Friday, April 11, 2025

ಸತ್ಯ | ನ್ಯಾಯ |ಧರ್ಮ

ವೇಶ್ಯಾಗೃಹಗಳೊಂದಿಗೆ ಸಂಪರ್ಕ: ಅಮೇರಿಕದಲ್ಲಿ ಭಾರತ ಮೂಲದ ಸಿಇಒ ಬಂಧನ

ವಾಷಿಂಗ್ಟನ್, ಏಪ್ರಿಲ್ 10: ಭಾರತೀಯ ಮೂಲದ ಶುದ್ಧ ನೀರಿನ ಸ್ಟಾರ್ಟ್ಅಪ್‌ನ ಸಿಇಒ ಅನುರಾಗ್ ಬಾಜಪೇಯಿ ಎನ್ನುವ ವ್ಯಕ್ತಿಯನ್ನು ಅಮೆರಿಕ ಪೊಲೀಸರು ಬಂಧಿಸಿದ್ದಾರೆ.

ಆತನ ವಿರುದ್ಧ ಪ್ರಕರಣ ದಾಖಲಿಸಿದ ಅಧಿಕಾರಿಗಳು, ಅಮೆರಿಕದಲ್ಲಿರುವ ಉನ್ನತ ದರ್ಜೆಯ ವೇಶ್ಯಾಗೃಹಗಳೊಂದಿಗೆ ಆತನಿಗೆ ಸಂಪರ್ಕವಿದೆ ಎಂದು ಆರೋಪಿಸಿದ್ದಾರೆ. ವೇಶ್ಯಾಗೃಹಗಳಲ್ಲಿ ಗಂಟೆಗೊಮ್ಮೆ ಲೈಂಗಿಕ ಸೇವೆಗಳನ್ನು ಪಡೆಯಲು ನೋಂದಾಯಿಸಿಕೊಂಡ ದುಬಾರಿ ವ್ಯಕ್ತಿಗಳಲ್ಲಿ ಬಾಜಪೇಯಿ ಕೂಡ ಒಬ್ಬ ಎಂದು ನ್ಯೂಯಾರ್ಕ್ ಪೋಸ್ಟ್ ಪತ್ರಿಕೆಯ ಲೇಖನವೊಂದು ಹೇಳಿದೆ.

ಬಾಜಪೇಯಿ ವಕೀಲರು, ಉನ್ನತ ಅಧಿಕಾರಿಗಳು, ವೈದ್ಯರು ಮತ್ತು ಸರ್ಕಾರಿ ಗುತ್ತಿಗೆದಾರರನ್ನು ಒಳಗೊಂಡ ವಿಶೇಷ ಕಕ್ಷಿದಾರ ಗುಂಪಿಗೆ ಸೇರಿದವನು ಎಂದು ಪ್ರಾಸಿಕ್ಯೂಟರ್‌ಗಳು ಆರೋಪಿಸಿದ್ದಾರೆ.

ಬಾಜಪೇಯಿ ಮಾನವ ಕಳ್ಳಸಾಗಣೆಗೆ ಬಲಿಯಾದ ಮಹಿಳೆಯರೊಂದಿಗೆ, ಮುಖ್ಯವಾಗಿ ಏಷ್ಯನ್ನರ ಜೊತೆ ಸಮಯ ಕಳೆಯಲು ಗಂಟೆಗೆ $600 (ಸುಮಾರು ರೂ. 50,000) ಪಾವತಿಸುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page