ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಕೆಪಿಎಸ್‌ಸಿ ನೇಮಕಾತಿ ಅಕ್ರಮ ತನಿಖೆಗೆ ಹೊಸ ಸಾರಥಿ: ಎಸ್‌ಐಟಿ ಜವಾಬ್ದಾರಿ ಆರ್. ಹಿತೇಂದ್ರ ಹೆಗಲಿಗೆಕಬ್ಬು ಬೆಲೆ ಬಿಕ್ಕಟ್ಟು: ಇಂದು ಕಾರ್ಖಾನೆ ಮಾಲೀಕರು-ರೈತ ಸಂಘಟನೆಗಳ ಸಭೆ; ಸಚಿವ ಸತೀಶ್ ಜಾರಕಿಹೊಳಿ ಮಹತ್ವದ ಹೇಳಿಕೆಗಾಂಧಿ ಹತ್ಯೆಯ ಸತ್ಯ ನಾಟಕ ವಿವಾದ: ಸುಚಿತ್ರಾ ಫಿಲಂ ಸೊಸೈಟಿಗೆ ಬನಶಂಕರಿ ಪೊಲೀಸರ ನೋಟಿಸ್ಮೋದಿ ಅವರಿಗೆ ಬಹಿರಂಗ ಚರ್ಚೆಗೆ ರಾಹುಲ್ ಗಾಂಧಿ ಸವಾಲು; ವಿದೇಶಿ ಬೆಂಬಲದ ಆರೋಪಕ್ಕೆ ತಿರುಗೇಟು16 ವರ್ಷಗಳ ಬಳಿಕ ದೇಶದಲ್ಲಿ ಜನಗಣತಿ ಪ್ರಕ್ರಿಯೆಗೆ ಅಧಿಕೃತ ವೇಳಾಪಟ್ಟಿ ಪ್ರಕಟ; ಜನವರಿ 25ರಿಂದ ಮನೆಮನೆ ಸಮೀಕ್ಷೆ ಆರಂಭಅಸ್ಸಾಂ: ಮುಸ್ಲಿಂ ಬಾಹುಳ್ಯದ ಆಲಂಗಂಜ್‌ ಪ್ರದೇಶದಲ್ಲಿ ತೆರವು ಕಾರ್ಯಾಚರಣೆಯಿಂದ ನಿರ್ವಸತಿಗರಾದ 4,000ಕ್ಕೂ ಹೆಚ್ಚು ನಿವಾಸಿಗಳುಟಿಕೆಟ್ ರೇಟ್‌ ಜಾಸ್ತಿ ಅನ್ಸಿದ್ರೆ ವಿಮಾನದಲ್ಲಿ ಓಡಾಡಬೇಡಿ: ಸುಪ್ರೀಂ ಕೋರ್ಟ್SIR, EVM ವಿಚಾರದಲ್ಲಿ ವಿಶೇಷ ಸಂಸತ್ ಅಧಿವೇಶನಕ್ಕೆ ಸರ್ಕಾರ ಸಿದ್ಧ: ರಾಹುಲ್ ಗಾಂಧಿಗೆ ಅಮಿತ್ ಶಾ ಸವಾಲುಎಸ್‌ಐಆರ್‌ ಪ್ರತಿಭಟನೆ | ಬಾಂಬೆ ಹೈಕೋರ್ಟ್‌ ಎದುರು ಬೇಷರತ್‌ ಕ್ಷಮೆಯಾಚಿಸಿ‌, ಮುಚ್ಚಳಿಕೆ ಬರೆದುಕೊಟ್ಟ ನಟ ಇಮ್ರಾನ್‌ ಖಾನ್ಅಡ್ಡಂಡ ಪ್ರಕರಣ | ಸಂವಿಧಾನದ ಮೇಲೆ ಸವಾರಿ ಮಾಡಲು ಯತ್ನಿಸಿದರೆ ಜನರೇ ಕಾಂಗ್ರೆಸಿಗೆ ಬುದ್ಧಿ ಕಲಿಸುತ್ತಾರೆ: ತೇಜಸ್ವಿ ಸೂರ್ಯ ವಾಗ್ದಾಳಿಸಾರ್ವಜನಿಕರ ಆಕ್ರೋಶಕ್ಕೆ ಮಣಿದ ಸರ್ಕಾರ: ನಂದಿನಿ ಮೊಸರು ದರ ಲೀಟರ್‌ಗೆ ₹2 ಇಳಿಕೆಗೆ ಸಿಎಂ ಸೂಚನೆಬೆಂಗಳೂರಿನ ಐಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ: ಆರು ಪ್ರಶ್ನೆಗಳ ಪಟ್ಟಿಯೊಂದಿಗೆ ಕಂಪನಿಗಳನ್ನು ಸಂಪರ್ಕಿಸಿದ ಕರವೇಬಾಹ್ಯಾಕಾಶದಲ್ಲಿ AI ತಂತ್ರಜ್ಞಾನದ ಹೊಸ ಪ್ರಯೋಗ: ಉಪಗ್ರಹದಿಂದ ಕವಿತೆ ರಚಿಸಿ ಭೂಮಿಗೆ ರವಾನಿಸಿದ ಗೂಗಲ್!ದೀಪಾವಳಿಗೆ ರಾತ್ರಿ 8ರಿಂದ 10ರವರೆಗೆ ಮಾತ್ರ ಪಟಾಕಿ: ಹಸಿರು ಪಟಾಕಿ ಬಳಕೆಗೆ ಪೊಲೀಸ್ ಸೂಚನೆಸ್ಟಿಂಗ್ ಆಪರೇಷನ್ ವಿವಾದಕ್ಕೆ ಹೊಸ ತಿರುವು; ED ಬಳಕೆಗೆ ಒತ್ತಡದ ಆರೋಪ ಮಾಡಿದ ಪ್ರಿಯಾಂಕ್ ಖರ್ಗೆಅಡ್ಡಂಡ ಕಾರ್ಯಪ್ಪ ವಿರುದ್ಧ ಮತ್ತೆ ಪ್ರತಿಭಟನೆ: ಸುಚಿತ್ರಾ ಅಕಾಡೆಮಿ ಎದುರು ಚಪ್ಪಲಿ ಎಸೆದ ಕಾರ್ಯಕರ್ತರುಹವಾಮಾನ ಬದಲಾವಣೆಯ ಹೊಡೆತ; ಜನರ ಆರೋಗ್ಯ ತತ್ತರ: ಭಾರತದಲ್ಲಿ ಶಾಖದ ಒತ್ತಡ, ಸಾಂಕ್ರಾಮಿಕ ರೋಗಗಳ ಅಪಾಯ ಹೆಚ್ಚಳಢಾಕಾದಿಂದ ದೆಹಲಿವರೆಗೆ, ಬರ್ಲಿನ್‌ನಿಂದ ಬೆಂಗಳೂರಿನವರೆಗೆ: ಜಗತ್ತಿನಲ್ಲಿ ನಡೆಯುತ್ತಿರುವ ಪ್ರಮುಖ ಪ್ರತಿಭಟನೆಗಳು ಇವು!ತನಿಖೆಯ ಹೆಸರಿನಲ್ಲಿ ನನ್ನ ಮನೆಯನ್ನೇಕೆ ಗುರಿ ಮಾಡಿಕೊಂಡಿದ್ದೀರಿ? ಎಚ್‌ ಡಿ ಕುಮಾರಸ್ವಾಮಿ ಪ್ರಶ್ನೆಏಷ್ಯಾದ ಕಾರ್ಖಾನೆಗಳ ವೇಗಕ್ಕೆ ಬ್ರೇಕ್: ಇಂಧನ ಬೆಲೆ ಏರಿಕೆ, ಯುದ್ಧದ ಆತಂಕ; ಕರ್ನಾಟಕದ ಉದ್ಯೋಗಗಳ ಮೇಲೆಯೂ ಪರಿಣಾಮ

