Home ವಿದೇಶ ಪ್ರಪಂಚದಲ್ಲಿ ಅತೀ ಹೆಚ್ಚು ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುವ ದೇಶ ಭಾರತ!

ಪ್ರಪಂಚದಲ್ಲಿ ಅತೀ ಹೆಚ್ಚು ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುವ ದೇಶ ಭಾರತ!

0
ಕೆವಾಡಿಯಾದಲ್ಲಿ ನಡೆದ ಶಸ್ತ್ರಾಸ್ತ್ರಗಳ ಪ್ರದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ

ಬೆಂಗಳೂರು: ಜಾಗತಿಕ ಶಸ್ತ್ರಾಸ್ತ್ರ ವ್ಯಾಪಾರದಲ್ಲಿ 9.8% ರಷ್ಟು ಪಾಲನ್ನು ಹೊಂದಿರುವ ಭಾರತವು ವಿಶ್ವದ ಅಗ್ರ ಶಸ್ತ್ರಾಸ್ತ್ರ ಆಮದು ದೇಶವಾಗಿದೆ ಎಂದು ಜಾಗತಿಕ ಶಸ್ತ್ರಾಸ್ತ್ರ ಮಾರಾಟವನ್ನು ಪತ್ತೆಹಚ್ಚುವ ಯುರೋಪಿಯನ್ ಥಿಂಕ್ ಟ್ಯಾಂಕ್ ಸ್ಟಾಕ್‌ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟಿನ (ಎಸ್‌ಐಪಿಆರ್‌ಐ) ಇತ್ತೀಚಿನ ವರದಿ ಹೇಳಿದೆ.

SIPRI ವರದಿಯಂತೆ, ರಷ್ಯಾವು ಭಾರತದ ಪ್ರಮುಖ ಶಸ್ತ್ರಾಸ್ತ್ರ ಪೂರೈಕೆದಾರ ದೇಶವಾಗಿದ್ದು, ಭಾರತ 36% ಶಸ್ತ್ರಾಸ್ತ್ರಗಳನ್ನು ದೇಶದಿಂದ ಆಮದು ಮಾಡಿಕೊಳ್ಳುತ್ತದೆ. ಆದರೂ ಭಾರತವು ಮಿಲಿಟರಿ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್‌ಗಾಗಿ ಪಾಶ್ಚಿಮಾತ್ಯ ದೇಶಗಳು ಮತ್ತು ಸ್ಥಳೀಯ ಪೂರೈಕೆದಾರರನ್ನು ಹೆಚ್ಚಾಗಿ ಅವಲಂಬಿಸಿರುವುದರಿಂದ ರಷ್ಯಾದ ಜೊತೆಗಿನ ಒಟ್ಟಾರೆ ಆಮದಿನ ಪಾಲು ಕಡಿಮೆಯಾಗುತ್ತಿದೆ. ರಷ್ಯಾದ ನಂತರ ಫ್ರಾನ್ಸ್ (33%) ಭಾರತದ ಎರಡನೇ ಅತಿದೊಡ್ಡ ಶಸ್ತ್ರಾಸ್ತ್ರ ಪೂರೈಕೆದಾರ ದೇಶ ಮತ್ತು ಅಮೇರಿಕಾ (13%) ಭಾರತಕ್ಕೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುವ ಮೂರನೇ ಅತಿದೊಡ್ಡ ದೇಶ.

2018-22ರ ನಡುವಿನ ಜಾಗತಿಕ ಶಸ್ತ್ರಾಸ್ತ್ರ ಮಾರಾಟದಲ್ಲಿ ಭಾರತದ ಶಸ್ತ್ರಾಸ್ತ್ರ ಆಮದು 11% ರಷ್ಟಿತ್ತು. 2019-2023 ಅವಧಿಯಲ್ಲಿ ಇದು ಸ್ವಲ್ಪ ಕುಸಿದಿದ್ದು – ಜಾಗತಿಕ ಮಾರಾಟದ 9.8% ಆಮದು ಮಾಡಿಕೊಳ್ಳುತ್ತದೆ ಎಂದು ವರದಿ ಹೇಳಿದೆ.

ಟಾಪ್ 10 ಶಸ್ತ್ರಾಸ್ತ್ರ ಆಮದುದಾರರಲ್ಲಿ, ಸೌದಿ ಅರೇಬಿಯಾ (8.4%), ಕತಾರ್ (7.6%), ಉಕ್ರೇನ್ (4.9%), ಪಾಕಿಸ್ತಾನ (4.3%), ಜಪಾನ್ (4.1%), ಈಜಿಪ್ಟ್ (4%), ಆಸ್ಟ್ರೇಲಿಯಾ (4%) 3.7%), ದಕ್ಷಿಣ ಕೊರಿಯಾ (3.1%) ಮತ್ತು ಚೀನಾ (2.9%). ಅಗ್ರ ಐದು ದೇಶಗಳು 2019-2023ರ ಅವಧಿಯಲ್ಲಿ ಎಲ್ಲಾ ಶಸ್ತ್ರಾಸ್ತ್ರಗಳ ಆಮದುಗಳಲ್ಲಿ 35% ಪಾಲನ್ನು ಹೊಂದಿವೆ.

ಇದಲ್ಲದೆ, 2019-23 ರ ನಡುವೆ ಪಾಕಿಸ್ತಾನದ ಶಸ್ತ್ರಾಸ್ತ್ರ ಆಮದಿನಲ್ಲಿ 43% ಏರಿಕೆ ಕಂಡಿದ್ದು, ಈ ದೇಶ 82% ಶಸ್ತ್ರಾಸ್ತ್ರಗಳನ್ನು ಚೀನಾದಿಂದ ಆಮದು ಮಾಡಿಕೊಂಡಿದೆ ಎಂದು ವರದಿ ತಿಳಿಸಿದೆ.

ಬಲವಾದ ರಕ್ಷಣಾ-ಕೈಗಾರಿಕಾ ನೆಲೆಯನ್ನು ನಿರ್ಮಿಸಲು ನರೇಂದ್ರ ಮೋದಿ ಸರ್ಕಾರ ಒತ್ತಡ ಹಾಕುತ್ತಿದ್ದರೂ ಭಾರತವು ಶಸ್ತ್ರಾಸ್ತ್ರಗಳನ್ನು ರಫ್ತು ಮಾಡುವ ಅಗ್ರ 25 ದೇಶಗಳಲ್ಲಿ ತನ್ನ ಸ್ಥಾನವನ್ನು ಪಡೆದಿಲ್ಲ. ಟಾಪ್ 10 ಶಸ್ತ್ರಾಸ್ತ್ರ ರಫ್ತು ಮಾಡುವ ದೇಶಗಳು ಅಮೇರಿಕಾ00000 (42%), ಫ್ರಾನ್ಸ್ (11%), ರಷ್ಯಾ (11%), ಚೀನಾ (5.8%), ಜರ್ಮನ್ (5.6%), ಇಟಲಿ (4.3%), ಯುಕೆ (3.7%), ಸ್ಪೇನ್ (2.7%), ಇಸ್ರೇಲ್ (2.4%) ಮತ್ತು ದಕ್ಷಿಣ ಕೊರಿಯಾ (2%).

You cannot copy content of this page

Exit mobile version