ಸ್ಪೇನ್ ವಿರುದ್ಧ 2-1 ಅಂತರದಲ್ಲಿ ಜಯ ಸಾಧಿಸುವ ಮೂಲಕ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಪುರುಷರ ಹಾಕಿ ತಂಡ ಕಂಚು ಗೆದ್ದಿದೆ.
2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ನಂತರ ಭಾರತೀಯ ಪುರುಷರ ಹಾಕಿ ತಂಡ ಸತತ ಎರಡನೇ ಬಾರಿಗೆ ಕಂಚು ಗೆದ್ದಿದೆ.
ಮಂಗಳವಾರ (06.08.2024) ನಡೆದ ಸೆಮಿಫೈನಲ್ ಪಂದ್ಯದಲ್ಲಿ ಜರ್ಮನಿ ವಿರುದ್ಧ ಸೋತ ಭಾರತ ತಂಡ ಕಂಚಿಗಾಗಿ ಗುರುವಾರ (08.08.2024) ಸ್ಪೇನ್ ವಿರುದ್ಧ ಆಡಿತು
ಹಾಕಿ ವಿಶ್ವ ರ‍್ಯಾಂಕಿಂಗ್‌ನಲ್ಲಿ ಭಾರತ ಐದನೇ ಸ್ಥಾನದಲ್ಲಿದ್ದರೆ, ಸ್ಪೇನ್ 8ನೇ ಸ್ಥಾನದಲ್ಲಿದೆ.
ಕಂಚಿನ ಪದಕಕ್ಕಾಗಿ ಭಾರತದೊಂದಿಗೆ ಸ್ಪರ್ಧಿಸಿದ ಸ್ಪೇನ್ ತನ್ನ ಸೆಮಿಫೈನಲ್ ಪಂದ್ಯವನ್ನು ನೆದರ್ಲ್ಯಾಂಡ್ಸ್ ವಿರುದ್ಧ 0-4 ಅಂತರದಿಂದ ಕಳೆದುಕೊಂಡಿತು.
ಹರ್ಮನ್‌ಪ್ರೀತ್ ಸಿಂಗ್ ನಾಯಕತ್ವದ ಭಾರತೀಯ ಪುರುಷರ ಹಾಕಿ ತಂಡವು ಕ್ವಾರ್ಟರ್ಸ್ ಫೈನಲಿನಲ್ಲಿ ಬ್ರಿಟನ್ ದೇಶವನ್ನು ಸೋಲಿಸಿ ಸೆಮಿಫೈನಲ್ ತಲುಪಿತ್ತು.
ಮೊದಲಿಗೆ ಭಾರತ ತಂಡ ಫೈನಲ್ ತಲುಪಿ ಬೆಳ್ಳಿ ಅಥವಾ ಚಿನ್ನ ಗೆಲ್ಲುವ ಭರವಸೆಯಲ್ಲಿತ್ತು. ಆದರೆ, ಸೆಮಿಫೈನಲ್‌ನಲ್ಲಿ ಜರ್ಮನಿ ವಿರುದ್ಧ ಸೋತಿದ್ದರಿಂದ ಆ ಅವಕಾಶ ಕೈತಪ್ಪಿತು.
ಭಾರತೀಯ ಪುರುಷರ ಹಾಕಿ ತಂಡ:
ಹರ್ಮನ್‌ಪ್ರೀತ್ ಸಿಂಗ್ (ನಾಯಕ), ಶ್ರೀಜೇಶ್ (ಗೋಲ್‌ಕೀಪರ್), ಸಂಜಯ್, ಸುಮಿತ್, ಮನ್‌ದೀಪ್ ಸಿಂಗ್, ಅಭಿಷೇಕ್ ನಯನ್, ಮನ್‌ಪ್ರೀತ್ ಸಿಂಗ್, ಲಲಿತ್ ಉಪಾಧ್ಯಾಯ, ಹಾರ್ದಿಕ್ ಸಿಂಗ್, ಸುಖಜೀತ್ ಸಿಂಗ್, ವಿವೇಕ್ ಪ್ರಸಾದ್, ಅಮಿತ್ ರೋಹಿದಾಸ್, ಶಂಶೇರ್ ಸಿಂಗ್, ರಾಜ್ ಕುಮಾರ್ ಪಾಲ್, ಜರ್ಮನ್‌ಪ್ರೀತ್ ಸಿಂಗ್, ಗುರ್ಜಂತ್ ಸಿಂಗ್.