ಹೊಸದೆಹಲಿ: ಸದಾ ಟ್ರೋಲ್ ಮೆಟಿರಿಯಲ್ ಪ್ರೊವೈಡರ್ ರೀತಿ ವರ್ತಿಸುವ ಮಂಡಿ ಬಿಜೆಪಿ ಸಂಸದೆ ಕಂಗನಾ ರಣಾವತ್ ಸಂದರ್ಶನವೊಂದರಲ್ಲಿ ಎಡವಿ ಮತ್ತೊಮ್ಮೆ ಟ್ರೋಲ್ ಆಗಿದ್ದಾರೆ. ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ದೇಶದ ಮೊದಲ ದಲಿತ ರಾಷ್ಟ್ರಪತಿ ಎಂದು ಕಂಗನಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಇದಲ್ಲದೆ, ಅವರು ರಾಮ್ ನಾಥ್ ಕೋವಿಂದ್ ಅವರ ಹೆಸರನ್ನು ‘ರಾಮ್ ಕೋವಿಡ್’ ಎಂದು ಹೇಳಿದ್ದರಿಂದ ಟ್ರೋಲರ್ಗಳು ಸಾಮಾಜಿಕ ಜಾಲತಾಣದಲ್ಲಿ ಕಂಗನಾ ಮಾತನಾಡುತ್ತಿರುವ ವಿಡಿಯೋ ಕ್ಲಿಪ್ ಬಳಸಿಕೊಂಡು ಮೀಮ್ಗಳ ಸುರಿಮಳೆಯನ್ನೇ ಹರಿಸಿದರು.
ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಜಾತಿ ಗಣತಿ ವಿಚಾರವಾಗಿ ಮಾತನಾಡುತ್ತಾ ಅವರು ಈ ಹೇಳಿಕೆ ನೀಡಿಡಿದ್ದಾರೆ. ಆದರೆ ದೇಶದ ಮೊದಲ ದಲಿತ ರಾಷ್ಟ್ರಪತಿ ಕೆ.ಆರ್.ನಾರಾಯಣನ್ ಎಂದು ಆಂಕರ್ ತಿದ್ದಿಕೊಂಡ ತಕ್ಷಣ ತನ್ನ ತಪ್ಪನ್ನು ಒಪ್ಪಿಕೊಂಡು ಸುಮ್ಮನಾದರು.