ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ಭಾರತದಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ ಎಕ್ಸ್ ಖಾತೆ ನಿಷೇಧ: ನಮ್ಮ ಬೆಳವಣಿಗೆ ನೋಡಿ ಸರ್ಕಾರ ಹೆದರಿದೆ ಎಂದ ಸಂಸ್ಥಾಪಕ ಅಭಿಜೀತ್ ದೀಪ್ಕೆ

PPeepal Media

Peepal Media ದೇಶ

• 2 ನಿಮಿಷದ ಓದು

ಭಾರತದಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ ಎಕ್ಸ್ ಖಾತೆ ನಿಷೇಧ: ನಮ್ಮ ಬೆಳವಣಿಗೆ ನೋಡಿ ಸರ್ಕಾರ ಹೆದರಿದೆ ಎಂದ ಸಂಸ್ಥಾಪಕ ಅಭಿಜೀತ್ ದೀಪ್ಕೆ

ಕಳೆದ ವಾರವಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದ್ದ ವ್ಯಂಗ್ಯ ಮತ್ತು ಡಿಜಿಟಲ್ ಪ್ರತಿಭಟನೆಯ ವೇದಿಕೆಯಾದ ‘ಕಾಕ್ರೋಚ್ ಜನತಾ ಪಾರ್ಟಿ’ಯ (CJP) ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯನ್ನು ಭಾರತದಲ್ಲಿ ಗುರುವಾರದಂದು ನಿರ್ಬಂಧಿಸಲಾಗಿದೆ (Withheld). ಈ ಇಂಟರ್ನೆಟ್ ನಿಷೇಧದ ಬೆನ್ನಲ್ಲೇ, ಪಕ್ಷದ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ‘ಕಾಕ್ರೋಚ್ ಈಸ್ ಬ್ಯಾಕ್’ (Cockroach is Back) ಎಂಬ ಹೆಸರಿನಲ್ಲಿ ಹೊಸ ಖಾತೆಯನ್ನು ತೆರೆದಿದ್ದಾರೆ.

ಖಾತೆ ಮುಚ್ಚಲ್ಪಟ್ಟ ವಿಷಯದ ಕುರಿತು ಪಿಟಿಐ (PTI) ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಅಭಿಜೀತ್ ದೀಪ್ಕೆ, “ನಿನ್ನೆಯಷ್ಟೇ ನಮ್ಮ ಖಾತೆಯನ್ನು ಹ್ಯಾಕ್ ಮಾಡಲು ಪ್ರಯತ್ನಗಳು ನಡೆದಿದ್ದರಿಂದ ಈ ರೀತಿಯ ಕ್ರಮವನ್ನು ನಾವು ಮೊದಲೇ ಊಹಿಸಿದ್ದೆವು. ಆದರೆ ಇದು ಸರ್ಕಾರದ ಸ್ವಯಂ-ಕೃತ ಅಪರಾಧವಾಗಿದೆ (ಸೆಲ್ಫ್ ಗೋಲ್). ನಮ್ಮ ತಂಡವು ಈ ಡಿಜಿಟಲ್ ಸೆನ್ಸಾರ್‌ಶಿಪ್ ವಿರುದ್ಧ ಕಾನೂನಾತ್ಮಕವಾಗಿ ಹೋರಾಡಲಿದೆ” ಎಂದು ತಿಳಿಸಿದ್ದಾರೆ. ಹೊಸದಾಗಿ ಆರಂಭಿಸಲಾದ ‘ಕಾಕ್ರೋಚ್ ಈಸ್ ಬ್ಯಾಕ್’ ಎಕ್ಸ್ ಖಾತೆಯು ಲೈವ್ ಆದ ಕೇವಲ ಒಂದು ಗಂಟೆಯಲ್ಲೇ ಬರೋಬ್ಬರಿ 16,800 ಕ್ಕೂ ಹೆಚ್ಚು ಫಾಲೋವರ್ಸ್‌ಗಳನ್ನು ಸಂಪಾದಿಸಿದೆ.

ಅಭಿಜೀತ್ ದೀಪ್ಕೆ ಅವರ ಪ್ರಕಾರ, ಭಾರತದಲ್ಲಿ ಬ್ಯಾನ್ ಆಗುವ ಮುನ್ನ ಈ ಜಿರಳೆ ಪಾರ್ಟಿಯ ಮೂಲ ಎಕ್ಸ್ ಖಾತೆಯು 2,01,000 ಕ್ಕೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿತ್ತು. ಇತ್ತೀಚೆಗೆ ಸುಪ್ರೀಂಕೋೋರ್ಟ್ ಪ್ರಧಾನ ನ್ಯಾಯಮೂರ್ತಿ (CJI) ಸೂರ್ಯಕಾಂತ್ ಅವರು ಪ್ರಕರಣವೊಂದರ ವಿಚಾರಣೆ ವೇಳೆ, “ಇತ್ತೀಚಿನ ದಿನಗಳಲ್ಲಿ ಉದ್ಯೋಗವಿಲ್ಲದ ಕೆಲವು ಯುವಕರು ಜಿರಳೆಗಳಂತೆ, ಪರಾವಲಂಬಿಗಳಂತೆ ತಯಾರಾಗುತ್ತಿದ್ದಾರೆ. ಇವರು ಆರ್‌ಟಿಐ ಮತ್ತು ಸಾಮಾಜಿಕ ಜಾಲತಾಣಗಳ ಹೆಸರಿನಲ್ಲಿ ಇಡೀ ವ್ಯವಸ್ಥೆಯ ಮೇಲೆ ದಾಳಿ ಮಾಡುತ್ತಿದ್ದಾರೆ” ಎಂದು ಹೇಳಿದ್ದರು. ಈ ವಿವಾದಾತ್ಮಕ ಹೇಳಿಕೆಯ ಬೆನ್ನಲ್ಲೇ ಮೇ 16 ರಂದು ಈ ಆನ್‌ಲೈನ್ ವ್ಯಂಗ್ಯ ಪಕ್ಷವನ್ನು ಸ್ಥಾಪಿಸಲಾಗಿತ್ತು. ತದನಂತರ ಸಿಜೆಐ ಅವರು ತಮಗೆ ಯಾವುದೇ ಉದ್ಯೋಗಿಗಳನ್ನು ನಿಂದಿಸುವ ಉದ್ದೇಶವಿರಲಿಲ್ಲ ಮತ್ತು ನಕಲಿ ಪದವಿಗಳ ಮೂಲಕ ವಕೀಲ ವೃತ್ತಿಗೆ ಬರುವವರನ್ನು ಮಾತ್ರ ತಾವು ಹಾಗೆ ಕರೆದಿದ್ದಾಗಿ ಸ್ಪಷ್ಟನೆ ನೀಡಿದ್ದರು.

ಎಕ್ಸ್‌ನಲ್ಲಿ ಖಾತೆ ನಿಷೇಧಕ್ಕೊಳಗಾಗಿದ್ದರೂ, ಮೆಟಾ ಮಾಲೀಕತ್ವದ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಈ ಪಕ್ಷದ ಖಾತೆಯು ಅತ್ಯಂತ ಸಕ್ರಿಯವಾಗಿದ್ದು, ಬರೋಬ್ಬರಿ 14.3 ಮಿಲಿಯನ್ (1.43 ಕೋಟಿ) ಫಾಲೋವರ್ಸ್‌ಗಳನ್ನು ಹೊಂದುವ ಮೂಲಕ ಮುನ್ನುಗ್ಗುತ್ತಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಈ ಜಿರಳೆ ಪಕ್ಷದ ಫಾಲೋವರ್ಸ್‌ಗಳ ಸಂಖ್ಯೆಯು ದೇಶದ ಆಡಳಿತಾರೂಢ ಭಾರತೀಯ ಜನತಾ ಪಾರ್ಟಿಯ (BJP – 8.8 ಮಿಲಿಯನ್) ಅಧಿಕೃತ ಖಾತೆಗಿಂತಲೂ ದುಪ್ಪಟ್ಟಾಗಿದೆ ಎಂದು ನೆಟ್ಟಿಗರು ಹೋಲಿಕೆ ಮಾಡುತ್ತಿದ್ದಾರೆ.

