ಭಾರತ-ಅಮೆರಿಕ | ನಾವು ಕ್ಲೋಜು ಫ್ರೆಂಡ್ಸ್: ಪ್ರಧಾನಿ ಮೋದಿ

ದೆಹಲಿ: ಸುಂಕದ ಯುದ್ಧದ ಹಿನ್ನೆಲೆಯಲ್ಲಿ, ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ತಮ್ಮ ‘ಟ್ರೂತ್’ ಸಾಮಾಜಿಕ ಮಾಧ್ಯಮದಲ್ಲಿ ಮಂಗಳವಾರ ಒಂದು ಪೋಸ್ಟ್ ಹಾಕಿ, ಭಾರತದ ಪ್ರಧಾನಿ ಮೋದಿಯವರೊಂದಿಗೆ ಮಾತನಾಡಲು ಎದುರು ನೋಡುತ್ತಿರುವುದಾಗಿ ತಿಳಿಸಿದ್ದರು.

ಈ ಪೋಸ್ಟ್‌ಗೆ ಭಾರತದ ಪ್ರಧಾನಿ ಮೋದಿ ಪ್ರತಿಕ್ರಿಯಿಸಿದ್ದಾರೆ. ತಾವೂ ಸಹ ಟ್ರಂಪ್ ಅವರೊಂದಿಗೆ ಮಾತನಾಡಲು ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ. “ಎರಡೂ ದೇಶಗಳ ಜನರಿಗೆ ಉತ್ತಮ ಭವಿಷ್ಯ ಒದಗಿಸಲು ಅಮೆರಿಕದ ನಾಯಕರೊಂದಿಗೆ ಕೆಲಸ ಮಾಡುತ್ತೇನೆ.

ಭಾರತ-ಅಮೆರಿಕ ನಿಕಟ ಸ್ನೇಹಿತರು, ಉತ್ತಮ ಪಾಲುದಾರರು. ಪ್ರಸ್ತುತ ಎರಡೂ ದೇಶಗಳ ನಡುವೆ ಇರುವ ವ್ಯಾಪಾರ ಅಡೆತಡೆಗಳು ದೂರವಾಗಲಿವೆ ಮತ್ತು ನಮ್ಮ ಸಂಬಂಧಗಳು ಮತ್ತಷ್ಟು ಗಟ್ಟಿಯಾಗಲಿವೆ ಎಂದು ನಾನು ಆಶಿಸುತ್ತೇನೆ. ಟ್ರಂಪ್ ಅವರೊಂದಿಗೆ ಮಾತನಾಡಲು ನಾನೂ ಎದುರು ನೋಡುತ್ತಿದ್ದೇನೆ” ಎಂದು ಮೋದಿ ತಿಳಿಸಿದರು.

Related Articles

ಇತ್ತೀಚಿನ ಸುದ್ದಿಗಳು