ದೆಹಲಿ: ಸುಂಕದ ಯುದ್ಧದ ಹಿನ್ನೆಲೆಯಲ್ಲಿ, ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ತಮ್ಮ ‘ಟ್ರೂತ್’ ಸಾಮಾಜಿಕ ಮಾಧ್ಯಮದಲ್ಲಿ ಮಂಗಳವಾರ ಒಂದು ಪೋಸ್ಟ್ ಹಾಕಿ, ಭಾರತದ ಪ್ರಧಾನಿ ಮೋದಿಯವರೊಂದಿಗೆ ಮಾತನಾಡಲು ಎದುರು ನೋಡುತ್ತಿರುವುದಾಗಿ ತಿಳಿಸಿದ್ದರು.
ಈ ಪೋಸ್ಟ್‌ಗೆ ಭಾರತದ ಪ್ರಧಾನಿ ಮೋದಿ ಪ್ರತಿಕ್ರಿಯಿಸಿದ್ದಾರೆ. ತಾವೂ ಸಹ ಟ್ರಂಪ್ ಅವರೊಂದಿಗೆ ಮಾತನಾಡಲು ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ. “ಎರಡೂ ದೇಶಗಳ ಜನರಿಗೆ ಉತ್ತಮ ಭವಿಷ್ಯ ಒದಗಿಸಲು ಅಮೆರಿಕದ ನಾಯಕರೊಂದಿಗೆ ಕೆಲಸ ಮಾಡುತ್ತೇನೆ.
ಭಾರತ-ಅಮೆರಿಕ ನಿಕಟ ಸ್ನೇಹಿತರು, ಉತ್ತಮ ಪಾಲುದಾರರು. ಪ್ರಸ್ತುತ ಎರಡೂ ದೇಶಗಳ ನಡುವೆ ಇರುವ ವ್ಯಾಪಾರ ಅಡೆತಡೆಗಳು ದೂರವಾಗಲಿವೆ ಮತ್ತು ನಮ್ಮ ಸಂಬಂಧಗಳು ಮತ್ತಷ್ಟು ಗಟ್ಟಿಯಾಗಲಿವೆ ಎಂದು ನಾನು ಆಶಿಸುತ್ತೇನೆ. ಟ್ರಂಪ್ ಅವರೊಂದಿಗೆ ಮಾತನಾಡಲು ನಾನೂ ಎದುರು ನೋಡುತ್ತಿದ್ದೇನೆ” ಎಂದು ಮೋದಿ ತಿಳಿಸಿದರು.