ಎಸ್‌ಐಆರ್‌ ಪ್ರತಿಭಟನೆ | ಬಾಂಬೆ ಹೈಕೋರ್ಟ್‌ ಎದುರು ಬೇಷರತ್‌ ಕ್ಷಮೆಯಾಚಿಸಿ‌, ಮುಚ್ಚಳಿಕೆ ಬರೆದುಕೊಟ್ಟ ನಟ ಇಮ್ರಾನ್‌ ಖಾನ್

PPeepal Media

Peepal Media ದೇಶ

• 1 ನಿಮಿಷದ ಓದು

ಎಸ್‌ಐಆರ್‌ ಪ್ರತಿಭಟನೆ | ಬಾಂಬೆ ಹೈಕೋರ್ಟ್‌ ಎದುರು ಬೇಷರತ್‌ ಕ್ಷಮೆಯಾಚಿಸಿ‌, ಮುಚ್ಚಳಿಕೆ ಬರೆದುಕೊಟ್ಟ ನಟ ಇಮ್ರಾನ್‌ ಖಾನ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿರೋಧಿಸಿ ಮುಂಬೈನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾದ ಆರೋಪಕ್ಕೆ ಸಂಬಂಧಿಸಿದಂತೆ ಅಮೆರಿಕದ ಪ್ರಜೆ ಹಾಗೂ ಒಸಿಐ (OCI) ಕಾರ್ಡ್ ಹೊಂದಿರುವ ನಟ ಇಮ್ರಾನ್ ಖಾನ್ ಬಾಂಬೆ ಹೈಕೋರ್ಟ್‌ಗೆ ಬೇಷರತ್ ಕ್ಷಮೆ ಕೋರಿದ್ದಾರೆ. ಮುಂದೆ ಯಾವುದೇ ಪ್ರತಿಭಟನೆಯಲ್ಲಿ ಭಾಗವಹಿಸುವುದಿಲ್ಲ ಎಂದು ನ್ಯಾಯಾಲಯಕ್ಕೆ ಮುಚ್ಚಳಿಕೆ ನೀಡಿದ್ದಾರೆ.

ಮುಂಬೈ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾದ ಆರೋಪದ ಹಿನ್ನೆಲೆಯಲ್ಲಿ ಬಾಲಿವುಡ್ ನಟ ಇಮ್ರಾನ್ ಖಾನ್ ಬಾಂಬೆ ಹೈಕೋರ್ಟ್‌ಗೆ ಬೇಷರತ್ ಕ್ಷಮೆ ಸಲ್ಲಿಸಿದ್ದಾರೆ. ಭವಿಷ್ಯದಲ್ಲಿ ಯಾವುದೇ ಪ್ರತಿಭಟನೆಯಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಭಾಗವಹಿಸುವುದಿಲ್ಲ ಎಂದು ಸೋಮವಾರ (ನವೆಂಬರ್ 2) ನ್ಯಾಯಾಲಯಕ್ಕೆ ಮುಚ್ಚಳಿಕೆ ನೀಡಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಅಕ್ಟೋಬರ್ 10ರಂದು ಮುಂಬೈನ ಆಗಸ್ಟ್ ಕ್ರಾಂತಿ ಮೈದಾನದಲ್ಲಿ ಪ್ರತಿಭಟನೆ ನಡೆದಿತ್ತು. ಈ ವೇಳೆ ನಟ ಇಮ್ರಾನ್ ಖಾನ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಅವರು ಅಮೆರಿಕದ ಪೌರತ್ವ ಹೊಂದಿದ್ದು, ಭಾರತೀಯ ಸಾಗರೋತ್ತರ ಪ್ರಜೆ (OCI) ಕಾರ್ಡ್ ಹೊಂದಿದ್ದಾರೆ.

