Home ದೇಶ ‘ಮೆಗಾಸ್ಟಾರ್’ ಮೋಹನ್ ಲಾಲ್ ಒಬ್ಬ ಹೇಡಿʼ: ನಾಯಕ ನಟಿ ಪಾರ್ವತಿ ಕಿಡಿ

‘ಮೆಗಾಸ್ಟಾರ್’ ಮೋಹನ್ ಲಾಲ್ ಒಬ್ಬ ಹೇಡಿʼ: ನಾಯಕ ನಟಿ ಪಾರ್ವತಿ ಕಿಡಿ

0

ಮಲಯಾಳಂ ಚಿತ್ರರಂಗದಲ್ಲಿ ನಟಿಯರು ಎದುರಿಸುತ್ತಿರುವ ಸಂಕಷ್ಟದ ಸನ್ನಿವೇಶಗಳ ಕುರಿತು ‘ನ್ಯಾಯಮೂರ್ತಿ ಹೇಮಾ ಸಮಿತಿ’ ವರದಿ ಸಲ್ಲಿಕೆಯಾದ ನಂತರ ಮಲಯಾಳಂ ಚಿತ್ರರಂಗದಲ್ಲಿ ಎದ್ದಿರುವ ಅಲೆಗಳು ಸದ್ಯಕ್ಕೆ ತಣ್ಣಗಾಗುವ ಹಾಗೆ ಕಾಣುತ್ತಿಲ್ಲ.

ಹೇಮಾ ಸಮಿತಿ ಸಿದ್ಧಪಡಿಸಿರುವ ವರದಿಯಲ್ಲಿ ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ಚಿತ್ರರಂಗದ ಕೆಲವು ಸೆಲೆಬ್ರಿಟಿಗಳು ನಟಿಯರನ್ನು ಆಟಿಕೆಗಳಂತೆ ಪರಿಗಣಿಸುತ್ತಾರೆ ಎಂದು ಹೇಳಲಾಗಿದೆ. ಹೇಮಾ ಕಮಿಟಿ ವರದಿಯ ನಂತರ ಅನೇಕ ನಟಿಯರು ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡಲು ಪ್ರಾರಂಭಿಸಿದರು. ಇಡೀ ಭಾರತೀಯ ಚಿತ್ರರಂಗ ಈಗ ಇದರ ಬಗ್ಗೆ ಮಾತನಾಡುತ್ತಿದೆ.

ಹೇಮಾ ಸಮಿತಿ ವರದಿ ಜಾರಿಯಲ್ಲಿರುವಾಗಲೇ ಜನಪ್ರಿಯ ನಟ ಹಾಗೂ ಮೆಗಾಸ್ಟಾರ್ ಮೋಹನ್ ಲಾಲ್ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (ಅಮ್ಮ) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರೊಂದಿಗೆ 17 ಸದಸ್ಯರು ರಾಜೀನಾಮೆ ಸಲ್ಲಿಸಿದರು. ಗುಂಪು ರಾಜೀನಾಮೆ ನಿರ್ಧಾರದ ಬಗ್ಗೆ ನಾಯಕಿ ಪಾರ್ವತಿ ಪ್ರತಿಕ್ರಿಯಿಸಿದ್ದಾರೆ. ಅಮ್ಮಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಹೇಡಿತನದ ಕೆಲಸ ಎಂದು ಪಾರ್ವತಿ ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಪಾರ್ವತಿ ಹೇಳಿದ್ದು ಹೀಗೆ… ‘ಮೊದಲು ಈ ಸುದ್ದಿ ಕೇಳಿದಾಗ ನನಗೆ ಆಘಾತವಾಯಿತು. ಇದು ಎಷ್ಟು ಹೇಡಿತನ. ಮಾಧ್ಯಮಗಳಿಗೆ ವಿಷಯ ವಿವರಿಸುವ ಸ್ಥಿತಿಯಲ್ಲಿರುವವರು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಹೇಡಿತನ. ರಾಜೀನಾಮೆ ನೀಡುವ ಬದಲು ಸರ್ಕಾರದೊಂದಿಗೆ ಕೆಲಸ ಮಾಡಿದ್ದರೆ ಅದ್ಭುತವಾಗಿರುತ್ತಿತ್ತು. ನಾನು ಅಮ್ಮ ಸಂಘಟನೆಯ ಭಾಗವಾಗಿದ್ದೆ. ಅವರು ಹೇಗೆ ಕೆಲಸ ಮಾಡುತ್ತಾರೆ ಎಂಬುದನ್ನು ನಾನು ನೋಡಿದ್ದೇನೆ. ನಾನು ಸಂಘಕ್ಕೆ ರಾಜೀನಾಮೆ ಕೊಡಲು ಕಾರಣವಿದೆ. ಮಹಿಳೆಯರ ಅಗತ್ಯಗಳ ಬಗ್ಗೆ ಮಾತನಾಡುವ ಹಕ್ಕು ನಟಿಯರಿಗೆ ಇಲ್ಲ. ಸಮಾಜಕ್ಕೆ ಈಗ ಎಲ್ಲವೂ ತಿಳಿದಿದೆ. ಈ ಪರಿಸ್ಥಿತಿಯನ್ನು ಬದಲಾಯಿಸಲು ಉತ್ತಮ ನಾಯಕತ್ವದ ಅಗತ್ಯವಿದೆ. ಮುಂದಿನ ದಿನಗಳಲ್ಲಿಯಾದರೂ ಉತ್ತಮ ನಾಯಕನನ್ನು ಎಲ್ಲರೂ ಆಯ್ಕೆ ಮಾಡಬೇಕು. ಆಗ ಮಾತ್ರ ಉದ್ಯಮ ಚೆನ್ನಾಗಿರುತ್ತದೆ’ ಎಂದು ಅವರು ಹೇಳಿದ್ದಾರೆ.

You cannot copy content of this page

Exit mobile version