Home ಬ್ರೇಕಿಂಗ್ ಸುದ್ದಿ ಭಾರತದ ಅತೀ ದೊಡ್ಡ ಪಪ್ಪು : ಟಿ-ಶರ್ಟ್‌ ಮೇಲೆ ಅಮಿತ್‌ ಶಾ ವ್ಯಂಗ್ಯ ಚಿತ್ರ

ಭಾರತದ ಅತೀ ದೊಡ್ಡ ಪಪ್ಪು : ಟಿ-ಶರ್ಟ್‌ ಮೇಲೆ ಅಮಿತ್‌ ಶಾ ವ್ಯಂಗ್ಯ ಚಿತ್ರ

0

ಕೋಲ್ಕತ್ತ: ತೃಣ ಮೂಲ ಕಾಂಗ್ರೆಸ್‌(ಟಿಎಂಸಿ) ತನ್ನ ಕಾರ್ಯಕರ್ತರಿಗೆ ವಿನ್ಯಾಸಗೊಳಿಸಿದ ಟಿ-ಶರ್ಟ್‌ ನಲ್ಲಿ ಕೇಂದ್ರ ಗೃಹ ಸಚಿವ ಶಾ ಅವರ ವ್ಯಂಗ್ಯಚಿತ್ರವನ್ನು ಬಿಡಿಸಿ ಟೀಕಿಸಿದೆ.

ಟಿ-ಶರ್ಟ್‌ನಲ್ಲಿ ಅಮಿತ್‌ ಶಾ ಅವರನ್ನು ವ್ಯಂಗ್ಯವಾಗಿ ಚಿತ್ರಿಸಲಾಗಿದ್ದು ಅದರ ಕೆಳಗಡೆ ʼಭಾರತದ ಅತೀ ದೊಡ್ಡ ಪಪ್ಪುʼ ಎಂದು ಬರೆದಿದೆ.

ಟಿಎಂಸಿ ಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭೀಷೇಕ್‌ ಬ್ಯಾನರ್ಜಿ ಅವರಿಂದ ಈ ರೀತಿಯ ಅಣಕ ಆರಂಭವಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಇದು ಜನಪ್ರಿಯವಾಗುತ್ತಿದಂತೆ, ಇದು ಟಿ-ಶರ್ಟ್‌ ರೂಪ ಪಡೆದಿದೆ. ಇದೀಗಾ ಆನ್‌ಲೈನ್‌ ನಲ್ಲಿಯೂ ಸಿಗುತ್ತದೆ ಎಂದು ಟಿಎಂಸಿ ರಾಜ್ಯಸಭಾ ನಾಯಕ ಡೆರೆಕ್‌ ಓಬ್ರಿಯಾನ್‌ ತಿಳಿಸಿದ್ದಾರೆ.

https://twitter.com/adi1191/status/1568181645026672645?t=9kChVCviRq8RND0yNGx-qw&s=19

You cannot copy content of this page

Exit mobile version