ಕೇವಲ ಮೀಮ್‌ಗಳು (Memes), ಗ್ರಾಫಿಕ್ಸ್ ಮತ್ತು ಕಟು ವ್ಯಂಗ್ಯದ ಮೂಲಕ ಯುವಜನತೆಯ ನಿರುದ್ಯೋಗ, ಪೇಪರ್ ಲೀಕ್ ಹಗರಣಗಳು ಮತ್ತು ಶಿಕ್ಷಣ ವ್ಯವಸ್ಥೆಯ ಲೋಪದೋಷಗಳನ್ನು ಪ್ರಶ್ನಿಸುತ್ತಿದ್ದ ಒಂದು ಸಣ್ಣ ಪ್ಲಾಟ್‌ಫಾರ್ಮ್ ಅನ್ನು ನೋಡಿ ಸರ್ಕಾರ ಹೆದರಿದೆ ಎಂದು ಆಮ್ ಆದ್ಮಿ ಪಕ್ಷದ (AAP) ಮಾಜಿ ಸದಸ್ಯರಾದ ಅಭಿಜೀತ್ ಆರೋಪಿಸಿದ್ದಾರೆ. ಪ್ರಸ್ತುತ ಇನ್‌ಸ್ಟಾಗ್ರಾಮ್ ಖಾತೆಯನ್ನು ಕೂಡ ಹ್ಯಾಕ್ ಮಾಡಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಎಚ್ಚರಿಸಿದ್ದಾರೆ.

ಈ ನಡುವೆ ಮೂಲ ಖಾತೆಯನ್ನು ನಿಷೇಧಿಸಿದರೂ ಇಂಟರ್ನೆಟ್‌ನಲ್ಲಿ ಜಿರಳೆಗಳ ಹಾವಳಿ ನಿಂತಿಲ್ಲ. ಎಕ್ಸ್ ವೇದಿಕೆಯಲ್ಲಿ ಸದ್ಯ ‘ದಿ ಕಾಕ್ರೋಚ್ ಯೂತ್’, ‘ಕಾಕ್ರೋಚ್ ನ್ಯೂಸ್’, ‘ಕಾಕ್ರೋಚ್ ಪಾರ್ಟಿ ಆಫ್ ಇಂಡಿಯಾ (ಜೆನ್-ಝೆಡ್)’ ಸೇರಿದಂತೆ ನೂರಾರು ಪರ್ಯಾಯ ಖಾತೆಗಳು ಸಕ್ರಿಯವಾಗಿವೆ. ಕೇವಲ ಹಾಸ್ಯಕ್ಕಾಗಿ ಆರಂಭವಾದ ಈ ಆನ್‌ಲೈನ್ ಡಿಜಿಟಲ್ ಸತ್ಯಾಗ್ರಹವು ಇಂದು ದೇಶದಲ್ಲಿ ಯುವಜನತೆಯ ಪ್ರತಿಭಟನೆಯ ಹೊಸ ರೂಪವಾಗಿ ಮತ್ತು ಡಿಜಿಟಲ್ ಭಿನ್ನಮತದ ಅತಿ ದೊಡ್ಡ ಧ್ವನಿಯಾಗಿ ಮಾರ್ಪಟ್ಟಿದೆ. ಪ್ರಶಾಂತ್ ಭೂಷಣ್, ಅಂಜಲಿ ಭಾರದ್ವಾಜ್, ಮಹುವಾ ಮೊಯಿತ್ರಾ ಮತ್ತು ಕೀರ್ತಿ ಆಜಾದ್ ಅವರಂತಹ ಪ್ರಮುಖ ನಾಯಕರು ಮತ್ತು ಸಾಮಾಜಿಕ ಕಾರ್ಯಕರ್ತರು ಈ ಜಿರಳೆ ಚಳವಳಿಯನ್ನು ಮುಕ್ತವಾಗಿ ಬೆಂಬಲಿಸುತ್ತಿದ್ದಾರೆ.

PPeepal Media

Peepal Media

Peepal Media · ದೇಶ ವಿಭಾಗ

ಸಂಬಂಧಿತ ಸುದ್ದಿಗಳು