ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯಲ್ಲಿ ಭಾರತ ಅಗ್ರಸ್ಥಾನದಲ್ಲಿದೆ. ಇದು ಪ್ರತಿ ವರ್ಷ 10.2 ಮಿಲಿಯನ್ ಟನ್ ತ್ಯಾಜ್ಯವನ್ನು ಉತ್ಪಾದಿಸುತ್ತದೆ.
ಇದು ಮುಂದಿನ ಅತಿದೊಡ್ಡ ಮಾಲಿನ್ಯಕಾರಕ ದೇಶಕ್ಕಿಂತ ಎರಡು ಪಟ್ಟು ಹೆಚ್ಚು ಎಂದು ವರದಿಯೊಂದು ಬಹಿರಂಗಪಡಿಸಿದೆ. UK ಯ ಲೀಡ್ಸ್ ವಿಶ್ವವಿದ್ಯಾನಿಲಯದ ಸಂಶೋಧಕರ ಪ್ರಕಾರ, ವಿಶ್ವಾದ್ಯಂತ ಪ್ರತಿ ವರ್ಷ 57 ಮಿಲಿಯನ್ ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಉತ್ಪಾದಿಸಲಾಗುತ್ತದೆ. ಈ ತ್ಯಾಜ್ಯಗಳು ಒಂದೇ ಸ್ಥಳದಲ್ಲಿ ಸಂಗ್ರಹವಾಗದೆ, ಸಮುದ್ರದ ತಳದಿಂದ ಪರ್ವತದ ತುದಿಗಳವರೆಗೆ ಮತ್ತು ಅಂತಿಮವಾಗಿ ಮಾನವ ದೇಹದಲ್ಲಿಯೂ ಸಂಗ್ರಹಗೊಳ್ಳುತ್ತಿವೆ. ಈ ತ್ಯಾಜ್ಯದ ಮೂರನೇ ಎರಡರಷ್ಟು ಭಾಗವು ಜಾಗತಿಕ ದಕ್ಷಿಣದ ದೇಶಗಳಿಂದ ಬರುತ್ತದೆ ಎಂದು ವರದಿ ಬಹಿರಂಗಪಡಿಸುತ್ತದೆ.
ಮೊಬೈಲ್ ಬಳಕೆ ಮೆದುಳಿನ ಕ್ಯಾನ್ಸರಿಗೆ ಕಾರಣವಾಗುವುದಿಲ್ಲ
ಮೊಬೈಲ್ ಫೋನ್ ಬಳಕೆಗೂ ಮಿದುಳಿನ ಕ್ಯಾನ್ಸರ್ ಗೂ ಯಾವುದೇ ಸಂಬಂಧವಿಲ್ಲ ಎಂದು ‘ವಿಶ್ವ ಆರೋಗ್ಯ ಸಂಸ್ಥೆ’ (ಡಬ್ಲ್ಯುಎಚ್ ಒ)ಯ ಇತ್ತೀಚಿನ ಅಧ್ಯಯನ ಬಹಿರಂಗಪಡಿಸಿದೆ. ಸಂಶೋಧಕರ ತಂಡವು 1994ರಿಂದ 2022ರವರೆಗೆ ಪ್ರಕಟವಾದ 63 ಅಧ್ಯಯನಗಳನ್ನು ವಿಶ್ಲೇಷಿಸಿದೆ. ಮೊಬೈಲ್ ಫೋನ್ಗಳಿಂದ ಹೊರಸೂಸುವ ರೇಡಿಯೊ ತರಂಗಗಳಿಗೂ ಮೆದುಳಿನ ಕ್ಯಾನ್ಸರ್ಗೂ ಯಾವುದೇ ಸಂಬಂಧವಿಲ್ಲ ಎಂದು ತೀರ್ಮಾನಿಸಲಾಗಿದೆ. ಕಳೆದ ಎರಡು ದಶಕಗಳಲ್ಲಿ ವೈರ್ಲೆಸ್ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸಿದಾಗಿನಿಂದ ಮೆದುಳಿನ ಕ್ಯಾನ್ಸರ್ ಪ್ರಕರಣಗಳಲ್ಲಿ ಯಾವುದೇ ಹೆಚ್ಚಳ ಕಂಡುಬಂದಿಲ್ಲ ಎಂದು ಸಂಶೋಧನೆಯ ನೇತೃತ್ವ ವಹಿಸಿರುವ ಆಸ್ಟ್ರೇಲಿಯನ್ ರೇಡಿಯೇಶನ್ ಪ್ರೊಟೆಕ್ಷನ್ ಮತ್ತು ನ್ಯೂಕ್ಲಿಯರ್ ಸೇಫ್ಟಿ ಏಜೆನ್ಸಿ ಹೇಳಿದೆ.