್ಗೆ, ಕೋವಿಡ್ ಗೆ ಇರುವ ಮಾನದಂಡಗಳ ಕುರಿತು ರಾಜ್ಯ ಸರಕಾರವು ಹೇಳಿರುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳು ಎಲ್ಲಾ ತಾಲೂಕಿಗೂ ಕೋವಿಡ್ ಪರೀಕ್ಷೆ ಮಾಡುವ ಕಿಟ್ ಗಳನ್ನು ವಿತರಿಸುತ್ತಾರೆ.
ಕೋವಿಡ್ ನ ಅಗತ್ಯ ಔಷಧಿಗಳನ್ನು ಲಭ್ಯವಾಗಿ ಇಟ್ಟುಕೊಳಬೇಕು, ಅಗತ್ಯ ಇದ್ದ ಔಷಧಿಗಳನ್ನು ಅತೀ ಶೀಘ್ರವಾಗಿ ಸರ್ಕಾರಕ್ಕೆ ಬರೆದು ತರಿಸಿಕೊಳ್ಳುವ ನಿಟ್ಟಿನಲ್ಲಿ ಮುಂದಾಗಬೇಕು. ಯಾವುದೇ ರೀತಿಯ ಔಷಧಿಗಳನ್ನು ಖಾಸಗಿ ಮೆಡಿಕಲ್ ಗಳಿಗೆ ಬರೆಯಬಾರದು. ಎಲ್ಲವೂ ಸಾರ್ವಜನಿಕರಿಗೆ ಸುಲಭವಾಗಿ ಸಿಗುವಂತೆ ನೋಡಿಕೊಳ್ಳಬೇಕು. ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳು ಮತ್ತು ವಯೋವೃದ್ಧರು ತಮ್ಮ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು. ರೋಗ ನಿರೋಧಕ ಶಕ್ತಿ ಇರುವ ಎಲ್ಲರೂ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯ. ಜನಬಿಡ ಪ್ರದೇಶಗಳಲ್ಲಿ ಗುಂಪು ಗುಂಪಾಗಿ ಜನ ಸೇರುವುದನ್ನು ಆದಷ್ಟು ಕಡಿಮೆ ಮಾಡುವುದು ಸೂಕ್ತ ಎಂದು ಸಲಹೆ ನೀಡಿದರು.
ಈ ವೇಳೆ ಯಾರು ಆತಂಕಕ್ಕೆ ಒಳಗಾಗುವುದು ಬೇಡ. ಮುನ್ನೆಚರಿಕ ಕ್ರಮವಾಗಿ ಎಲ್ಲಾರೂ ಮಾಸ್ಕ್ ಧರಿಸಿ, ಸ್ಯಾನಿಟೇಸರ್ ಹಾಕುವುದು, ಕೈಯನ್ನು ಶುದ್ಧವಾಗಿ ತೊಳೆದುಕೊಂಡು ಕೋವಿಡ್ ಮಾನದಂಢವನ್ನು ಸರಕಾರ ಏನು ಸೂಚಿಸಿದ್ದಾರೆ ಅದನ್ನ ಪಾಲಿಸಿದರೇ ಖಂಡಿತವಾಗಿಯೂ ಈ ಸಂಕಷ್ಟದಿAದ ನಾವುಗಳು ಪಾರಾಗಬಹುದು. ನಮ್ಮ ಜಿಲ್ಲೆಯ ಎಲ್ಲಾ ವೈದ್ಯರು ಸನ್ನದರಾಗಿದ್ದು, ಬುಧವಾರದಿಂದಲೇ ಕೋವಿಡ್ ಪರೀಕ್ಷೆ ಮಾಡಲಾಗುವುದು. ಭಯಪಡುವುದಕ್ಕಿಂತ ಮುನ್ನೆಚರಿಕ ಕ್ರಮವನ್ನು ಅನುಸರಿಸುವುದು ಸೂಕ್ತ ಎಂದು ಸಲಹೆ ನೀಡಿದರು. ಮನೆ ಸುತ್ತ ಸ್ವಚ್ಛತೆ, ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಕೋವಿಡ್ ಹರಡುತ್ತಿರುವ ಹಿನ್ನಲೆಯಲ್ಲಿ ಹಾಸನ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಸಿದ್ಧತೆ ಮಾಡಲಾಗಿದ್ದು, ಕೋವಡ್ ವಾರ್ಡನ್ನು ನಿಗಧಿಪಡಿಸಲಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಮೂರು ಬೆಡನ್ನು ಐಸ್ಯೂಲೇಸನ ವಾರ್ಡಾಗಿ ರಿಸರ್ವ್ ಮಾಡಲಾಗಿದೆ ಎಂದರು. ಇಲ್ಲಿ ಆಕ್ಸಿಜನ್ ಕೊರತೆ ಯಾವುದು ಇರುವುದಿಲ್ಲ. ಸರಕಾರದ ಮಾರ್ಗಸೂಚಿಯಂತೆ ಮೆಡಿಸನ್ ಸಿದ್ಧಪಡಿಸಿಕೊಳ್ಳಲಾಗಿದ್ದು, ಯಾರು ಹೆದರಬೇಡಿ ಎಂದು ಹೇಳಿದರು.ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅನಿಲ್, ಜಿಲ್ಲಾ ಶಸ್ತç ಚಿಕಿತ್ಸಕ ನಾಗಪ್ಪ, ಹಿಮ್ಸ್ ನ ರಾಘವೇಂದ್ರ, ಡಾ. ಚೇತನ್, ಸೇರಿದಂತೆ ಹಾಸನ ಜಿಲ್ಲೆಯಲ್ಲ ಎಲ್ಲಾ ತಾಲೂಕಿನ ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದರು.