Home ಬೆಂಗಳೂರು ಇಂಡಿಯಾ ಒಕ್ಕೂಟಗಳ ಒಗ್ಗಟಿನ ಹೋರಾಟ ಲ್ಯಾಟರಲ್ ಎಂಟ್ರಿ ಎಂಬ ಷಡ್ಯಂತ್ರವನ್ನು ವಿಫಲಗೊಳಿಸಿದೆ: ದಿನೇಶ್‌ ಗುಂಡೂರಾವ್

ಇಂಡಿಯಾ ಒಕ್ಕೂಟಗಳ ಒಗ್ಗಟಿನ ಹೋರಾಟ ಲ್ಯಾಟರಲ್ ಎಂಟ್ರಿ ಎಂಬ ಷಡ್ಯಂತ್ರವನ್ನು ವಿಫಲಗೊಳಿಸಿದೆ: ದಿನೇಶ್‌ ಗುಂಡೂರಾವ್

0

ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ 45 ಉನ್ನತ ಹುದ್ದೆಗಳಿಗೆ ಲ್ಯಾಟರಲ್ ಎಂಟ್ರಿ ಮೂಲಕ ನೇಮಕಾತಿ ಮಾಡಿಕೊಳ್ಳುವ ತನ್ನ ಅಸಂವಿಧಾನಿಕ ನಡೆಯಿಂದ ಮೋದಿ ಸರ್ಕಾರ ಹಿಂದೆ ಸರಿದಿದೆ. ಇದು ಇಂಡಿಯಾ ಒಕ್ಕೂಟ ನಡೆಸಿದ ಹೋರಾಟದ ಫಲ ಎಂದು ರಾಜ್ಯ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು ಶೋಷಿತ ಸಮುದಾಯಗಳಿಗೆ ಸಂವಿಧಾನ ನೀಡಿರುವ ಮೀಸಲಾತಿ ಹಕ್ಕನ್ನು ಕಸಿಯುವ ಕುಟಿಲ ತಂತ್ರವನ್ನು ಮೋದಿ ಸರ್ಕಾರ ಮಾಡುತ್ತಲೇ ಇದೆ.

ಲ್ಯಾಟರಲ್ ಎಂಟ್ರಿ ಮೂಲಕ ಖಾಸಗಿಯವರಿಗೆ ಉನ್ನತ ಹುದ್ದೆಗಳಲ್ಲಿ ನೇಮಕ ಮಾಡಿ ಮೀಸಲಾತಿ ಕಸಿಯುವುದು ಕೂಡ ಈ ಕುಟಿಲ ತಂತ್ರದ ಭಾಗವಾಗಿತ್ತು. ಆದರೆ ಇಂಡಿಯಾ ಒಕ್ಕೂಟಗಳ ಒಗ್ಗಟಿನ ಹೋರಾಟ ಲ್ಯಾಟರಲ್ ಎಂಟ್ರಿ ಎಂಬ ಷಡ್ಯಂತ್ರವನ್ನು ವಿಫಲಗೊಳಿಸಿದೆ ಎಂದಿದ್ದಾರೆ.

ಖಾಸಗೀಕರಣದಿಂದ ಮಾತ್ರ ಅಭಿವೃದ್ಧಿ ಎಂಬ ಭ್ರಮೆ ಸೃಷ್ಟಿಸಿ ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣ ಮಾಡುತ್ತಿರುವದರ ಹಿಂದಿನ ಹುನ್ನಾರವೇ ಮೀಸಲಾತಿ ಕಸಿದುಕೊಳ್ಳುವುದು. ಮೋದಿ ಸರ್ಕಾರ ಕಳೆದ ಹತ್ತು ವರ್ಷದ ಅವಧಿಯಲ್ಲಿ ಮಾಡಿರುವ ಖಾಸಗಿಕರಣದ ಹಿಂದಿನ ದುಷ್ಟ ಉದ್ದೇಶವೇ ಇದು.

ಕಳೆದ ಹತ್ತು ವರ್ಷಗಳಿಂದ ವ್ಯವಸ್ಥಿತವಾಗಿ ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣ ಮಾಡಿ ಶೋಷಿತರ ಮೀಸಲಾತಿ ಹಕ್ಕನ್ನು‌ ನಿರಾಕರಿಸಲಾಗಿದೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಮೋದಿ ಸರ್ಕಾರ ಮೀಸಲಾತಿ ಕಸಿಯಲು’ಲ್ಯಾಟರಲ್ ಎಂಟ್ರಿ’ ಎಂಬ ನೂತನ ತಂತ್ರ ಹುಡುಕಿಕೊಂಡಿತ್ತು ಕೊನೆಗೂ ಅದಕ್ಕೆ ಬ್ರೇಕ್ ಬಿದ್ದಿದೆ ಎಂದು ಅವರು ಹೇಳಿದ್ದಾರೆ

You cannot copy content of this page

Exit mobile version