Home ಆಟೋಟ ಭಾರತ ಆಸ್ಟ್ರೇಲಿಯಾ ಟಿ 20 ಸರಣಿ, ಶುಭಾರಂಭದ ನಿರೀಕ್ಷೆಯಲ್ಲಿ ಇತ್ತಂಡಗಳು

ಭಾರತ ಆಸ್ಟ್ರೇಲಿಯಾ ಟಿ 20 ಸರಣಿ, ಶುಭಾರಂಭದ ನಿರೀಕ್ಷೆಯಲ್ಲಿ ಇತ್ತಂಡಗಳು

0

ಟಿ 20 ವಿಶ್ವಕಪ್ ಗೆ ಮುಂಚಿನ ತಾಲೀಮು ಪಂದ್ಯಗಳು ಎಂದೇ ಹೆಸರು ಪಡೆದಿರುವ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಗಳು ಭಾರತಕ್ಕೆ ಮಹತ್ವದ ಸರಣಿಗಳು ಎನ್ನಿಸಿವೆ. ಈ ಪೈಕಿ ಇಂದಿನಿಂದ ಆಸ್ಟ್ರೇಲಿಯಾ ವಿರುದ್ಧ 3 ಪಂದ್ಯಗಳ ಟಿ 20 ಸರಣಿ ಆರಂಭವಾಗಲಿದೆ. ಇಂದು ಸಂಜೆ ಮೊಹಾಲಿಯಲ್ಲಿ ಶುರುವಾಗಲಿರುವ ಈ ಪಂದ್ಯ ಎಲ್ಲರ ಕುತೂಹಲ ಕೆರಳಿಸಿದೆ.

ಇನ್ನು ಆಡುವ ಬಳಗದ ವಿಷಯಕ್ಕೆ ಬಂದರೆ ವಿಶ್ವಕಪ್ ಹತ್ತಿರದಲ್ಲೇ ಇರುವುದರಿಂದ ಭಾರತ ತಂಡ ಈ ಮುಂಚೆ ಏಷ್ಯಾ ಕಪ್ ನಲ್ಲಿ ಮಾಡಿದ ತಪ್ಪುಗಳನ್ನು ರಿಪೀಟ್ ಮಾಡುವುದು ಅನುಮಾನ. ಹಾಗಾಗಿ ಸಮರ್ಥ ಆಟಗಾರರನ್ನು ಒಳಗೊಂಡ ಬಲಿಷ್ಟ ಆಡುವ 11ರ ಬಳಗವನ್ನೇ ಕಣಕ್ಕಿಳಿಸುವ ಎಲ್ಲಾ ಲಕ್ಷಣಗಳಿವೆ.

ಹೇಳಿ ಕೇಳಿ ಆಸ್ಟ್ರೇಲಿಯಾ ಬಲಿಷ್ಟ ತಂಡ ಆದ್ದರಿಂದ ಅವರ ಎದುರು ಪ್ರಯೋಗಗಳನ್ನು ಮಾಡೋದು ತಂಡದ ಹಿತದೃಷ್ಠಿಯಿಂದ ಸಮಂಜಸ ಅಲ್ಲ. ಆದಾಗ್ಯೂ ಈ ಪಂದ್ಯದಲ್ಲಿ ಫಿನಿಷರ್ ಎಂದೇ ಹೆಸರು ಮಾಡಿರುವ ದಿನೇಸ್ ಕಾರ್ತಿಕ್ ಅವರನ್ನು ಹೊರಗಿಡುವ ಸಾಧ್ಯತೆಗಳಿವೆ. ಇದು ತಂಡದ ಮ್ಯಾನೇಜ್ ಮೆಂಟ್ ಮತ್ತು ತಂಡದ ಥಿಂಕ್ ಟ್ಯಾಂಕ್ ನ ಆಲೋಚನೆ. ಆದರೆ, ದಿನೇಶ್ ಕಾರ್ತಿಕ್ ಅವರನ್ನು ತಂಡಕ್ಕೆ ಸೇರಿಸಿಕೊಂಡು ಆಡುವ ಅವಕಾಶ ಕೊಡದೇ, ಒಂದು ವೇಳೆ ಕೊಟ್ಟರೂ ಬ್ಯಾಟಿಂಗಿಗೆ ಅವಕಾಶ ಕೊಡದೇ ಅವರ ಪ್ರತಿಭೆಯನ್ನು ಪೋಲು ಮಾಡುತ್ತಿರೋದಂತೂ ಕ್ರಿಕೆಟ್ ಪ್ರೇಮಿಗಳಲ್ಲಿ ಅಸಮಾಧಾನ ಉಂಟು ಮಾಡಿದೆ.  

ಕಾರ್ತಿಕ್ ಗೆ ಫಿನಿಷರ್ ಪಟ್ಟ ಕಟ್ಟಿ, ಪಂದ್ಯ ಮುಗಿಯುವ ವೇಳೆಯಲ್ಲಿ ಅವರನ್ನು ಬ್ಯಾಟಿಂಗಿಗೆ ಇಳಿಸಲಾಗುತ್ತಿದೆ. ಹಾಗಾಗಿ ತಮಗೆ ಸಿಕ್ಕ ಎಂಟತ್ತು ಬಾಲುಗಳಲ್ಲೇ ತಮ್ಮ ಪ್ರತಿಭೆ ತೋರಿಸಬೇಕಾದ ಅನಿವಾರ್ಯತೆ ಕಾರ್ತಿಕ್ ಅವರದ್ದು. ಹಾಗಾಗಿ ಅವರನ್ನು 15 ಓವರ್ ಗಳ ಹಂತದಲ್ಲೇ ಕಳಿಸಬೇಕು ಅನ್ನೋದು ಹಲವರ ವಾದ. ಒಂದೊಮ್ಮೆ ಬ್ಯಾಟಿಂಗ್ ಪಿಚ್ ಆಗಿ ಮೇಲಿನ ಕ್ರಮಾಂಕದ ಇಬ್ಬರು, ಮೂವರು ಆಟಗಾರರು ಉತ್ತಮ ಪ್ರದರ್ಶನ ನೀಡಿದರೆ ತಂಡದಲ್ಲಿದ್ದರೂ ಕಾರ್ತಿಕ್ ಅವರಿಗೆ ಬ್ಯಾಟಿಂಗಿಗೆ ಅವಕಾಶ ಸಿಗೋದಿಲ್ಲ. ಹಾಗಾಗಿ, ದಿನೇಶ್ ಕಾರ್ತಿಕ್ ಅವರನ್ನು ಹೇಗೆ ಬಳಸಿಕೊಳ್ಳಬೇಕು ಅನ್ನೋದು ಒಂದು ಸವಾಲಾಗಿ ಪರಿಣಮಿಸಿದೆ ಅಂದ್ರೆ ತಪ್ಪಿಲ್ಲ. ಒಟ್ಟಿನಲ್ಲಿ ಇಂದಿನ ಪಂದ್ಯ ಇಂತಹ ಸಾಕಷ್ಟು ವಿಷಯಗಳಿಗಾಗಿ ಕುತೂಹಲ ಕೆರಳಿಸಿರೋದಂತೂ ಸತ್ಯ.

You cannot copy content of this page

Exit mobile version