Home ದೇಶ ರಷ್ಯಾ ತೈಲ ಖರೀದಿ ನಿಲ್ಲಿಸಲು ಭಾರತ ಯೋಜಿಸಿದೆ ಎಂದು ಟ್ರಂಪ್ ಹೊರತುಪಡಿಸಿ ಬೇರೆ ಯಾರೂ ಹೇಳಿಲ್ಲ:...

ರಷ್ಯಾ ತೈಲ ಖರೀದಿ ನಿಲ್ಲಿಸಲು ಭಾರತ ಯೋಜಿಸಿದೆ ಎಂದು ಟ್ರಂಪ್ ಹೊರತುಪಡಿಸಿ ಬೇರೆ ಯಾರೂ ಹೇಳಿಲ್ಲ: ರಷ್ಯಾ ಸಚಿವ ಲಾವ್ರೊವ್ ವ್ಯಂಗ್ಯ

0

ಭಾರತವು ತನ್ನ ದೀರ್ಘಕಾಲದ ಮಿತ್ರ ರಾಷ್ಟ್ರ ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸಲು ಯೋಜಿಸಿದೆ ಎಂದು ಜಗತ್ತಿಗೆ ಹೇಳುತ್ತಿರುವ ಏಕೈಕ ವ್ಯಕ್ತಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಹೇಳಿದ್ದಾರೆ.

ಕಳೆದ ವಾರ ನವದೆಹಲಿಯೊಂದಿಗೆ ಫ್ರೇಮ್ವರ್ಕ್ ವ್ಯಾಪಾರ ಒಪ್ಪಂದವನ್ನು ಘೋಷಿಸಿದ್ದ ಟ್ರಂಪ್, ರಷ್ಯಾದಿಂದ ಕಚ್ಚಾ ತೈಲ ಖರೀದಿಸದಿರಲು ಭಾರತ ಒಪ್ಪಿಕೊಂಡಿದೆ ಎಂದು ಹೇಳಿಕೊಂಡಿದ್ದರು. ರಷ್ಯಾ ತೈಲ ಮಾರಾಟದಿಂದ ಗಳಿಸುವ ಹಣವನ್ನು ಉಕ್ರೇನ್ ಯುದ್ಧಕ್ಕೆ ಬಳಸಲಾಗುತ್ತಿದೆ ಎಂದು ಅಮೆರಿಕ ಆರೋಪಿಸಿದೆ.

ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿದ ರಷ್ಯಾದ ವಿದೇಶಾಂಗ ಸಚಿವ ಲಾವ್ರೊವ್, “ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸಲು ಭಾರತ ಯೋಜಿಸಿದೆ ಎಂದು ಟ್ರಂಪ್ ಹೊರತುಪಡಿಸಿ ಇನ್ನಾರೂ ಹೇಳಿಕೊಂಡಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ರಷ್ಯಾ-ಭಾರತ ನಡುವಿನ ಒಪ್ಪಂದಗಳು ಅಪಾಯದಲ್ಲಿವೆ ಎಂದು ನಂಬಲು ಯಾವುದೇ ಆಧಾರಗಳಿಲ್ಲ ಎಂದು ಅವರು ಹೇಳಿದರು.

ಇದೇ ವೇಳೆ, ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು, ಕಚ್ಚಾ ತೈಲ ಖರೀದಿಗಾಗಿ ಭಾರತವು ಅನೇಕ ದೇಶಗಳಿಂದ ಪೂರೈಕೆ ಮಾಡಿಕೊಳ್ಳುತ್ತದೆ ಹಾಗೂ ಪೂರೈಕೆ ಸರಪಳಿಯಲ್ಲಿ ಸ್ಥಿರತೆ ಕಾಪಾಡಿಕೊಳ್ಳಲು ಮೂಲಗಳನ್ನು ವೈವಿಧ್ಯಗೊಳಿಸುತ್ತದೆ ಎಂದು ಎರಡು ದಿನಗಳ ಹಿಂದೆ ಹೇಳಿದ್ದರು.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಕೂಡ, ಭಾರತದ ಇಂಧನ ಸಂಬಂಧಿತ ನಿರ್ಧಾರಗಳು ಸಂಪೂರ್ಣವಾಗಿ ರಾಷ್ಟ್ರೀಯ ಹಿತಾಸಕ್ತಿಯಿಂದ ಮಾರ್ಗದರ್ಶಿಸಲ್ಪಡುತ್ತವೆ ಎಂದು ಸ್ಪಷ್ಟಪಡಿಸಿದ್ದರು.

You cannot copy content of this page

Exit mobile version