Home ಬ್ರೇಕಿಂಗ್ ಸುದ್ದಿ ಭಾರತೀಯ ವಾಯುಪಡೆಯ ಜಾಗ್ವಾರ್ ವಿಮಾನ ಗುಜರಾತ್ ನಲ್ಲಿ ಅಪಘಾತ

ಭಾರತೀಯ ವಾಯುಪಡೆಯ ಜಾಗ್ವಾರ್ ವಿಮಾನ ಗುಜರಾತ್ ನಲ್ಲಿ ಅಪಘಾತ

0

ಭಾರತೀಯ ವಾಯುಪಡೆಯ ಜಾಗ್ವಾರ್ ಯುದ್ಧ ವಿಮಾನವು ಗುಜರಾತ್ ರಾಜ್ಯದ ಜಾಮ್‌ನಗರದಲ್ಲಿ ಅಪಘಾತಕ್ಕೀಡಾಗಿದೆ. ವಿಮಾನದಲ್ಲಿದ್ದ ಒಬ್ಬ ಪೈಲಟ್ ಸುರಕ್ಷಿತವಾಗಿ ಹೊರಬಿದ್ದಿದ್ದಾರೆ, ಇನ್ನೊಬ್ಬರಿಗಾಗಿ ಹುಡುಕಾಟ ನಡೆಯುತ್ತಿದೆ. ವಿಮಾನವು ನಿಯಮಿತ ತರಬೇತಿ ಹಾರಾಟದಲ್ಲಿತ್ತು ಎಂದು ರಕ್ಷಣಾ ಮೂಲಗಳು ತಿಳಿಸಿವೆ.

ಘಟನೆ ಬಗ್ಗೆ ನ್ಯಾಯಾಲಯದ ವಿಚಾರಣೆಗೆ ಆದೇಶಿಸಲಾಗಿದೆ ಮತ್ತು ವಿಮಾನ ನಿಲ್ದಾಣದ ಅಧಿಕಾರಿಗಳು ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿದ್ದಾರೆ.

ಜಾಮ್ನಗರ ಜಿಲ್ಲಾಧಿಕಾರಿ ಕೇತನ್ ಠಕ್ಕರ್ ಮಾತನಾಡಿ, ಜಾಮ್ನಗರ ಜಿಲ್ಲೆಯಲ್ಲಿ ವಾಯುಪಡೆಯ ವಿಮಾನವೊಂದು ಅಪಘಾತಕ್ಕೀಡಾಗಿದೆ. ಒಬ್ಬ ಪೈಲಟ್‌ನನ್ನು ರಕ್ಷಿಸಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅಗ್ನಿಶಾಮಕ ದಳದ ತಂಡ ಸ್ಥಳದಲ್ಲಿದ್ದು ಬೆಂಕಿಯನ್ನು ನಂದಿಸಿದೆ. ವಾಯುಪಡೆಯ ತಂಡ, ಅಗ್ನಿಶಾಮಕ ದಳ, ಪೊಲೀಸರು ಮತ್ತು ಇತರ ತಂಡಗಳು ರಕ್ಷಣೆಗಾಗಿ ಇಲ್ಲಿವೆ. ನಾಗರಿಕ ಪ್ರದೇಶಕ್ಕೆ ಯಾವುದೇ ತೊಂದರೆಯಾಗಿಲ್ಲ. ವಿಮಾನವು ತೆರೆದ ಮೈದಾನದಲ್ಲಿ ಪತನಗೊಂಡಿದೆ ಎಂದು ಹೇಳಿದರು.

ವಾಯುಪಡೆಯ ಜಾಗ್ವಾರ್ ತರಬೇತಿ ವಿಮಾನದಲ್ಲಿ ಜಾಮ್ನಗರದ ಎಸ್‌ಪಿ ಪ್ರೇಮ್ ಸುಖ್ ದೇಲು, ಇಬ್ಬರು ಪೈಲಟ್‌ಗಳಿದ್ದರು. ಒಬ್ಬರನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇನ್ನೊಬ್ಬ ಪೈಲಟ್ ಅನ್ನು ರಕ್ಷಿಸಲು ಕಾರ್ಯಾಚರಣೆ ನಡೆಯುತ್ತಿದೆ ಎಂದು ಮಾಹಿತಿ ಲಭ್ಯವಾಗಿದೆ.

You cannot copy content of this page

Exit mobile version