ಈ ಘಟನೆಯ ಬೆನ್ನಲ್ಲೇ ವಿದೇಶಿ ಪ್ರಾದೇಶಿಕ ನೋಂದಣಿ ಕಚೇರಿ (FRRO) ಅಕ್ಟೋಬರ್ 14ರಂದು ಅವರಿಗೆ ‘ಭಾರತವನ್ನು ತೊರೆಯುವಂತೆ’ (Leave India Notice) ನೋಟಿಸ್ ನೀಡಿತ್ತು. ಅಕ್ಟೋಬರ್ 28ರೊಳಗೆ ದೇಶ ಬಿಡುವಂತೆ ಸೂಚಿಸಲಾಗಿತ್ತು. ಇದನ್ನು ಪ್ರಶ್ನಿಸಿ ಇಮ್ರಾನ್ ಖಾನ್ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಸೋಮವಾರ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಮಹೇಶ್ ಚಂದ್ರ ತ್ರಿಪಾಠಿ ಮತ್ತು ನ್ಯಾಯಮೂರ್ತಿ ಅದ್ವೈತ್ ಸೇಥ್ನಾ ಅವರಿದ್ದ ಪೀಠ, ಒಸಿಐ ಕಾರ್ಡ್ ಹೊಂದಿರುವವರು ಭಾರತೀಯ ನಾಗರಿಕರಂತೆ ಸಮಾನ ಹಕ್ಕುಗಳನ್ನು ಹೊಂದಿರುವುದಿಲ್ಲ ಎಂದು ಮೌಖಿಕವಾಗಿ ಅಭಿಪ್ರಾಯಪಟ್ಟಿತು. ಎಸ್‌ಐಆರ್ ವಿಷಯದಿಂದ ಇಮ್ರಾನ್ ಖಾನ್‌ಗೆ ನೇರ ಸಂಬಂಧವಿಲ್ಲದಿರುವಾಗ ಪ್ರತಿಭಟನೆಯಲ್ಲಿ ಭಾಗವಹಿಸಿದ್ದೇಕೆ ಎಂದೂ ನ್ಯಾಯಪೀಠ ಪ್ರಶ್ನಿಸಿತು.

ಇದಕ್ಕೆ ಪ್ರತಿಕ್ರಿಯಿಸಿದ ಇಮ್ರಾನ್ ಖಾನ್, ತಾವು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಉದ್ದೇಶ ಹೊಂದಿರಲಿಲ್ಲ. ಅಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನೋಡಲು ಮಾತ್ರ ಹೋಗಿದ್ದೆ ಎಂದು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.

“ಈ ಮಹಾನ್ ದೇಶ ಮತ್ತು ಅದರ ಸಂವಿಧಾನದ ಬಗ್ಗೆ ನನಗೆ ಅಪಾರ ಪ್ರೀತಿ ಹಾಗೂ ಗೌರವವಿದೆ” ಎಂದು ಅವರು ಹೇಳಿದ್ದಾರೆ.

“ಮುಂದೆ ಯಾವುದೇ ಪ್ರತಿಭಟನೆಯಲ್ಲಿ ಭಾಗವಹಿಸುವುದಿಲ್ಲ. ಇತರರನ್ನು ನೇರವಾಗಿ ಅಥವಾ ಪರೋಕ್ಷವಾಗಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವುದೂ ಇಲ್ಲ” ಎಂದು ಮುಚ್ಚಳಿಕೆ ನೀಡಿದ್ದಾರೆ.

ಇಮ್ರಾನ್ ಖಾನ್ ಸಲ್ಲಿಸಿದ ಕ್ಷಮಾಪಣೆ ಮತ್ತು ಮುಚ್ಚಳಿಕೆಯನ್ನು ದಾಖಲಿಸಿಕೊಂಡ ನ್ಯಾಯಾಲಯ, ಅವರ ವಿರುದ್ಧದ ದೇಶ ತೊರೆಯುವ ನೋಟಿಸ್ ಜಾರಿಯನ್ನು ಡಿಸೆಂಬರ್ 7ರವರೆಗೆ ತಡೆಹಿಡಿದಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಅದೇ ದಿನಕ್ಕೆ ಮುಂದೂಡಲಾಗಿದೆ.

PPeepal Media

Peepal Media

Peepal Media · ದೇಶ ವಿಭಾಗ

ಸಂಬಂಧಿತ ಸುದ್ದಿಗಳು