Home ರಾಜ್ಯ ದಕ್ಷಿಣ ಕನ್ನಡ ಇಂಡಿಯಾವು ಎಲ್ಲರನ್ನೂ ಒಳಗೊಳ್ಳುವ ಡೆಮಾಕ್ರಸಿಯಾಗಿ ಉಳಿಯಬೇಕು-ಡಾ.ಶಂಸುಲ್‌ ಇಸ್ಲಾಂ

ಇಂಡಿಯಾವು ಎಲ್ಲರನ್ನೂ ಒಳಗೊಳ್ಳುವ ಡೆಮಾಕ್ರಸಿಯಾಗಿ ಉಳಿಯಬೇಕು-ಡಾ.ಶಂಸುಲ್‌ ಇಸ್ಲಾಂ

0

ಮಂಗಳೂರು: ನಾವು ಸುಮಾರು 160 ವರ್ಷಗಳ ಹಿಂದೆ ನಡೆದ ಘಟನೆಗಳ ಬಗ್ಗೆ ಯಾಕೆ ಮಾತಾಡುತ್ತಿದ್ದೇವೆ, ನಾವು ಅವುಗಳನ್ನು ಯಾಕೆ ಸ್ಮರಿಸುತ್ತಿದ್ದೇವೆ ಎಂದರೆ ವಿಭಜನೆಯ ಕಾಲ ಮುಗಿದುಹೋಗಿದೆ. ಈಗ ಇಂಡಿಯಾ ಒಂದು ರಾಷ್ಟ್ರ. ಇದು ವಿಭಿನ್ನ ಹೂಗಳ ವಿಭಿನ್ನ ಬಣ್ಣಗಳ ಒಂದು ಬುಕೆ. ಬೇರೆ ಬೇರೆ ಪ್ರದೇಶಗಳ ಇಂಡಿಯಾವು ಎಲ್ಲರನ್ನೂ ಒಳಗೊಳ್ಳುವ ಡೆಮಾಕ್ರಸಿಯಾಗಿ ಉಳಿಯಬೇಕು. ಆದರೆ ನಮ್ಮಲ್ಲಿ ಕೆಲವು ಶಕ್ತಿಗಳಿಗೆ ಡೆಮಾಕ್ರಸಿಯಲ್ಲಿ ನಂಬಿಕೆ ಇಲ್ಲ. ಸಮಾನತೆ, ಸಮನ್ಯಾಯದಲ್ಲಿ ನಂಬಿಕೆಯಿಲ್ಲ. ಇಂಡಿಯಾವು ಅನೇಕ ರಿಲಿಜನ್‌ ಗಳಿಂದಾಗಿದೆ ಎಂಬುದರಲ್ಲಿ ನಂಬಿಕೆಯಿಲ್ಲ. ಈ ಕ್ರಿಶ್ಚಿಯಾನಿಟಿ ಮತ್ತು ಇಸ್ಲಾಂ ಹೊರಗಿನಿಂದ ಬಂದಿವೆ ಎಂದು ಕೆಲವರು ಹೇಳುತ್ತಾರೆ. ಆದರೆ ಸಿಖ್ಖಿಸಂ, ಜೈನಿಸಂ, ಬುದ್ಧಿಸಂ ಮೊದಲಾದ ಪ್ರತ್ಯೇಕ ಧರ್ಮಗಳು ಹಿಂದೂ ಧರ್ಮದ ಭಾಗಗಳಾಗಿವೆ. ಇವರ ಹಿಂದೂ ಧರ್ಮ ಅಥವಾ ಸನಾತನದ ವ್ಯಾಖ್ಯಾನ ಹೇಗಿದೆ ಎಂದರೆ 80% ಹಿಂದೂಗಳನ್ನು ಹೊರಗಿಡಬೇಕಾಗುತ್ತದೆ ಎಂದು ದೆಹಲಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಡಾ. ಶಂಸುಲ್‌ ಇಸ್ಲಾಂ ಹೇಳಿದರು.

ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಇಂದು ನಡೆದ ಬಿ ವಿ ಕಕ್ಕಿಲ್ಲಾಯ ಉಪನ್ಯಾಸ ಕಾರ್ಯಕ್ರಮ (2023) ದಲ್ಲಿ ಮೊದಲ ಸ್ವಾತಂತ್ರ್ಯ ಸಂಗ್ರಾಮ- 1857 ಜಂಟಿ ಬಲಿದಾನಗಳು , ಜಂಟಿ ವಾರಿಸುದಾರಿಕೆ ಎಂಬ ವಿಷಯದ ಮೇಲೆ ಅವರು ಮಾತಾಡುತ್ತಿದ್ದರು. ಹೊಸತು ಮಾಸ ಪತ್ರಿಕೆ, ಮೆ. ಕೃಷ್ಣನ್‌ ಟ್ರಸ್ಟ್‌, ಸಮದರ್ಶಿ ವೇದಿಕೆಗಳು ವಿ.ವಿ. ಕಾಲೇಜಿನ ಇತಿಹಾಸ ವಿಭಾಗದ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದವು.

ಸಿಪಾಯಿ ದಂಗೆಯಲ್ಲಿ ಸಿಡಿದ ಸೈನಿಕರಲ್ಲಿ 70-80% ಹಿಂದೂಗಳು, 20-30% ಮುಸಲ್ಮಾನರಾಗಿದ್ದರು. ಇವರೆಲ್ಲರೂ ತಮ್ಮ ದಂಗೆಯ ನೇತೃತ್ವ ವಹಿಸುವಂತೆ ಕೇಳಿಕೊಂಡದ್ದು ಕೆಂಪುಕೋಟೆಯಲ್ಲಿದ್ದ ಬಹದ್ದೂರ್ ಶಾ ನನ್ನು. ಹಿಂದೂ ಸೈನಿಕರು ಹಿಂದೂ ರಾಜರನ್ನೇ  ನೇತೃತ್ವ ವಹಿಸಲು ಕೇಳಬಹುದಿತ್ತು, ಆದರೆ ಹಾಗಾಗಲಿಲ್ಲ. ಇದು ನಮ್ಮ ಭಾರತ ಎಂದು ಹೇಳುತ್ತಾ ಹಿಂದೂ ಮುಸ್ಲಿಂ ಸಮುದಾಯಗಳ ನಡುವಿನ ಪ್ರತ್ಯೇಕತೆ ಅಂದು ತಲೆಕೆಡಿಸಿಕೊಳ್ಳುವ ಸಮಸ್ಯೆಯೇ ಆಗಿರಲಿಲ್ಲವೆಂದರು.

ವೇದಿಕೆಯ ಕಾರ್ಯಕ್ರಮಕ್ಕೂ ಮುನ್ನ, ಕರ್ನಾಟಕದಲ್ಲಿ 1857 ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಕುರಿತ ನಾಲ್ಕು ಘಟನೆಗಳು ಹಾಗೂ ಆ ಘಟನೆಗಳಲ್ಲಿ ಪ್ರಾಣತ್ಯಾಗ ಗೈದ 123 ಹುತಾತ್ಮರ ಹೆಸರುಗಳ ಫಲಕವನ್ನು ಮಂಗಳೂರು ವಿ ವಿ ಕಾಲೇಜಿನ ಆವರಣದಲ್ಲಿ ಅವರು ಅನಾವರಣ ಗೊಳಿಸಿದರು.

ಮಂಗಳೂರು ವಿ.ವಿ.ಯ ಕುಲಪತಿಗಳಾದ ಡಾ.ಜಯರಾಜ್‌ ಅಮೀನ್‌ ಅವರು, ಶಂಸುಲ್‌ ಇಸ್ಲಾಂ ಬರೆದು ಡಾ. ಬಿ ಆರ್ ಮಂಜುನಾಥ್ ಕನ್ನಡಕ್ಕೆ ಅನುವಾದಿಸಿರುವ ʼಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ 1857-‌ ಹೇಳದೇ ಉಳಿದ ಅದ್ಭುತ ಕಥೆಗಳುʼ ಪುಸ್ತಕವನ್ನು ಬಿಡುಗಡೆಗೊಳಿಸಿದರು

ಡಾ. ಶ್ರೀನಿವಾಸ ಕಕ್ಕಿಲ್ಲಾಯರು ಸ್ವಾಗತಿಸಿ, ಕಲ್ಲೂರು ನಾಗೇಶ್‌ ವಂದಿಸಿದರು.


 

You cannot copy content of this page

Exit mobile version